
‘ಟಾಕ್ಸಿಕ್’ (Toxic0) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಹಲವರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು, ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಹರಿದುಬರುತ್ತಿದೆ. ಸಿನಿಮಾದ ಕಲೆಕ್ಷನ್ ಬಿದ್ದಿದೆ ಎಂದೆಲ್ಲ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಗಳಿಕೆ ಹೇಗಿದೆ, ಜನ ಹೇಗೆ ‘ಟಾಕ್ಸಿಕ್’ ಸಿನಿಮಾ ಅನ್ನು ಸ್ವೀಕರಿಸುತ್ತಿದ್ದಾರೆ ಎಂದು ಹಿಂದಿ ಚಿತ್ರರಂಗದ ಹಿರಿಯ ಸಿನಿಮಾ ವಿತಕರ ಮತ್ತು ಸಿನಿಮಾ ಮಂದಿರದ ಮಾಲೀಕರೂ ಸಹ ಆಗಿರುವ ಮನೋಜ್ ದೇಸಾಯಿ ವಿವರಿಸಿದ್ದಾರೆ.
ಮನೋಜ್ ದೇಸಾಯಿ ಅವರು ಮುಂಬೈನಲ್ಲಿರುವ ತಮ್ಮ ಎರಡೂ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಮನೋಜ್ ದೇಸಾಯಿ, ‘ಟಾಕ್ಸಿಕ್’ ಸಿನಿಮಾ ಹಿಂದಿ ಭಾಷಿಕರಿಗೆ ಇಷ್ಟವಾಗಿದೆ. ಜನ ಖುಷಿಯಿಂದ ಬಂದು ಸಿನಿಮಾ ನೋಡುತ್ತಿದ್ದಾರೆ’ ಎಂದಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ನಾಲ್ಕನೇ ದಿನಕ್ಕೆ ಮನೋಜ್ ದೇಸಾಯಿ ಅವರು ಸಂದರ್ಶನ ನೀಡಿದ್ದು, ನಾಲ್ಕನೇ ದಿನವೂ ಸಹ ತಮ್ಮ ಎರಡೂ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಆಗಿದೆ ಎಂದಿದ್ದಾರೆ.
ತಾವು ‘ಕೆಜಿಎಫ್’ ಸಿನಿಮಾವನ್ನೂ ಸಹ ತಮ್ಮ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದ್ದು, ಆ ಸಿನಿಮಾಗಳು ಸಹ ದೊಡ್ಡ ಹಿಟ್ ಆಗಿದ್ದವು. ಹಾಗೆಯೇ ಈ ಸಿನಿಮಾ ಸಹ ಚೆನ್ನಾಗಿ ಓಡುತ್ತಿವೆ. ತಾವು ಮುಂಬೈನ ಮಲ್ಟಿಪ್ಲೆಕ್ಸ್ಗಳಿಗೆ ಹೋಲಿಸಿದರೆ ಕಡಿಮೆ ದರಕ್ಕೆ ಟಿಕೆಟ್ ಮಾರಾಟ ಮಾಡುತ್ತಿದ್ದೇವೆ ಹಾಗಾಗಿ ಹೆಚ್ಚು ಜನ ಸಿನಿಮಾ ನೋಡಲು ಬರುತ್ತಿದ್ದಾರೆ. ಯಶ್ ಅವರ ಅಭಿಮಾನಿಗಳು ಸಹ ಹೆಚ್ಚಾಗಿದ್ದಾರೆ ಎಂದು ಮನೋಜ್ ಅವರು ಹೇಳಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಕಥೆ ಹೇಳಿ ಅಂತ ಸವಾಲು ಹಾಕಿದವರಿಗೆ ಮಾಸ್ಟರ್ ಆನಂದ್ ಖಡಕ್ ಪ್ರತಿಕ್ರಿಯೆ
ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮನೋಜ್ ದೇಸಾಯಿ, ‘ಸಿನಿಮಾ ಸಾಮಾನ್ಯ ಜನರಿಗೆ ಅರ್ಥ ಆಗುವುದು ತುಸು ಕಷ್ಟವಾಗಿದೆ. ಏಕೆಂದರೆ ಸಿನಿಮಾನಲ್ಲಿ ಸಾಕಷ್ಟು ಸೈಕಾಲಜಿಕಲ್ ಅಂಶಗಳು ಸಹ ಇವೆ. ಹಾಗಾಗಿ ಎಲ್ಲರಿಗೂ ಸುಲಭಕ್ಕೆ ಅರ್ಥ ಆಗುವ ಸಿನಿಮಾ ಇದಲ್ಲ. ಆದರೂ ಜನ ಆಕ್ಷನ್ ಇನ್ನಿತರೆ ಕಾರಣಗಳಿಗಾಗಿ ಸಿನಿಮಾ ನೋಡುತ್ತಿದ್ದಾರೆ. ಜನರು ತೀರ್ಪು ಕೊಟ್ಟಾಗಿದೆ. ‘ಟಾಕ್ಸಿಕ್’ ಸಿನಿಮಾ ಅನ್ನು ಗೆಲ್ಲಿಸಲಾಗಿದೆ’ ಎಂದಿದ್ದಾರೆ ಮನೋಜ್.
ಮನೋಜ್ ದೇಸಾಯಿ ಅವರು ಹಿಂದಿ ಚಿತ್ರರಂಗದ ಹಿರಿಯ ಸಿನಿಮಾ ವಿತರಕ ಮತ್ತು ಪ್ರದರ್ಶಕ. ಸಿನಿಮಾ ನಿರ್ಮಾಣವನ್ನೂ ಹಿಂದೆ ಮಾಡಿದ್ದರಂತೆ. ಬಾಲಿವುಡ್ನ ಹಲವು ದೊಡ್ಡ ನಿರ್ಮಾಪಕರೊಟ್ಟಿಗೆ ಆಪ್ತ ಬಂಧವನ್ನು ಹೊಂದಿದ್ದಾರೆ. ಕೋವಿಡ್ ಬಳಿಕ ಸಿನಿಮಾಗಳ ಕಲೆಕ್ಷನ್ ಲೆಕ್ಕಾಚಾರ, ಸಿನಿಮಾಗಳ ವಿಮರ್ಶೆಗಳನ್ನು ಸಹ ಅವರು ನೀಡುತ್ತಿದ್ದಾರೆ. ವಿಶೇಷವಾಗಿ ದಕ್ಷಿಣದಿಂದ ಬಂದ ಸಿನಿಮಾಗಳು ಹಿಂದಿ ಪ್ರದೇಶದಲ್ಲಿ ಹೇಗೆ ಗಳಿಕೆ ಮಾಡುತ್ತಿವೆ ಎಂದು ತಿಳಿಸುತ್ತಿರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ