AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆ ಮೇಲೆ, ಬಾಕ್ಸ್ ಆಫೀಸ್​ನಲ್ಲಿ ಎರಡೂ ಕಡೆ ಯಶ್-ರಣ್​ಬೀರ್ ಮುಖಾ-ಮುಖಿ

Yash v/s Ranbir Kapoor: ಯಶ್ ಹಾಗೂ ರಣ್ಬೀರ್ ಕಪೂರ್ ರಾಮಾಯಣ ಕತೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಯಶ್ ರಾವಣ, ರಣ್​ಬೀರ್ ರಾಮ. ತೆರೆಯ ಮೇಲೆ ಇಬ್ಬರು ಮುಖಾ-ಮುಖಿ ಆಗಲಿದ್ದಾರೆ. ವಿಶೇಷವೆಂದರೆ ತೆರೆಯ ಮೇಲೆ ಮಾತ್ರವಲ್ಲದೆ ಬಾಕ್ಸ್ ಆಫೀಸ್​ನಲ್ಲಿಯೂ ಈ ಇಬ್ಬರು ಎದುರು-ಬದುರಾಗಲಿದ್ದಾರೆ.

ತೆರೆ ಮೇಲೆ, ಬಾಕ್ಸ್ ಆಫೀಸ್​ನಲ್ಲಿ ಎರಡೂ ಕಡೆ ಯಶ್-ರಣ್​ಬೀರ್ ಮುಖಾ-ಮುಖಿ
Yash
ಮಂಜುನಾಥ ಸಿ.
|

Updated on: May 09, 2025 | 11:50 AM

Share

ನಟ ಯಶ್ (Yash) ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್, ನಟ ರಣ್​ಬೀರ್ ಕಪೂರ್ ಸಹ ದೇಶದ ಯುವ ಸೂಪರ್ ಸ್ಟಾರ್. ಈ ಇಬ್ಬರು ನಟರು ಪರಸ್ಪರ ಎದುರಾಳಿ ಆಗುತ್ತಿದ್ದಾರೆ. ವಿಶೇಷವೆಂದರೆ ಸಿನಿಮಾದ ಒಳಗೆ ಹಾಗೂ ಬಾಕ್ಸ್ ಆಫೀಸ್​ನಲ್ಲೂ ಸಹ ಈ ಇಬ್ಬರು ಪರಸ್ಪರ ಮುಖಾ-ಮುಖಿ ಆಗಲಿದ್ದಾರೆ. ಇಬ್ಬರಲ್ಲಿ ಗೆಲುವು ಯಾರಿಗೆ ಧಕ್ಕಲಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಅಂದಹಾಗೆ ನಟ ಯಶ್ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವುದು ಗೊತ್ತಿರುವ ಸಂಗತಿಯೇ ಈ ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ಬಿಡುಗಡೆ ಆಗಲಿದೆಯೆಂದು ಘೋಷಣೆ ಆಗಿದೆ. ‘ಟಾಕ್ಸಿಕ್’ ಜೊತೆಗೆ ಯಶ್ ‘ರಾಮಾಯಣ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದು ಭಾರತದ ಈ ವರೆಗೆ ಬಲು ದೊಡ್ಡ ಬಜೆಟ್​ನ ಸಿನಿಮಾ ಆಗಿದೆ. ಸಿನಿಮಾನಲ್ಲಿ ರಣ್​ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ರಾಮಾಯಣ’ ಕತೆ ಆಧರಿಸಿದ ಸಿನಿಮಾದಲ್ಲಿ ಯಶ್, ರಾವಣನ ಪಾತ್ರದಲ್ಲಿ ನಟಿಸುತ್ತಿದ್ದು, ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಪರಸ್ಪರ ಎದುರಾಳಿಯಾಗಿದ್ದಾರೆ. ಸಿನಿಮಾನಲ್ಲಿ ಅಂತಿಮ ಗೆಲುವು ರಣ್​ಬೀರ್ ಕಪೂರ್ ಅವರದ್ದೇ ಆಗಲಿದೆ. ವಿಶೇಷವೆಂದರೆ ಈ ಇಬ್ಬರು ಬಾಕ್ಸ್ ಆಫೀಸ್​ನಲ್ಲೂ ಸಹ ಎದುರು-ಬದುರಾಗಲಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ದಿನದಂದೇ ರಣ್​ಬೀರ್ ಕಪೂರ್ ನಟಿಸಲಿರುವ ‘ಲವ್ ಆಂಡ್ ವಾರ್’ ಸಿನಿಮಾ ಸಹ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಯಶ್ ಬಾಲಿವುಡ್ ಸಿನಿಮಾಕ್ಕೆ ಮಹಾರಾಷ್ಟ್ರ ಸಿಎಂ ಮೆಚ್ಚುಗೆ

ರಣ್​ಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟಿಸಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿರುವ ‘ಲವ್ ಆಂಡ್ ವಾರ್’ ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದ್ದು, ಈ ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ಬಿಡುಗಡೆ ಆಗಲಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದೆ. ಆ ಮೂಲಕ ರಣ್​ಬೀರ್ ಕಪೂರ್ ಮತ್ತು ಯಶ್ ಪರಸ್ಪರ ಬಾಕ್ಸ್ ಆಫೀಸ್​ನಲ್ಲಿ ಎದುರು-ಬದುರಾಗಲಿದ್ದಾರೆ.

ಈ ಹಿಂದೆ ‘ಕೆಜಿಎಫ್’ ಸಿನಿಮಾಕ್ಕೆ ಶಾರುಖ್ ಖಾನ್ ಸಿನಿಮಾ ಎದುರಾಳಿಯಾಗಿತ್ತು. ಆ ಸಿನಿಮಾ ಆಗ ತೋಪಾಯ್ತು. ಆ ಬಳಿಕ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸಹ ‘ಕೆಜಿಎಫ್ 2’ ಎದುರಾಗಲಿತ್ತು ಆದರೆ ಆ ಬಳಿಕ ಸಿನಿಮಾದ ಬಿಡುಗಡೆ ಮುಂದೂಡಲಾಯ್ತು. ಹಾಗಿದ್ದರೂ ಸಹ ‘ಲಾಲ್ ಸಿಂಗ್ ಚಡ್ಡಾ’ ಫ್ಲಾಪ್ ಆಯ್ತು. ಈಗ ರಣ್​ಬೀರ್ ಕಪೂರ್, ಯಶ್​ಗೆ ಎದುರಾಳಿಯಾಗಿ ಬರಲಿದ್ದಾರೆ. ಅವರಿಗೂ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಯಶ್​ ಅಭಿಮಾನಿಗಳ ನಂಬಿಕೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ