AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತು ಸುಣ್ಣವಾದರೂ ‘ಇಂಡಿಯನ್ 3’ ಮಾಡೋಕೆ ಮುಂದಾಯ್ತಾ ಲೈಕಾ ಪ್ರೊಡಕ್ಷನ್ಸ್?

250 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಇಂಡಿಯನ್ 2’ ಸಿನಿಮಾದ ಮೂಡಿ ಬಂದಿದೆ. ಆದರೆ, ಈ ಸಿನಿಮಾ ಇನ್ನೂ 100 ಕೋಟಿ ರೂಪಾಯಿ ಗಳಿಕೆ ಮಾಡಿಲ್ಲ. ಒಟಿಟಿ ಹಕ್ಕು, ಟಿವಿ ಹಕ್ಕು ಸೇರಿದರೆ ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು. ಇದರಿಂದ ಲೈಕಾ ಸಂಸ್ಥೆ ಸುಮಾರು 100 ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ.

ಸೋತು ಸುಣ್ಣವಾದರೂ ‘ಇಂಡಿಯನ್ 3’ ಮಾಡೋಕೆ ಮುಂದಾಯ್ತಾ ಲೈಕಾ ಪ್ರೊಡಕ್ಷನ್ಸ್?
ಇಂಡಿಯನ್ 2
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 19, 2024 | 9:03 AM

Share

ಕಾಲಿವುಡ್​ನಲ್ಲಿ ಲೈಕಾ ಪ್ರೊಡಕ್ಷನ್ಸ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಇದನ್ನು ನಡೆಸುತ್ತಿರುವುದು ಸುಭಾಸ್ಕರನ್ ಅವರು. ಲೈಕಾ ಪ್ರೊಡಕ್ಷನ್ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಆದರೆ, ಇತ್ತೀಚೆಗೆ ಈ ನಿರ್ಮಾಣ ಸಂಸ್ಥೆ ಅಂದುಕೊಂಡ ಮಟ್ಟದಲ್ಲಿ ಹೆಸರು ಮಾಡುತ್ತಿಲ್ಲ. ಇದರ ಸಕ್ಸಸ್ ರೇಟ್ ಸಾಕಷ್ಟು ಕಡಿಮೆ ಆಗಿದೆ. ಈಗ ‘ಇಂಡಿಯನ್ 2’ ಚಿತ್ರದಿಂದ ‘ಲೈಕಾ ಪ್ರೊಡಕ್ಷನ್ಸ್’ ದೊಡ್ಡ ನಷ್ಟ ಅನುಭವಿಸಿದೆ. ಈ ಮಧ್ಯೆ ‘ಇಂಡಿಯನ್ 3’ ಬರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಇಂಡಿಯನ್ 2’ ಚಿತ್ರವನ್ನು ನಿರ್ಮಾಣ ಮಾಡಿದ್ದು ಲೈಕಾ ಸಂಸ್ಥೆಯವರು. ಇದನ್ನು ಶಂಕರ್ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್, ಸಿದ್ದಾರ್ಥ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೈಕಾ ಸಂಸ್ಥೆ ಈ ಚಿತ್ರದಿಂದ ಕೈಸುಟ್ಟುಕೊಂಡಿದೆ. ಆದರೆ, ಈ ನಿರ್ಮಾಣ ಸಂಸ್ಥೆಯವರು ದೊಡ್ಡ ದೊಡ್ಡ ಸಿನಿಮಾಗೆ ಬಂಡವಾಳ ಹೂಡೋದನ್ನು ನಿಲ್ಲಿಸಿಲ್ಲ.

‘ಇಂಡಿಯನ್ 2’ ಸಿನಿಮಾದ ಬಜೆಟ್ 250 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಈ ಸಿನಿಮಾ ಇನ್ನೂ 100 ಕೋಟಿ ರೂಪಾಯಿ ಗಳಿಕೆ ಮಾಡಿಲ್ಲ. ಒಟಿಟಿ ಹಕ್ಕು, ಟಿವಿ ಹಕ್ಕು ಸೇರಿದರೆ ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು. ಇದರಿಂದ ಲೈಕಾ ಸಂಸ್ಥೆ ಸುಮಾರು 100 ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ. ಇದು ಅವರಿಗೆ ದೊಡ್ಡ ಹಿನ್ನಡೆ ಆಗಿದೆ.

ಮುಂದಿನ ವರ್ಷ ‘ಇಂಡಿಯನ್ 3’ ಸಿನಿಮಾ ಬರಲಿದೆ ಎನ್ನಲಾಗುತ್ತಿದೆ. ಈಗಾಗಲೇ ‘ಇಂಡಿಯನ್ 2’ ಚಿತ್ರ ಹೀನಾಯವಾಗಿ ಸೋತಿದೆ. ಹೀಗಿರುವಾಗ ಮೂರನೇ ಪಾರ್ಟ್ ಮಾಡೋಕೆ ನಿರ್ಮಾಪಕರು ಮುಂದೆ ಬರುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಸಾಮಾನ್ಯವಾಗಿ ಸಿನಿಮಾ ಸೋತ ಬಳಿಕ ಅದಕ್ಕೆ ಮುಂದಿನ ಭಾಗವನ್ನು ಮಾಡೋಕೆ ಯಾರೂ ಪ್ರಯತ್ನಿಸುವುದಿಲ್ಲ. ಒಂದೊಮ್ಮೆ ಲೈಕಾ ಆ ರೀತಿಯ ನಿರ್ಧಾರ ತೆಗೆದುಕೊಂಡರೆ ಮತ್ತೆ ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ: ಗಳಿಕೆ ಇಲ್ಲದೆ ಸಿನಿಮಾ ಅವಧಿಗೆ ಕತ್ತರಿ ಹಾಕಿದ ‘ಇಂಡಿಯನ್ 2’ ತಂಡ; ಎಷ್ಟು ನಿಮಿಷ ಕಟ್?

‘ಲೈಕಾ ಪ್ರೊಡಕ್ಷನ್ಸ್’ ಈ ಮೊದಲು ‘ದರ್ಬಾರ್’, ‘ಚಂದ್ರಮುಖಿ 2’, ‘ಲಾಲ್ ಸಲಾಮ್’, ‘ಮಾಫಿಯಾ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದೆ. ಆದಾಗ್ಯೂ ನಿರ್ಮಾಣ ಸಂಸ್ಥೆ ಸಿನಿಮಾಗೆ ಬಂಡವಾಳ ಹೂಡುವುದನ್ನು ನಿಲ್ಲಿಸಿಲ್ಲ. ಸದ್ಯ ಪರಿಸ್ಥಿತಿಯಲ್ಲಿ ‘ಇಂಡಿಯನ್ 3’ ಸಿನಿಮಾ ಮಾಡೋದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು