‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ’: ಟಾಕ್ಸಿಕ್ ಟ್ರೋಲ್ ಮಾಡಿದವರ ಮೇಲೆ ಯಶ್ ತಾಯಿ ಗರಂ
‘ಇದು ದೊಡ್ಡವರಿಗಾಗಿ ಮಾಡಿದ ಸಿನಿಮಾ’ ಎಂದು ಚಿತ್ರತಂಡ ಹೇಳಿದ ನಂತರವೂ ಟಾಕ್ಸಿಕ್ ಸಿನಿಮಾವನ್ನು ಟ್ರೋಲ್ ಮಾಡುತ್ತಿರುವವರಿಗೆ ಯಶ್ ತಾಯಿ ಪುಷ್ಪ ಅವರು ತಿರುಗೇಟು ನೀಡಿದ್ದಾರೆ. ‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ ಇರಬಹುದು. ಅವರ ತಲೆಗೆ ಹೋಗುತ್ತಿಲ್ಲ ಎನಿಸುತ್ತದೆ’ ಎಂದು ಪುಷ್ಪ ಅರುಣ್ಕುಮಾರ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ (Toxic) ಸಿನಿಮಾವನ್ನು ಕೆಲವು ಪ್ರೇಕ್ಷಕರು ಟ್ರೋಲ್ ಮಾಡಿದ್ದಾರೆ. ಈ ಮೊದಲು ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದಲ್ಲಿ ‘ಫ್ಯಾಮಿಲಿಗೆ ಮುಜುಗರ ಆಗುವಂತಹ ಸಿನಿಮಾ ಮಾಡಲ್ಲ’ ಎಂದು ಯಶ್ ಹೇಳಿದ್ದರು. ಆದರೆ ಈಗ ‘ಟಾಕ್ಸಿಕ್’ ರೀತಿಯ ಸಿನಿಮಾ ಮಾಡಿದ್ದಾರೆ ಎಂಬುದು ಕೆಲವರ ಟೀಕೆ. ಆದರೆ ಈಗಾಗಲೇ ‘ಇದು ದೊಡ್ಡವರಿಗಾಗಿ ಮಾಡಿದ ಸಿನಿಮಾ’ ಎಂದು ಚಿತ್ರತಂಡ ಹೇಳಿದ ನಂತರವೂ ಯಶ್ ಅವರನ್ನು ಟ್ರೋಲ್ ಮಾಡುತ್ತಿರುವವರಿಗೆ ಪುಷ್ಪ ಅವರು ತಿರುಗೇಟು ನೀಡಿದ್ದಾರೆ. ‘ಅವರಿಗೆಲ್ಲ ಮೆಂಟಲ್ ಪ್ರಾಬ್ಲಂ ಇರಬಹುದು. ಅವರಿಗೆ ತಲೆಗೆ ಹೋಗುತ್ತಿಲ್ಲ ಎನಿಸುತ್ತದೆ. ಅದಕ್ಕಾಗಿಯೇ ಮತ್ತೆ ಅದನ್ನೇ ಕೇಳುತ್ತಿದ್ದಾರೆ. ಅವರೆಲ್ಲ ಅಬ್ನಾರ್ಮಲ್ ಇರಬೇಕು. ಯಶ್ ಕಾಲೆಳೆಯುವವರನ್ನು ನೋಡಿದರೆ ನನಗೆ ನಗು ಬರುತ್ತದೆ. ಅಂಥವರಿಗೆ ನಾವು ಕೇರ್ ಮಾಡಲ್ಲ’ ಎಂದು ಯಶ್ ತಾಯಿ ಪುಷ್ಪ ಅರುಣ್ಕುಮಾರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು ಸಿಎಂ ಡಿಕೆಶಿಗೆ ಪತ್ರ
ಪಾವನಾ ಕೊರಳಿಗೆ ತಾಳಿ ಕಟ್ಟಿದ ನಟ ಚಿಕ್ಕಣ್ಣ; ಮದುವೆಯ ಸುಂದರ ವಿಡಿಯೋ ನೋಡಿ..
ರಾಯರ ಮಠದಲ್ಲಿ ಗುರುರಾಯರ ಮಧ್ಯಾರಾಧನೆ: ವಿಶೇಷ ಪೂಜಾ ಕೈಂಕರ್ಯಗಳು
ಪಾರ್ಕ್ಗಳ ಜಾಗ ವಾಣಿಜ್ಯ ಉದ್ದೇಶಕ್ಕೆ ಬಳಕೆ ಖಂಡಿಸಿ ಮೈಸೂರಲ್ಲೂ ಪ್ರತಿಭಟನೆ

