ಸಿನಿಮಾ ನಿರ್ಮಾಣಕ್ಕೆ 25 ಕೋಟಿ, ಪ್ರಚಾರಕ್ಕೆ ಬೇಕು 100 ಕೋಟಿ: ಕೊಡ್ತಾರಾ ಕರಣ್ ಜೋಹರ್?

Homebound movie: ಸಿನಿಮಾಕ್ಕೆ 100 ಕೋಟಿ ಖರ್ಚು ಮಾಡಿದ್ದರೆ ಪ್ರಚಾರಕ್ಕೆ ಕನಿಷ್ಟ 15 ರಿಂದ 25 ಖರ್ಚು ಮಾಡಬೇಕು. ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲದಲ್ಲಿ ಪ್ರಚಾರಕ್ಕೆ ಹೆಚ್ಚಿನ ಮೊತ್ತವೇ ಬೇಕಿದೆ. ಎಷ್ಟೋ ಸಿನಿಮಾಗಳು ಪ್ರಚಾರದಿಂದಲೇ ಗೆದ್ದ ಉದಾಹರಣೆಯೂ ಇದೆ. ಆದರೆ ಇಲ್ಲೊಂದು ಸಿನಿಮಾ ನಿರ್ಮಾಣಕ್ಕೆ 25 ಕೋಟಿ ಖರ್ಚು ಮಾಡಲಾಗಿದೆ. ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಸುಮಾರು ಐದಾರು ಕೋಟಿ ಗಳಿಕೆ ಮಾಡಿದೆ. ಆದರೆ ಈಗ ಸಿನಿಮಾದ ಪ್ರಚಾರಕ್ಕೆ ಸುಮಾರು 100 ಕೋಟಿ ವೆಚ್ಚವಾಗುತ್ತಿದೆ.

ಸಿನಿಮಾ ನಿರ್ಮಾಣಕ್ಕೆ 25 ಕೋಟಿ, ಪ್ರಚಾರಕ್ಕೆ ಬೇಕು 100 ಕೋಟಿ: ಕೊಡ್ತಾರಾ ಕರಣ್ ಜೋಹರ್?
Homebound

Updated on: Nov 30, 2025 | 6:22 PM

ಸಿನಿಮಾ (Cinema) ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಲಾಗುತ್ತದೆಯೋ ಅದರ 25 ಶೇಕಡಾ ಹಣವನ್ನು ಪ್ರಚಾರಕ್ಕೆ ಖರ್ಚು ಮಾಡಲಾಗುತ್ತದೆ. ಇದು ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಸೂತ್ರ. ಸಿನಿಮಾಕ್ಕೆ 100 ಕೋಟಿ ಖರ್ಚು ಮಾಡಿದ್ದರೆ ಪ್ರಚಾರಕ್ಕೆ ಕನಿಷ್ಟ 15 ರಿಂದ 25 ಖರ್ಚು ಮಾಡಬೇಕು. ಪ್ಯಾನ್ ಇಂಡಿಯಾ ಸಿನಿಮಾಗಳ ಕಾಲದಲ್ಲಿ ಪ್ರಚಾರಕ್ಕೆ ಹೆಚ್ಚಿನ ಮೊತ್ತವೇ ಬೇಕಿದೆ. ಎಷ್ಟೋ ಸಿನಿಮಾಗಳು ಪ್ರಚಾರದಿಂದಲೇ ಗೆದ್ದ ಉದಾಹರಣೆಯೂ ಇದೆ. ಆದರೆ ಇಲ್ಲೊಂದು ಸಿನಿಮಾ ನಿರ್ಮಾಣಕ್ಕೆ 25 ಕೋಟಿ ಖರ್ಚು ಮಾಡಲಾಗಿದೆ. ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಸುಮಾರು ಐದಾರು ಕೋಟಿ ಗಳಿಕೆ ಮಾಡಿದೆ. ಆದರೆ ಈಗ ಸಿನಿಮಾದ ಪ್ರಚಾರಕ್ಕೆ ಸುಮಾರು 100 ಕೋಟಿ ವೆಚ್ಚವಾಗುತ್ತಿದೆ.

ಕರಣ್ ಜೋಹರ್, ಅಧಾರ್ ಪೂನಾವಾಲ ಸೇರಿದಂತೆ ಇನ್ನೂ ಕೆಲವರು ಸೇರಿ ನಿರ್ಮಾಣ ಮಾಡಿರುವ ‘ಹೋಮ್​​ಬೌಂಡ್’ ಸಿನಿಮಾ ಸೆಪ್ಟೆಂಬರ್ 26 ರಂದು ಭಾರತದಲ್ಲಿ ಬಿಡುಗಡೆ ಆಯ್ತು. ಭಾರತದ ಹಲೆವೆಡೆ ಆಚರಿಸಲಾಗುತ್ತಿರುವ ಜಾತಿ ತಾರತಮ್ಯ, ಧರ್ಮ ತಾರತಮ್ಯ, ಲಿಂಗ ತಾರತಮ್ಯಗಳ ಇರಿಸಿ ಮಾಡಿದ ಸಿನಿಮಾ ಇದಾಗಿದ್ದು, ಕಮರ್ಶಿಯಲ್ ಅಲ್ಲದ, ಕಲಾತ್ಮಕ ಸಿನಿಮಾ ಇದಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾ ಸುಮಾರು ಐದಾರು ಕೋಟಿ ಹಣವನ್ನಷ್ಟೆ ಗಳಿಕೆ ಮಾಡಿದೆ. ಸಿನಿಮಾ ಒಟಿಟಿಗೂ ಬಂದಿದ್ದಾಗಿದೆ. ಆದರೆ ಇದೀಗ ಸಿನಿಮಾದ ಪ್ರಚಾರಕ್ಕೆ ಸುಮಾರು 100 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ. ಆದರೆ ಕರಣ್ ಜೋಹರ್, ಅಧಾರ್ ಪೂನಾವಾಲ ಹಾಗೂ ಇನ್ನಿತರರು ಹಣ ನೀಡಬಲ್ಲರೆ?

‘ಹೋಮ್​​ಬೌಂಡ್’ ಸಿನಿಮಾ ಭಾರತದಿಂದ ಆಸ್ಕರ್​​ಗೆ ಅಧಿಕೃತವಾಗಿ ಆಯ್ಕೆ ಆಗಿರುವ ಸಿನಿಮಾ ಆಗಿದೆ. ಆಸ್ಕರ್​​ನ ವಿದೇಶಿ ಭಾಷಾ ವಿಭಾಗದಲ್ಲಿ ಈ ಸಿನಿಮಾ ಸ್ಪರ್ಧೆ ಮಾಡುತ್ತಿದೆ. ಆಸ್ಕರ್​​ ರೇಸಿನ ಮೊದಲ ಹಂತವನ್ನು ದಾಟಿರುವ ಈ ಸಿನಿಮಾ ಈಗಾಗಲೇ 100 ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಿದೆ. ಆದರೆ ನಿಜವಾದ ಪರೀಕ್ಷೆ ಇಲ್ಲಿಂದ ಶುರುವಾಗುತ್ತದೆ. ಈಗ ‘ಹೋಮ್​​ಬೌಂಡ್’ ಸಿನಿಮಾಕ್ಕೆ ಮುಂದಿನ ಹಂತಕ್ಕೆ ಹೋಗಲು ಭಾರಿ ಹಣದ ಅವಶ್ಯಕತೆ ಇದೆ.

ಇದನ್ನೂ ಓದಿ:ಸಿನಿಮಾ ಪ್ರಚಾರಕ್ಕೆ ಹಾಲಿವುಡ್​​ಗೆ ತೆರಳಲಿರುವ ಜಾನ್ಹವಿ ಕಪೂರ್: ಸಿನಿಮಾ ಯಾವುದು?

ಆಸ್ಕರ್ ಪ್ರಶಸ್ತಿಯು ಅಮೆರಿಕದ ಚುನಾವಣೆ ಪ್ರಚಾರದಂತೆಯೇ ಬಲು ಜೋರು ಮತ್ತು ಬಹಳ ಖರ್ಚುದಾಯಕವಾದುದು ಸಹ. ಆಸ್ಕರ್​​ ರೇಸಿನಲ್ಲಿರುವ ಸಿನಿಮಾಗಳಿಗೆ ವಿಶೇಷ ಸ್ಕ್ರೀನಿಂಗ್​​ಗಳನ್ನು ಆಯೋಜಿಸಬೇಕಾಗುತ್ತದೆ. ಸಿನಿಮಾಕ್ಕೆ ಮತ ಚಲಾಯಿಸುವವರನ್ನು ಕರೆಸಬೇಕಾಗುತ್ತದೆ. ಅವರ ಆತಿಥ್ಯ ವಹಿಸಬೇಕಾಗುತ್ತದೆ. ಸಿನಿಮಾದ ಬಗ್ಗೆ ಜೋರು ಪ್ರಚಾರ, ಪ್ರಸಾರ ಮಾಡಬೇಕಾಗುತ್ತದೆ. ಜಾಹೀರಾತುಗಳನ್ನು ನೀಡಬೇಕಾಗುತ್ತದೆ. ಹಲವಾರು ವಿಶೇಷ ಸ್ಕ್ರೀನಿಂಗ್​​ಗಳನ್ನು, ಸಂವಾದಗಳನ್ನು ಆಯೋಜನೆ ಮಾಡಬೇಕಾಗುತ್ತದೆ. ಹಾಲಿವುಡ್​​ನ ಖ್ಯಾತ ನಾಮ ನಿರ್ದೇಶಕರನ್ನು, ವಿಮರ್ಶಕರನ್ನು, ನಟ, ನಿರ್ಮಾಪಕರನ್ನು ತಮ್ಮ ಸಿನಿಮಾದ ಶೋಗೆ ಕರೆಸಿ, ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿಸಬೇಕಾಗುತ್ತದೆ. ಇದಕ್ಕೆಲ್ಲ ಲಕ್ಷಾಂತರ ಡಾಲರುಗಳು ಖರ್ಚಾಗುತ್ತವೆ.

‘ವಿಸಾರನೈ’ ಸಿನಿಮಾ ಆಸ್ಕರ್​​ಗೆ ಅಧಿಕೃತವಾಗಿ ಕಳಿಸಲ್ಪಟ್ಟಾಗ ವೆಟ್ರಿಮಾರನ್ ಅವರು ಅಮೆರಿಕಕ್ಕೆ ಪ್ರಚಾರಕ್ಕೆ ಹೋಗಿದ್ದರು. ಅವರು ಹೇಳಿದ ಪ್ರಕಾರ, ಆಸ್ಕರ್ ನ ಕೊನೆಯ ಹಂತವನ್ನು ತಲುಪಲು ಸಹ ನಿಮ್ಮ ಬಳಿ ನೂರಾರು ಕೋಟಿ ಹಣ ಇರಬೇಕಾಗುತ್ತದೆ ಎಂದು. ಅಷ್ಟೆಲ್ಲ ಇದ್ದರೂ ಸಹ ಸಿನಿಮಾ ಕೊನೆಯ ಹಂತದ ವರೆಗೆ ಹೋಗುತ್ತದೆ ಎಂಬ ಗ್ಯಾರೆಂಟಿ ಇರುವುದಿಲ್ಲ ಎಂದಿದ್ದರು. ಈಗ ‘ಹೋಮ್​​ಬೌಂಡ್’ ಸಿನಿಮಾ ಆಸ್ಕರ್​​ಗೆ ಹೋಗಿದೆ. ಈ ಸಿನಿಮಾದ ಆಸ್ಕರ್ ಪ್ರಚಾರಕ್ಕೂ ಸಹ ಲಕ್ಷಾಂತರ ಡಾಲರು ಹಣದ ಅವಶ್ಯಕತೆ ಇದೆ. ಸಿನಿಮಾದ ನಿರ್ಮಾಪಕರು ಇಷ್ಟೆಲ್ಲ ಹಣ ಕೊಡುತ್ತಾರೆಯೇ ಇಲ್ಲವೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Sun, 30 November 25