
ಜೀ ಸಿನಿ ಅವಾರ್ಡ್ಸ್ 2023 (Zee Cine Awards 2023) ಪ್ರಶಸ್ತಿ ಪ್ರದಾನ ನಿನ್ನೆಯಷ್ಟೆ ಮುಂಬೈನಲ್ಲಿ ನಡೆದಿದ್ದು, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಹಿದ್ ಕಪೂರ್, ಆಲಿಯಾ ಭಟ್ (Alia Bhatt), ಕೃತಿ ಸೋನನ್, ಸನ್ನಿ ಡಿಯೋಲ್, ಕಾರ್ತಿಕ್ ಆರ್ಯನ್, ಅನುಪಮ್ ಖೇರ್ ಸೇರಿದಂತೆ ಹಲವು ಖ್ಯಾತನಾಮರು ಹಾಜರಿದ್ದು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಆಸ್ಕರ್ಗೆ ನಾಮಿನೇಟ್ ಆಗಲು ವಿಫಲವಾಗಿದ್ದ ‘ದಿ ಕಶ್ಮೀರ್ ಫೈಲ್ಸ್’ ಸೇರಿದಂತೆ ‘ಬ್ರಹ್ಮಾಸ್ತ್ರ’, ‘ಭೂಲ್ ಭುಲಯ್ಯ 2’, ‘ಗಂಗೂಬಾಯಿ ಕಾಠಿಯಾವಾಡಿ’ ಇನ್ನೂ ಹಲವು ಸಿನಿಮಾಗಳು ಒಂದಕ್ಕಿಂತಲೂ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ನಟಿ ಆಲಿಯಾ ಭಟ್ ಅತ್ಯುತ್ತಮ ನಟಿ ಎನಿಸಿಕೊಂಡರೆ ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ
ಅತ್ಯುತ್ತಮ ನಟಿ- ಆಲಿಯಾ ಭಟ್ (ಗಂಗೂಬಾಯಿ ಕಾಠಿಯಾವಾಡಿ)
ಅತ್ಯುತ್ತಮ ನಟ- ಕಾರ್ತಿಕ್ ಆರ್ಯನ್ (ಭೂಲ್ ಭುಲಯ್ಯ 2)
ಅತ್ಯುತ್ತಮ ಸಿನಿಮಾ- ‘ದಿ ಕಶ್ಮೀರ್ ಫೈಲ್ಸ್’
ವರ್ಷದ ಅತ್ಯುತ್ತಮ ಪರ್ಮಾಮರ್ – ವರುಣ್ ಧವನ್ (ಜುಗ್ ಜುಗ್ ಜಿಯೊ, ಬೇಡಿಯಾ)
ವರ್ಷದ ಅತ್ಯುತ್ತಮ ಮಹಿಳಾ ಪರ್ಮಾಮರ್- ಕಿಯಾರಾ ಅಡ್ವಾಣಿ (ಜುಗ್ ಜುಗ್ ಜಿಯೊ, ಭೂಲ್ ಭುಲಯ್ಯ2)
ಮೊದಲ ಸಿನಿಮಾದಲ್ಲಿ ಅತ್ಯುತ್ತಮ ನಟಿ- ರಶ್ಮಿಕಾ ಮಂದಣ್ಣ (ಗುಡ್ ಬೈ)
ಅತ್ಯುತ್ತಮ ಪೋಷಕ ನಟ- ಅನಿಲ್ ಕಪೂರ್ (ಜುಗ್ ಜುಗ್ ಜಿಯೊ)
ಅತ್ಯುತ್ತಮ ಪೋಷಕ ನಟಿ- ಶೀಭಾ ಚಡ್ಡ (ಡಾಕ್ಟರ್ ಜಿ)
ವೀಕ್ಷಕರ ಆಯ್ಕೆಯ ಅತ್ಯುತ್ತಮ ನಟಿ- ಆಲಿಯಾ ಭಟ್ (ಡಾರ್ಲಿಂಗ್ಸ್)
ವೀಕ್ಷಕರ ಆಯ್ಕೆಯ ಅತ್ಯುತ್ತಮ ಸಿನಿಮಾ- ದಿ ಕಶ್ಮೀರ್ ಫೈಲ್ಸ್
ವೀಕ್ಷಕರ ಆಯ್ಕೆಯ ಅತ್ಯುತ್ತಮ ನಟ- ಅನುಪಮ್ ಖೇರ್ (ದಿ ಕಶ್ಮೀರ್ ಫೈಲ್ಸ್)
ಅತ್ಯುತ್ತಮ ಸಂಗೀತ- ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ಎಡಿಟಿಂಗ್- ಸಂಯುಕ್ತ ಕಾಝ (ಬೇಡಿಯಾ)
ಅತ್ಯುತ್ತಮ ನಿರ್ದೇಶಕ- ಅಯಾನ್ ಮುಖರ್ಜಿ (ಬ್ರಹ್ಮಾಸ್ತ್ರ)
ಅತ್ಯುತ್ತಮ ಚಿತ್ರಕತೆ- ‘ದಿ ಕಶ್ಮೀರ್ ಫೈಲ್ಸ್’