
‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಆಗಿದೆ. ಈ ಸಿನಿಮಾ ಒಳ್ಳೆಯ ಟಾಕ್ ಪಡೆದುಕೊಂಡಿದೆ. ಅಭಿಮಾನಿಗಳು ವಿಂಟೇಜ್ ಬಾಸ್ ಮತ್ತೆ ಬಂದಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ. ಚಿರಂಜೀವಿ ಅವರ ಸಿನಿಮಾ ಹಲವು ವರ್ಷಗಳ ಬಳಿಕೆ ಗೆದ್ದಿದೆ. ಈ ಮಧ್ಯೆ ಚಿರಂಜೀವಿ ವಲಯದಲ್ಲಿ ದುಃಖಕರ ಸುದ್ದಿ ಒಂದು ಸಿಕ್ಕಿದೆ. ಈ ಸಿನಿಮಾ ನೋಡಿದ ಅಭಿಮಾನಿ ಥಿಯೇಟರ್‌ನಲ್ಲಿ ಸಾವನಪ್ಪಿದ್ದಾರೆ.
ಸೋಲು ಕಾಣದ ಅನಿಲ್ ರವಿಪುಡಿ ಆ ಟ್ರ್ಯಾಕ್ ಅನ್ನು ಮುಂದುವರಿಸುತ್ತಿದ್ದಾರೆ ಮತ್ತು ಒಟ್ಟಾರೆಯಾಗಿ ಅವರು ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾವನ್ನು ಉತ್ತಮವಾಗಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಸಂತೋಷದಿಂದ ಕುಣಿತುತ್ತಿದ್ದಾರೆ. ಅಂತಹ ಸಮಯದಲ್ಲಿ, ಒಂದು ದುರಂತ ಸಂಭವಿಸಿದೆ.
ಚಿರಂಜೀವಿ ನಟಿಸಿದ ‘ಮನ ಶಂಕರ ವರ ಪ್ರಸಾದ್ ಗಾರು’ ಸಿನಿಮಾ ನೋಡುತ್ತಿದ್ದಾಗ ಹೈದರಾಬಾದ್‌ನ ಥಿಯೇಟರ್‌ನಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೋಮವಾರ (ಜನವರಿ 12) ಕುಕಟ್ಪಲ್ಲಿ ಭಾಗದ ಅರ್ಜುನ್ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿ ಸಿನಿಮಾ ಪ್ರದರ್ಶನದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು.
ಅಲ್ಲಿದ್ದವರು ಅವರನ್ನು ಬದುಕಿಸುವ ಪ್ರಯತ್ನಗಳನ್ನು ಮಾಡಿದರು. ಅವರು ಎದ್ದೇಳಲೇ ಇಲ್ಲ. ಥಿಯೇಟರ್ ಸಿಬ್ಬಂದಿ ಅವರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ತಲುಪಿದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯುವ ಸಾಧ್ಯತೆಯಿದೆ.
ಕಳೆದ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಬಂದು ಹಿಟ್ ಆಯಿತು. ಈ ಬಾರಿಯೂ ಅನಿಲ್ ನಿರ್ದೇಶನದ ಮತ್ತೊಂದು ಸಿನಿಮಾ ಬಂದು ಸೂಪರ್ ಹಿಟ್ ಆಯಿತು. ಈ ಮಧ್ಯೆ ಈ ರೀತಿಯ ದುಖಃಕರ ಸುದ್ದಿ ಸಿಕ್ಕಿದೆ.
ಇದನ್ನೂ ಓದಿ: ಮಾರ್ಕ್, ಡೆವಿಲ್ ರೀತಿಯೇ ಬುಕ್ ಮೈ ಶೋ ರೇಟಿಂಗ್ ನಿಷೇಧಿಸಿದ ಚಿರಂಜೀವಿ ಸಿನಿಮಾ
ಚಿರಂಜೀವಿ ಅವರು ಸತತ ಸೋಲಿನಿಂದ ಕಂಗೆಟ್ಟಿದ್ದರು. ಅವರಿಗೆ ಈಗ ಗೆಲುವು ಸಿಕ್ಕಿದೆ. ‘ಮನ ಶಂಕರ ವರ ಪ್ರಸಾದ್ ಗಾರು’ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಕೂಡ ಮುಖ್ಯಭೂಮಿಕೆಯಲ್ಲಿ ಇದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.