ಸೀರೆ ಉಟ್ಟು ತಿರುಪತಿಗೆ ಭೇಟಿ ಕೊಟ್ಟ ನಟಿ ಜಾನ್ವಿ ಕಪೂರ್; ‘ದೇವರ’ ಶೂಟಿಂಗ್ ಮುನ್ನ ದೇವರ ದರ್ಶನ
ಜಾನ್ವಿ ಕಪೂರ್ ಅವರು ಇಂದು (ಆಗಸ್ಟ್ 28) ಮುಂಜಾನೆ ತಿರುಮಲಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಕೆಲವರು ಪ್ರಯತ್ನಿಸಿದ್ದಾರೆ. ಆದರೆ, ಜಾನ್ವಿ ಬಾಡಿಗಾರ್ಡ್ಸ್ ಇದಕ್ಕೆ ಅವಕಾಶ ನೀಡಿಲ್ಲ. ದೇವರ ದರ್ಶನ ಪಡೆದ ಬಳಿಕ ಅವರು ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ.
ನಟಿ ಜಾನ್ವಿ ಕಪೂರ್ (Janhvi Kapoor) ಅವರು ಈಗ ಬಾಲಿವುಡ್ ಜೊತೆ ದಕ್ಷಿಣ ಭಾರತದಲ್ಲೂ ಬ್ಯುಸಿ ಆಗಿದ್ದಾರೆ. ಜೂನಿಯರ್ ಎನ್ಟಿಆರ್ (Jr NTR) ನಟನೆಯ ‘ದೇವರ’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ಗಾಗಿ ಅವರು ಆಗಾಗ ಹೈದರಾಬಾದ್ಗೆ ಬರುತ್ತಿರುತ್ತಾರೆ. ಈಗ ಅವರು ಬಿಡುವು ಮಾಡಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸೀರೆ ಉಟ್ಟು ಅವರು ತಿರುಪತಿಗೆ ತೆರಳಿದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋನ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಜಾನ್ವಿ ಕಪೂರ್ ತಾಯಿ ಶ್ರೀದೇವಿ ಅವರು ಬಾಲಿವುಡ್ ಜೊತೆಗೆ ದಕ್ಷಿಣ ಭಾರತದಲ್ಲೂ ಸಖತ್ ಫೇಮಸ್ ಆಗಿದ್ದರು. ಇಲ್ಲಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಜಾನ್ವಿ ಕೂಡ ತಾಯಿ ಸಾಗಿದ ಮಾರ್ಗದಲ್ಲೇ ಸಾಗುತ್ತಿದ್ದಾರೆ. ಅವರು ಕೂಡ ದಕ್ಷಿಣ ಭಾರತದಲ್ಲಿ ಬ್ಯುಸಿ ಆಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾದಲ್ಲಿ ಜಾನ್ವಿ ಅವರು ಬಣ್ಣ ಹಚ್ಚುತ್ತಿದ್ದಾರೆ.
ಜಾನ್ವಿ ಕಪೂರ್ ಅವರು ಇಂದು (ಆಗಸ್ಟ್ 28) ಮುಂಜಾನೆ ತಿರುಮಲಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ ಕೆಲವರು ಪ್ರಯತ್ನಿಸಿದ್ದಾರೆ. ಆದರೆ, ಜಾನ್ವಿ ಬಾಡಿಗಾರ್ಡ್ಸ್ ಇದಕ್ಕೆ ಅವಕಾಶ ನೀಡಿಲ್ಲ. ದೇವರ ದರ್ಶನ ಪಡೆದ ಬಳಿಕ ಅವರು ಶೂಟಿಂಗ್ನಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ.
#WATCH | Andhra Pradesh | Actress Janhvi Kapoor visits Sri Venkateswara Swami Temple in Tirumala to offer prayers. pic.twitter.com/zbOHYkcBfH
— ANI (@ANI) August 28, 2023
ಇದನ್ನೂ ಓದಿ: ಜಾನ್ವಿ ಕಪೂರ್ ನಿಜ ಜೀವನದಲ್ಲೂ ನಟನೆ ಮಾಡ್ತಾರೆ ಅಂತ ಟ್ರೋಲ್ ಮಾಡಿದ ನೆಟ್ಟಿಗರು; ಕಾರಣ ಏನು?
‘ದಡಕ್’ ಸಿನಿಮಾ ಮೂಲಕ ಜಾನ್ವಿ ಕಪೂರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಸಾಮಾನ್ಯ ಹಿಟ್ ಎನಿಸಿಕೊಂಡಿತು. ಈ ಚಿತ್ರ 2018ರಲ್ಲಿ ರಿಲೀಸ್ ಆಗಿತ್ತು. ಆ ಬಳಿಕ ರಿಲೀಸ್ ಆದ ಹಲವು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿಲ್ಲ. ಸದ್ಯ ಅವರು ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’, ‘ದೇವರ’ ಸೇರಿ ಮೂರು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಬೋನಿ ಕಪೂರ್ ಹಾಗೂ ಶ್ರೀದೇವಿ ಮಗಳು ಎನ್ನುವ ಕಾರಣಕ್ಕೆ ಅವರಿಗೆ ಸುಲಭದಲ್ಲಿ ಅವಕಾಶ ದೊರೆತಿದೆ. ಆದರೆ, ಗೆಲುವು ಸಿಗೋದು ಕಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Mon, 28 August 23