ಚಿನ್ನದಂಥ ಅವಕಾಶ ಕೈಚೆಲ್ಲಿದ ಸುಂದರ್, ರಜನೀಕಾಂತ್ ಸಿನಿಮಾದಿಂದ ಹೊರಬರಲು ಕಾರಣ?

Rajinikanth-Kamal Haasan: ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡಲಿರುವ ಸಿನಿಮಾದ ಘೋಷಣೆ ಇತ್ತೀಚೆಗಷ್ಟೆ ಮಾಡಲಾಗಿತ್ತು. ಇಬ್ಬರು ಸೂಪರ್ ಸ್ಟಾರ್​​ಗಳ ಅಭಿಮಾನಿಗಳು ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. ಆ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಸಿ ಸುಂದರ್ ನಿರ್ದೇಶನ ಮಾಡಲಿದ್ದರು. ಆದರೆ ಇದೀಗ ಅಚಾನಕ್ಕಾಗಿ ಸಿ ಸುಂದರ್ ಅವರು ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿದ್ದಾರೆ.

ಚಿನ್ನದಂಥ ಅವಕಾಶ ಕೈಚೆಲ್ಲಿದ ಸುಂದರ್, ರಜನೀಕಾಂತ್ ಸಿನಿಮಾದಿಂದ ಹೊರಬರಲು ಕಾರಣ?
Rajini Kamal

Updated on: Nov 13, 2025 | 5:24 PM

ರಜನೀಕಾಂತ್ (Rajinikanth) ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಎಷ್ಟೋ ಮಂದಿ ನಿರ್ದೇಶಕರುಗಳ ಕನಸು. ಅದೂ ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುವ ಸಿನಿಮಾ ಒಂದನ್ನು ನಿರ್ದೇಶಿಸುವ ಅವಕಾಶ ತಾನಾಗೆ ಹುಡುಕಿಕೊಂಡು ಬಂದಿರುವಾಗ ನಿರ್ದೇಶಕನೊಬ್ಬ ಸಿನಿಮಾದಿಂದಲೇ ಹೊರ ಬಂದಿದ್ದಾರೆ. ಹೌದು, ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದ ಹೊಸ ಸಿನಿಮಾವನ್ನು ಸುಂದರ್ ಸಿ ನಿರ್ದೇಶಿಸುವುದಾಗಿ ಘೋಷಣೆ ಆಗಿತ್ತು, ಆದರೆ ಘೋಷಣೆಯಾಗಿ ಒಂದೇ ವಾರದಲ್ಲಿ ಸುಂದರ್ ಸಿ, ಆ ಸಿನಿಮಾದಿಂದ ಹೊರಬಂದಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ರಜನೀಕಾಂತ್​​ ಅವರ 173ನೇ ಸಿನಿಮಾದ ಘೋಷಣೆ ಆಯ್ತು. ಸಿನಿಮಾ ಅನ್ನು ಕಮಲ್ ಹಾಸನ್ ಅವರು ತಮ್ಮ ರಾಜ್ ಕಮಲ್ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದರು. ಈ ಹಿಂದೆ ಹಲವು ಸೂಪರ್ ಹಿಟ್ ತಮಿಳು ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸುಂದರ್ ಸಿ ಅವರು ಈ ಭಾರಿ ಬಜೆಟ್ ಸಿನಿಮಾದ ನಿರ್ದೇಶನ ಮಾಡಲಿರುವುದಾಗಿ ಘೋಷಿಸಲಾಯ್ತು. ಸಿನಿಮಾದ ಮುಹೂರ್ತವೂ ಅದ್ಧೂರಿಯಾಗಿ ನಡೆಯಿತು. ಆದರೆ ಈಗ ಹಠಾತ್ತನೆ ಸುಂದರ್ ಸಿ, ಅವರು ಪ್ರಾಜೆಕ್ಟ್​​ನಿಂದ ಹಿಂದೆ ಸರಿದಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸುಂದರ್ ಸಿ, ‘ಕೆಲವು ಹೇಳಲಾಗದ, ಆದರೆ ತಪ್ಪಿಸಲೂ ಸಹ ಆಗದ ಕಾರಣಗಳಿಂದಾಗಿ ನಾನು ರಜನೀಕಾಂತ್ ನಟಿಸಿ, ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಸಿನಿಮಾನಲ್ಲಿ ಕೆಲಸ ಮಾಡಲು ಆಗುತ್ತಿಲ್ಲ’ ಎಂದಿದ್ದಾರೆ. ಸುಂದರ್ ಸಿ ಅವರು ಈ ಸಿನಿಮಾದಿಂದ ಹೊರ ಹೋಗುತ್ತಿರುವುದಕ್ಕೆ ನಿಖರವಾದ ಕಾರಣವನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ. ಆದರೆ ಭಾರವಾದ ಮನಸ್ಸಿನಿಂದ ಪ್ರಾಜೆಕ್ಟ್​​ನಿಂದ ಹೊರಗೆ ಹೋಗುತ್ತಿರುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ:ಭೈರಪ್ಪನವರ ಭೇಟಿಗೆ ಬಂದಿದ್ದರು ರಜನೀಕಾಂತ್: ಕಾರಣವೇನು?

‘ರಜನೀಕಾಂತ್ ಮತ್ತು ಕಮಲ್ ಹಾಸನ್ ಇಬ್ಬರ ಜೊತೆಗೂ ನನ್ನದು ಹಳೆಯ ಅನುಬಂಧ, ಅವರೊಂದಿಗೆ ಕಳೆದ ದಿನಗಳು, ಕಲಿತ ಪಾಠಗಳು ಸದಾ ನನ್ನ ನೆನಪಿನಲ್ಲಿ ಉಳಿಯುತ್ತವೆ. ಅಲ್ಲದೆ ಈ ಸಿನಿಮಾದ ಘೋಷಣೆ ಆದಾಗಿನಿಂದ ಈಗಿನವರೆಗೂ ಕಲೆದ ದಿನಗಳೂ ಸಹ ನನ್ನ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯಲಿವೆ. ಕಮಲ್ ಹಾಗೂ ರಜನೀಕಾಂತ್ ಇಬ್ಬರಿಗೂ ನಾನು ಕ್ಷಮೆ ಕೇಳುತ್ತೇನೆ. ಆದರೆ ಅವರೊಂದಿಗಿನ ನನ್ನ ಅನುಬಂಧ ಹಾಗೆಯೇ ಮುಂದುವರೆಯಲಿದೆ, ನನ್ನ ಜೀವನದಲ್ಲಿ ಮುಂದೆಯೂ ನಾನು ಅವರ ಮಾರ್ಗದರ್ಶನವನ್ನು ಅಗತ್ಯ ಸಮಯಗಳಲ್ಲಿ ಪಡೆಯಲಿದ್ದೇನೆ’ ಎಂದಿದ್ದಾರೆ.

ಸಿ ಸುಂದರ್ ಅವರು ರಜನೀಕಾಂತ್ ಅವರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಕೆಲವು ಅಸಮಾಧಾನ ವ್ಯಕ್ತಪಡಿಸಿದ್ದರು. ಸಿ ಸುಂದರ್ ಈಗಿನ ಕಾಲದ ಅಭಿಮಾನಿಗಳಿಗೆ ತಕ್ಕಂತೆ ಸಿನಿಮಾ ಮಾಡಲಾರರು, ಅವರು ಓಲ್ಡ್ ಸ್ಕೂಲ್ ಸಿನಿಮಾ ನಿರ್ದೇಶಕ ಹೊಸ ತಲೆಮಾರಿನ ರೀತಿಯ ಸಿನಿಮಾ ಅವರಿಗೆ ಮಾಡಲಾಗುವುದಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದೀಗ ಸುಂದರ್ ಅವರೇ ಪ್ರಾಜೆಕ್ಟ್​​ನಿಂದ ಹಿಂದೆ ಸರಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ