ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಕಿಡಿ ಹಚ್ತೀವಿ; ಶಪಥ ಮಾಡಿದ ಚಕ್ರವರ್ತಿ, ಸಂಬರಗಿ

ಗೋಲ್ಡನ್​ ಪಾಸ್​ ಪಡೆಯೋಕೆ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಪಾಸ್​ ಪಡೆಯೋಕೆ ಮನೆಯವರು ಗುಂಪು ಕಟ್ಟಿಕೊಂಡಿದ್ದರು ಎಂಬುದು ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಊಹೆ.

ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಕಿಡಿ ಹಚ್ತೀವಿ; ಶಪಥ ಮಾಡಿದ ಚಕ್ರವರ್ತಿ, ಸಂಬರಗಿ
ಚಕ್ರವರ್ತಿ ಚಂದ್ರಚೂಡ್​ ಹಾಗೂ ಪ್ರಶಾಂತ್​ ಸಂಬರಗಿ
Edited By:

Updated on: Apr 18, 2021 | 4:47 PM

ಚಕ್ರವರ್ತಿ ಚಂದ್ರಚೂಡ್​ ಬಿಗ್​ ಬಾಸ್​ ಮನೆಗೆ ಬಂದಾಗ ಎಲ್ಲರನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ಕೆಲ ವಿಚಾರದಲ್ಲಿ ಕಿಚ್ಚ ಸುದೀಪ್​ ಅವರಿಂದ ಪಾಠ ಹೇಳಿಸಿಕೊಳ್ಳಬೇಕಾಯಿತು. ಇದರಿಂದ ಪಾಠ ಕಲಿತಿದ್ದ ಚಕ್ರವರ್ತಿ ಈಗ ಮತ್ತೆ ಸಿಡಿದೇಳುವ ಸೂಚನೆ ನೀಡಿದ್ದಾರೆ.

ಗೋಲ್ಡನ್​ ಪಾಸ್​ ಪಡೆಯೋಕೆ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಪಾಸ್​ ಪಡೆಯೋಕೆ ಮನೆಯವರು ಗುಂಪು ಕಟ್ಟಿಕೊಂಡಿದ್ದರು ಎಂಬುದು ಚಕ್ರವರ್ತಿ ಚಂದ್ರಚೂಡ್​, ಪ್ರಶಾಂತ್​ ಸಂಬರಗಿ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಊಹೆ. ಈ ವಿಚಾರದ ಬಗ್ಗೆ ಮೂವರೂ ಸೇರಿ ಚರ್ಚೆ ನಡೆಸಿದ್ದಾರೆ.

ಗೋಲ್ಡನ್​ ಪಾಸ್​ ಪಡೆಯೋಕೆ ಒಂದಾಗಿದ್ದಾರೆ. ನಮ್ಮನ್ನು ಬೇಕೇಂದೇ ಔಟ್​ ಮಾಡಿದ್ದಾರೆ ಎನ್ನುವ ಅಭಿಪ್ರಾಯವನ್ನು ಚಂದ್ರಚೂಡ್​ ಹೊರ ಹಾಕಿದರು. ಇದನ್ನು, ಪ್ರಶಾಂತ್​ ಕೂಡ ಒಪ್ಪಿಕೊಂಡರು. ಈ ವೇಳೆ ಮಾತನಾಡಿದ ಚಂದ್ರಚೂಡ್​, ನಾನು ಸೋಮವಾರದಿಂದ ಬದಲಾಗುತ್ತೇನೆ. ಹೊರಗೆ ಹೇಗಿದ್ದೆನೋ ಹಾಗೇ ಇರುತ್ತೇನೆ. ಏನಿದ್ದರೂ ಸ್ಟ್ರೇಟ್​ ಫಾರ್ವರ್ಡ್​ ಹಿಟ್​. ಮನೆಯಲ್ಲಿ ಕ್ರಾಂತಿ ಮಾಡುತ್ತೇನೆ ಎಂದು ಶಪಥ ಮಾಡಿದರು.

ಇದಕ್ಕೆ ಚಕ್ರವರ್ತಿ ಚಂದ್ರಚೂಡ್​ ಕೂಡ ಧ್ವನಿಗೂಡಿಸಿದರು. ಹೌದು ನಾನು ಕೂಡ ಹಾಗೇ. ಪಾಪ ಅನ್ನೋದಲ್ಲ ಇನ್ಮುಂದೆ ಇರಲ್ಲ. ಮೊದಲಿನ ಆಟಕ್ಕೆ ಮರಳುತ್ತೇನೆ ಎಂದರು. ಈ ಮೂಲಕ ಇಬ್ಬರೂ ಸೇರಿ ಮತ್ತೆ ಮನೆಯ ಶಾಂತಿ ಕದಡುವ ಸೂಚನೆ ನೀಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಗುಂಪುಗಾರಿಕೆ ಮಾಡುತ್ತಾರೆ ಎಂಬುದು ಪ್ರಶಾಂತ್​-ಚಕ್ರವರ್ತಿ ಆರೋಪ. ಏಳನೇ ವಾರ ಈ ಆರೋಪ ಸ್ವಲ್ಪ ಕಡಿಮೆ ಆಗಿತ್ತು. ಈಗ ಮತ್ತೆ ಈ ಆರೋಪವನ್ನು ಇಬ್ಬರೂ ಮುಂದುವರಿಸಿದ್ದಾರೆ.

ಪ್ರಶಾಂತ್​-ಚಕ್ರವರ್ತಿ ಈಗಾಗಲೇ ಶಮಂತ್​ ಅವರನ್ನು ತಮ್ಮ ಪಾರ್ಟಿಗೆ ತೆಗೆದುಕೊಂಡಿದ್ದಾರೆ. ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ಕೂಡ ಚಕ್ರವರ್ತಿ ಗುಂಪಿನ ಕಡೆ ವಾಲಿದ್ದಾರೆ. ಅವರ ನಡೆ ಮನೆಯಲ್ಲಿ ಅನೇಕರಿಗೆ ಬೇಸರ ತರಿಸುತ್ತಿದೆ.

ಇದನ್ನೂ ಓದಿ: Kichcha Sudep: ಕಿಚ್ಚ ಸುದೀಪ್‌ಗೆ ಕೊರೊನಾ ಸೋಂಕು? ಊಹಾಪೋಹಗಳಿಗೆ ಬಿತ್ತು ತೆರೆ

Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us