AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಹಾರಾಜ’ ಸಿನಿಮಾ ನಿರ್ದೇಶಕನ ಭೇಟಿಯಾದ ದಳಪತಿ ವಿಜಯ್

‘ಮಹಾರಾಜ’ ತಮಿಳು ಸಿನಿಮಾ ಕೆಲವೇ ಕೋಟಿಗಳಲ್ಲಿ ನಿರ್ಮಾಣವಾಗಿ ಈಗ 100 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಒಟಿಟಿಯಲ್ಲಿಯೂ ಬಿಡುಗಡೆ ಆಗಿ ಕೋಟ್ಯಂತರ ಜನರಿಂದ ವೀಕ್ಷಿಸಲ್ಪಟ್ಟಿದೆ. ಸಿನಿಮಾ ವೀಕ್ಷಿಸಿದ ದಳಪತಿ ವಿಜಯ್, ನಿರ್ದೇಶಕರನ್ನು ಮನೆಗೆ ಆಹ್ವಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

‘ಮಹಾರಾಜ’ ಸಿನಿಮಾ ನಿರ್ದೇಶಕನ ಭೇಟಿಯಾದ ದಳಪತಿ ವಿಜಯ್
ಮಹಾರಾಜ ಸಿನಿಮಾ
ಮಂಜುನಾಥ ಸಿ.
|

Updated on: Jul 19, 2024 | 10:45 AM

Share

ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿ ತನ್ನ ಭಿನ್ನ ಕತೆ, ನಿರೂಪಣೆ ಮತ್ತು ಪಾತ್ರ ಪೋಷಣೆಯಿಂದಲೇ ಗಮನ ಸೆಳೆದಿದೆ ಇತ್ತೀಚೆಗಿನ ಸೂಪರ್ ಹಿಟ್ ತಮಿಳು ಸಿನಿಮಾ ‘ಮಹಾರಾಜ’. ಸಿನಿಮಾದಲ್ಲಿ ಕಮರ್ಷಿಯಲ್ ಕತೆಯ ಜೊತೆಗೆ ಹೆಣೆದಿರುವ ಸಾಮಾಜಿಕ ಅಂಶಗಳು ಸಿನಿಮಾವನ್ನು ಜನರಿಗೆ ಹೆಚ್ಚು ಹತ್ತಿರವಾಗಿಸಿವೆ. ಕೇವಲ 20 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಈಗಾಗಲೇ 100 ಕೋಟಿ ಕ್ಲಬ್ ಸೇರಿ ಆಗಿದೆ. ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಆಗಿದ್ದರೂ ಸಹ ಚೆನ್ನೈ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

‘ಮಹಾರಾಜ’ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ದಳಪತಿ ವಿಜಯ್, ಸಿನಿಮಾದ ನಿರ್ದೇಶಕ ನಿತಿನಲ್ ಸಾಮಿನಾಥನ್ ಅವರನ್ನು ಮನೆಗೆ ಕರೆಸಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ನಿತಿನ್ ಅನ್ನು ಮನೆಗೆ ಆಹ್ವಾನಿಸಿ ಭೇಟಿಯಾಗಿರುವ ವಿಜಯ್, ನಿರ್ದೇಶಕನೊಟ್ಟಿಗೆ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಮಾತನಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಅತ್ಯುತ್ತಮ ಸಿನಿಮಾ ನೀಡಿರುವಕ್ಕೆ ಮೆಚ್ಚುಗೆಯನ್ನು ಸಹ ಸಲ್ಲಿಸಿದ್ದಾರಂತೆ.

ಇದನ್ನೂ ಓದಿ:‘ಆಗ್ತಿರೋದು ನೋಡಿದಾಗ ಬೇಸರ ಶುರುವಾಯ್ತು’: ದರ್ಶನ್​ ಕೇಸ್​ ಬಗ್ಗೆ ವಿಜಯ್​ ರಾಘವೇಂದ್ರ ಮಾತು

ವಿಜಯ್ ಅವರನ್ನು ಭೇಟಿಯಾಗಿರುವ ಚಿತ್ರವನ್ನು ಹಂಚಿಕೊಂಡಿರುವ ನಿರ್ದೇಶಕ ನಿತಿನಲ್ ಸಾಮಿನಾಥನ್, ‘ಈ ಅತ್ಯುತ್ತಮ ಭೇಟಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ‘ಮಹಾರಾಜ’ ಸಿನಿಮಾ ಬಗ್ಗೆ ನೀವು ಹೇಳಿದ ವಿವರಗಗಳು ನನ್ನನ್ನು ಚಕಿತಗೊಳಿಸಿದವು, ಸಿನಿಮಾ ಬಗ್ಗೆ ನಿಮಗಿರುವ ಸೂಕ್ಷ್ಮ ದೃಷ್ಟಿ ಚಕಿತಗೊಳಿಸಿತು. ನಿಮ್ಮಿಂದ ದೊರೆತ ಅಭಿನಂದನೆ ನನಗೆ ಒಂದು ದೊಡ್ಡ ಮೆಚ್ಚುಗೆಯಾಗಿದೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಲವ್ ಯು ಅಣ್ಣಾ. ನನ್ನ ನಿರ್ಮಾಪಕರಿಗೂ ನಾನು ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ನಿತಿನಲ್.

‘ಮಹಾರಾಜ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಕ್ಷೌರಿಕ, ಆತನ ಮಗಳು ಹಾಗೂ ಒಬ್ಬ ದರೋಡೆಕೋರನ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ವಿಲನ್ ಪಾತ್ರದಲ್ಲಿ ಬಾಲಿವುಡ್​ನ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಕನ್ನಡಿಗ ಅಜನೀಶ್ ಲೋಕನಾಥ್, ನಿರ್ಮಾಣ ಮಾಡಿರುವುದು ಜಗದೀಶ್ ಪಳನಿಸ್ವಾಮಿ, ಸುದಾನ್ ಸುಂದರಮ್. ಸಿನಿಮಾ ಇತ್ತೀಚೆಗಷ್ಟೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್