ಬ್ರೇಕಪ್ ಸುದ್ದಿಗಳಿಗೆ ಬ್ರೇಕ್ ಹಾಕಿದ ಅರ್ಜುನ್ ಕಪೂರ್ ಮತ್ತು ಮಲೈಕಾ

Arjun-Malaika: ಅರ್ಜುನ್ ಕಪೂರ್-ಮಲೈಕಾ ಪರಸ್ಪರ ದೂರಾಗಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿರುವಾಗಲೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಬಗೆಗಿನ ಸುದ್ದಿಗಳನ್ನು ಸುಳ್ಳು ಮಾಡಿದ್ದಾರೆ.

ಬ್ರೇಕಪ್ ಸುದ್ದಿಗಳಿಗೆ ಬ್ರೇಕ್ ಹಾಕಿದ ಅರ್ಜುನ್ ಕಪೂರ್ ಮತ್ತು ಮಲೈಕಾ
ಮಲೈಕಾ-ಅರ್ಜುನ್
Follow us
ಮಂಜುನಾಥ ಸಿ.
|

Updated on: Aug 27, 2023 | 7:43 PM

ಮಲೈಕಾ ಅರೋರಾ (Malaika Arora) ಹಾಗೂ ಅರ್ಜುನ್ ಕಪೂರ್ (Arjun Kapoor) ಅವರದ್ದು ಬಾಲಿವುಡ್​ ಹೆಸರಾಂತ ಜೋಡಿಗಳಲ್ಲಿ ಒಂದು. ಅರ್ಜುನ್ ಹಾಗೂ ಮಲೈಕಾ ಜೋಡಿ ವಯಸ್ಸಿನ ಅಂತರದ ಕಾರಣಕ್ಕೆ ಸೇರಿದಂತೆ ಇನ್ನೂ ಕೆಲವು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಜೋಡಿ ಬ್ರೇಕಪ್ ಮಾಡಿಕೊಂಡು ದೂರಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಅರ್ಜುನ್ ಹಾಗೂ ಮಲೈಕಾ ಪರಸ್ಪರ ದೂರಾಗಿದ್ದು, ಅರ್ಜುನ್ ಕಪೂರ್ ಬೇರೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗಿತ್ತು, ಆದರೆ ಆ ಎಲ್ಲ ಸುದ್ದಿಗಳಿಗೂ ಪೂರ್ಣ ವಿರಾಮವನ್ನು ಅರ್ಜುನ್-ಮಲೈಕಾ ಇಟ್ಟಿದ್ದಾರೆ.

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕಳೆದ ಕೆಲವಾರು ವರ್ಷಗಳಿಂದಲೂ ಸಹಜೀವನ ನಡೆಸುತ್ತಿದ್ದಾರೆ. ಮಲೈಕಾ ಈ ಹಿಂದೆ ಸಲ್ಮಾನ್ ಖಾನ್​ರ ಸಹೋದರ ಅರ್ಬಾಜ್ ಖಾನ್ ಅನ್ನು ವಿವಾಹವಾಗಿದ್ದರು. ಅವರಿಂದ ಮಕ್ಕಳನ್ನೂ ಪಡೆದಿದ್ದರು. ಹಾಗಿದ್ದರೂ ಅರ್ಬಾಜ್​ಗೆ ವಿಚ್ಛೇದನ ನೀಡಿ ಅರ್ಜುನ್ ಕಪೂರ್ ಅನ್ನು ಮಲೈಕಾ ವಿವಾಹವಾಗಿದ್ದರು.

ಇತ್ತೀಚಿನ ಕೆಲ ದಿನಗಳಿಂದಲೂ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಪರಸ್ಪರ ದೂರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಮಲೈಕಾರಿಂದ ದೂರಾದ ಬಳಿಕ ಅರ್ಜುನ್ ಕಪೂರ್ ಯೂಟ್ಯೂಬರ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದು, ಅವರೊಟ್ಟಿಗೆ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು. ಆದರೆ ತಮ್ಮ ಬಗ್ಗೆ ಹರಿದಾಡುತ್ತಿರುವ ಎಲ್ಲ ಊಹಾಪೋಹಗಳಿಗೆ ಒಮ್ಮೆಲೆ ಪೂರ್ಣವಿರಾಮ ಇಟ್ಟಿದೆ ಈ ಜೋಡಿ.

ಇದನ್ನೂ ಓದಿ:ಅರ್ಜುನ್ ಕಪೂರ್ ಅರೆಬೆತ್ತಲೆ ಫೋಟೋನ ಮಲೈಕಾ ವೈರಲ್ ಮಾಡಿದ ಪ್ರಕರಣ; ತಿರುಗೇಟು ಕೊಟ್ಟ ನಟ

ಮುಂಬೈನಲ್ಲಿ ಒಟ್ಟಿಗೆ ಓಡಾಡಿದ್ದಾರೆ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್. ಇಬ್ಬರೂ ಒಟ್ಟಿಗೆ ರೆಸ್ಟೋರೆಂಟ್​ನಿಂದ ಹೊರಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಸುದ್ದಿಗಳು ಹರಿದಾಡುತ್ತಿರುವಾಗಲೇ ಪರಸ್ಪರ ಒಟ್ಟಿಗೆ ಕಾಣಿಸಿಕೊಂಡು ತಮ್ಮ ನಡುವೆ ಅಂಥಹದ್ದೇನಿಲ್ಲವೆಂದು, ತಾವಿಬ್ಬರೂ ಒಟ್ಟಿಗೆ ಚೆನ್ನಾಗಿದ್ದೇವೆಂದೂ ಸಾಬೀತುಪಡಿಸಿದ್ದಾರೆ.

ಮಲೈಕಾ ಅರೋರಾಗೆ ಪ್ರಸ್ತುತ 50 ವರ್ಷ ವಯಸ್ಸು, ನಟ ಅರ್ಜುನ್ ಕಪೂರ್​ ವಯಸ್ಸು 38 ವರ್ಷ. ಮಲೈಕಾ ಅರೋರಾಗೆ ಹದಿವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ದೂರಾದರು. ಆಗಿನಿಂದಲೂ ಅರ್ಜುನ್ ಕಪೂರ್ ಹಾಗೂ ಮಲೈಕಾ ಒಟ್ಟಿಗೆ ಬಾಳುತ್ತಿದ್ದಾರೆ. ಮಲೈಕಾ ಪ್ರಸ್ತುತ ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಆಗಿದ್ದಾರೆ. ಆಗಾಗ್ಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ