ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ (Arjun Kapoor) ಬೇರೆ ಆಗುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇಬ್ಬರ ಪ್ರೀತಿ ಮುರಿದು ಬಿತ್ತು ಎಂದು ಎಲ್ಲರೂ ಮಾತನಾಡಿಕೊಂಡರು. ಹೀಗಿರುವಾಗಲೇ ಮುಂಬೈ ಬೀದಿಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು. ಆದರೆ, ಈ ವಿಚಾರ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಮಲೈಕಾ ಮಾಡಿರುವ ಹೊಸ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಮೂಲಕ ಮತ್ತೆ ಬ್ರೇಕಪ್ ವಿಚಾರ ಮುನ್ನೆಲೆಗೆ ಬಂದಿದೆ.
ಮಲೈಕಾ ಅರೋರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಫೋಟೋ ಹಾಗೂ ಸ್ಟೇಟಸ್ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಮಲೈಕಾ ಅವರ ಹೊಸ ಸ್ಟೇಟಸ್ ಗಮನ ಸೆಳೆಯುತ್ತಿದೆ. ಅವರು ತುಂಬಾನೇ ನಿಗೂಢಾರ್ಥ ಇರುವ ರೀತಿಯಲ್ಲಿ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.
‘ಮಹಿಳೆ ನೀವು ಅವಳನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಪ್ರತಿಬಿಂಬ ಆಗುತ್ತಾಳೆ. ಅವಳು ವರ್ತಿಸುತ್ತಿರುವುದು ನಿಮಗೆ ಇಷ್ಟವಾಗದಿದ್ದರೆ, ನೀವು ಅವಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ಎಂದು ನೋಡಿ’ ಎಂದು ಮಲೈಕಾ ಬರೆದುಕೊಂಡಿದ್ದಾರೆ. ಈ ಮೂಲಕ ಮಲೈಕಾ ಅರೋರಾ ಅವರನ್ನು ಅರ್ಜುನ್ ಕಪೂರ್ ಸರಿಯಾಗಿ ಟ್ರೀಟ್ ಮಾಡುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.
ಮಲೈಕಾ ಹಾಗೂ ಅರ್ಜುನ್ ಕಪೂರ್ ಸುತ್ತಾಟ ಆರಂಭಿಸಿ ಹಲವು ವರ್ಷಗಳೇ ಕಳೆದಿವೆ. ಮಲೈಕಾಗಿಂತ ಅರ್ಜುನ್ 12 ವರ್ಷ ಸಣ್ಣವರು. ಇವರ ಮಧ್ಯೆ ವಯಸ್ಸಿನ ಅಂತರ ಅಡ್ಡಿ ಆಗಿಲ್ಲ. ಆದರೆ, ಈಗ ಇವರ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ತಂಡದಿಂದ ಸ್ಪಷ್ಟನೆ ಸಿಗಬೇಕಿದೆ.
“Araam se” say’s Malaika Arora as she gets concerned for paps 😊#MalaikaArora #Bollywood #Bollywoodnews #lifestyle #entertainment #zoomnews #trending #fashion #photography #news #shorts pic.twitter.com/GH1yb3skt1
— Zoom News (@Zoom_News_India) September 4, 2023
ಇದನ್ನೂ ಓದಿ: ನಿಜವಾಯ್ತು ಬ್ರೇಕಪ್ ವಿಚಾರ? ಕಪೂರ್ ಕುಟುಂಬದವರನ್ನು ಅನ್ಫಾಲೋ ಮಾಡಿದ ಮಲೈಕಾ ಅರೋರಾ
ಮಲೈಕಾ ಅವರು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಕಾರಣದಿಂದಲೇ ಅವರ ವಯಸ್ಸು 49 ದಾಟಿದರೂ ಯುವತಿಯರನ್ನು ನಾಚಿಸುವಂತಿದ್ದಾರೆ. ಇತ್ತೀಚೆಗೆ ಅರ್ಜುನ್ ಕಪೂರ್ ಸೋಲೋ ಟ್ರಿಪ್ ತೆರಳಿದ್ದರು. ಇದರಿಂದ ಬ್ರೇಕಪ್ ವದಂತಿ ಹುಟ್ಟಿಕೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Tue, 5 September 23