ಡ್ಯಾನ್ಸ್ ವಿಚಾರದಲ್ಲಿ ಟ್ರೋಲ್​ ಆದ ದಳಪತಿ ವಿಜಯ್; ಇದಕ್ಕೆಲ್ಲ ಕಾರಣ ಕೀರ್ತಿ ಸುರೇಶ್​

ಮೆಗಾ ಸ್ಟಾರ್​ ಚಿರಂಜೀವಿ ಹಾಗೂ ದಳಪತಿ ವಿಜಯ್​ ನಡುವೆ ಬೆಸ್ಟ್​ ಡ್ಯಾನ್ಸರ್​ ಯಾರು? ಈ ಪ್ರಶ್ನೆಗೆ ಉತ್ತರವಾಗಿ ನಟಿ ಕೀರ್ತಿ ಸುರೇಶ್ ಅವರು ವಿಜಯ್​ ಹೆಸರನ್ನು ಹೇಳಿದ್ದರು. ಆದರೆ ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾದ ಹೊಸ ಹಾಡನ್ನು ನೋಡಿದವರಿಗೆ ವಿಜಯ್​ ಡ್ಯಾನ್ಸ್​ ಸ್ವಲ್ಪವೂ ಇಷ್ಟ ಆಗಿಲ್ಲ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡಲಾಗುತ್ತಿದೆ.

ಡ್ಯಾನ್ಸ್ ವಿಚಾರದಲ್ಲಿ ಟ್ರೋಲ್​ ಆದ ದಳಪತಿ ವಿಜಯ್; ಇದಕ್ಕೆಲ್ಲ ಕಾರಣ ಕೀರ್ತಿ ಸುರೇಶ್​
ದಳಪತಿ ವಿಜಯ್​, ಕೀರ್ತಿ ಸುರೇಶ್

Updated on: Aug 05, 2024 | 10:08 PM

ಕಾಲಿವುಡ್​ನ ಸ್ಟಾರ್​ ನಟ ದಳಪತಿ ವಿಜಯ್​ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಅವರಿಗೆ ಸರಿಯಾಗಿ ಡ್ಯಾನ್ಸ್​ ಮಾಡಲು ಬರುವುದಿಲ್ಲ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ದಳಪತಿ ವಿಜಯ್​ ಅವರು ಈ ರೀತಿ ಟ್ರೋಲ್​ ಆಗಲು ಕಾರಣ ನಟಿ ಕೀರ್ತಿ ಸುರೇಶ್​. ಹೌದು, ನಟಿ ನೀಡಿದ ಒಂದೇ ಒಂದು ಹೇಳಿಕೆಯಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ದಳಪತಿ ವಿಜಯ್​ ಅವರು ಟ್ರೋಲ್ ಆಗುವಂತಾಗಿದೆ. ಮೆಗಾ ಸ್ಟಾರ್ ಚಿರಂಜೀವಿ ಅವರಿಗಿಂತಲೂ ದಳಪತಿ ವಿಜಯ್​ ಅವರೇ ಅತ್ಯುತ್ತಮ ಡ್ಯಾನ್ಸರ್​ ಎಂದು ಕೀರ್ತಿ ಸುರೇಶ್​ ಹೇಳಿದ್ದರಿಂದ ಇಷ್ಟೆಲ್ಲ ಆಗಿದೆ.

ಇತ್ತೀಚೆಗೆ ನಟಿ ಕೀರ್ತಿ ಸುರೇಶ್​ ಅವರು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ದಳಪತಿ ವಿಜಯ್​ ಮತ್ತು ಮೆಗಾ ಸ್ಟಾರ್​ ಚಿರಂಜೀವಿ ಈ ಇಬ್ಬರಲ್ಲಿ ಯಾರು ಬೆಸ್ಟ್​ ಡ್ಯಾನ್ಸರ್​ ಎಂದು ಕೇಳಿದ ಪ್ರಶ್ನೆಗೆ ಕೀರ್ತಿ ಸುರೇಶ್​ ಅವರು ದಳಪತಿ ವಿಜಯ್​ ಹೆಸರನ್ನು ಆಯ್ಕೆ ಮಾಡಿದ್ದರು. ಇದರಿಂದ ಚಿರಂಜೀವಿ ಅವರ ಅಭಿಮಾನಿಗಳಿಗೆ ಬೇಸರ ಆಗಿತ್ತು. ಕೀರ್ತಿ ಅವರ ಅಭಿಪ್ರಾಯ ಸರಿಯಿಲ್ಲ ಎಂಬುದನ್ನು ಚಿರು ಅಭಿಮಾನಿಗಳು ಈಗ ಸಾಕ್ಷಿ ಸಮೇತ ಸಾಬೀತುಪಡಿಸುತ್ತಿದ್ದಾರೆ.

ದಳಪತಿ ವಿಜಯ್​ ಅವರು ‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಿಂದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ವಿಜಯ್​ ಮಾಡಿದ ಡ್ಯಾನ್ಸ್​ ಸರಿಯಿಲ್ಲ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ವಿಜಯ್​ ಮಾಡಿರುವ ಸ್ಟೆಪ್​ಗಳು ತುಂಬ ಎಡವಟ್ಟಿನಿಂದ ಕೂಡಿವೆ ಎಂಬುದು ಚಿರಂಜೀವಿಯ ಕಟ್ಟಾ ಅಭಿಮಾನಿಗಳ ಅಭಿಪ್ರಾಯ.

ಇದನ್ನೂ ಓದಿ: ‘ಮಹಾರಾಜ’ ಸಿನಿಮಾ ನಿರ್ದೇಶಕನ ಭೇಟಿಯಾದ ದಳಪತಿ ವಿಜಯ್

‘ದಿ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​’ ಸಿನಿಮಾಗೆ ವೆಂಕಟ್​ ಪ್ರಭು ನಿರ್ದೇಶನ ಮಾಡಿದ್ದಾರೆ. ಯುವನ್ ಶಂಕರ್​ ರಾಜಾ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದಳಪತಿ ವಿಜಯ್​ ಅವರ ಅಭಿಮಾನಿಗಳಿಗೆ ಈ ಹೊಸ ಸಾಂಗ್​ ಇಷ್ಟ ಆಗಿದೆ. ಆದರೆ ಚಿರಂಜೀವಿ ಅಭಿಮಾನಿಗಳು ಟ್ರೋಲ್​ ಮಾಡುತ್ತಲೇ ಇದ್ದಾರೆ. ಇಷ್ಟೆಲ್ಲ ಆದ ಬಳಿಕ ಕೀರ್ತಿ ಸುರೇಶ್​ ಅವರು ತಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳುತ್ತಾರಾ ಎಂಬ ಕೌತುಕ ಎಲ್ಲರಲ್ಲೂ ಇದೆ. ಅವರಿಂದ ಪ್ರತಿಕ್ರಿಯೆ ಬರಬಹುದು ಎಂದು ನೆಟ್ಟಿಗರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us