ಚಿರಂಜೀವಿಯ ಕ್ರೇಜ್ ಹೇಗಿತ್ತೆಂದರೆ 35 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು ಟಿಕೆಟ್

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಈಗಿನ ಹೊಸ ಸಿನಿಮಾ ಪ್ರೇಮಿಗಳ ದೃಷ್ಟಿಯಲ್ಲಿ ಔಟ್​ಡೇಟೆಡ್ ಸ್ಟಾರ್ ನಟ. ಅದಕ್ಕೆ ತಕ್ಕಂತೆ ಚಿರಂಜೀವಿಯ ಸಿನಿಮಾಗಳು ಒಂದರ ಹಿಂದೊಂದಂತೆ ಮಕಾಡೆ ಮಲಗುತ್ತಿವೆ. ಆದರೆ ಒಂದು ಸಮಯವಿತ್ತು. ಮೆಗಾಸ್ಟಾರ್ ಇದ್ದಾರೆಂದರೆ ಸಾಕು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುತ್ತಿದ್ದವು. ಚಿರಂಜೀವಿಯ ಸಿನಿಮಾ ಟಿಕೆಟ್ ಬ್ಲಾಕ್​ನಲ್ಲಿ 35 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದವು.

ಚಿರಂಜೀವಿಯ ಕ್ರೇಜ್ ಹೇಗಿತ್ತೆಂದರೆ 35 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು ಟಿಕೆಟ್
Chiranjeevi

Updated on: May 04, 2025 | 7:14 PM

ಮೆಗಾಸ್ಟಾರ್ ಚಿರಂಜೀವಿ (Chiranjeevi) ಈಗ ಬಹುತೇಕ ಹೊಸ ಸಿನಿಮಾ ಪ್ರೇಮಿಗಳಿಗೆ ಔಟ್ ಡೇಟೆಡ್ ನಟ. ಅದಕ್ಕೆ ತಕ್ಕಂತೆ ಚಿರಂಜೀವಿಯ ಸಿನಿಮಾ ಒಂದು ದೊಡ್ಡ ಹಿಟ್ ಆಗಿ ಅರ್ಧ ದಶಕ್ಕೂ ಹೆಚ್ಚು ಸಮಯವೇ ಆಗಿಬಿಟ್ಟಿದೆ. ಮೆಗಾಸ್ಟಾರ್ ಅವರ ಸಾಲು-ಸಾಲು ಸಿನಿಮಾಗಳು ಪ್ಲಾಪ್ ಆಗುತ್ತಿವೆ. ಇದೆಲ್ಲವೂ ಅವರನ್ನು ಔಟ್​ಡೇಟೆಡ್ ಸ್ಟಾರ್ ಅನ್ನಾಗಿಸಿದೆ ಜೆನ್ಜಿ ಸಿನಿಮಾ ಪ್ರೇಮಿಗಳಿಗೆ. ಆದರೆ ಒಂದು ಸಮಯದಲ್ಲಿ ಚಿರಂಜೀವಿಯ ಕ್ರೇಜ್ ಹೇಗಿತ್ತೆಂದರೆ ಈಗಿನ ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್ ಯಾರೂ ಸಹ ಆ ಕ್ರೇಜ್​ನ ಮಟ್ಟವನ್ನು ತಲುಪಲು ಸಾಧ್ಯವಿರಲಿಲ್ಲ. ಒಂದು ಉದಾಹರಣೆ ಇಲ್ಲಿದೆ ನೋಡಿ…

ಚಿರಂಜೀವಿ ನಟನೆಯ ‘ಜಗದೇಕ ವೀರುಡು, ಅತಿಲೋಕ ಸುಂದರಿ’ ಸಿನಿಮಾದ ಮರು ಬಿಡುಗಡೆ ಘೋಷಣೆ ಮಾಡಲಾಗಿದೆ. ಅಸಲಿಗೆ ಈ ಸಿನಿಮಾ ಮೊದಲು ಬಿಡುಗಡೆ ಆಗಿದ್ದು 1990 ರಲ್ಲಿ. ಆಗ ಈ ಸಿನಿಮಾ ಮಾಡದ ದಾಖಲೆಗಳಿಲ್ಲ. ಆಗ ಚಿರಂಜೀವಿಯ ಕ್ರೇಜ್ ಹೇಗಿತ್ತೆಂದರೆ ಈ ಸಿನಿಮಾದ ಟಿಕೆಟ್ 35 ಪಟ್ಟು ಹೆಚ್ಚಿನ ಬೆಲೆಗೆ ಬ್ಲಾಕ್​​ನಲ್ಲಿ ಮಾರಾಟ ಮಾಡಲಾಗಿತ್ತು. ಈ ಸಿನಿಮಾದ ಬ್ಲಾಕ್ ಟಿಕೆಟ್ ಮಾರಿ ಕೆಲವರು ಕಾರು, ಬೈಕುಗಳನ್ನು ಖರೀದಿ ಮಾಡಿದ್ದರಂತೆ ಆಗಿನ ಕಾಲದಲ್ಲೇ.

‘ಜಗದೇಕ ವೀರುಡು, ಅತಿಲೋಕ ಸುಂದರಿ’ ಸಿನಿಮಾದ 6 ರೂಪಾಯಿಯ ಟಿಕೆಟ್ ಆಗಿನ ಕಾಲದಲ್ಲಿಯೇ 210 ರೂಪಾಯಿಗೆ ಬ್ಲಾಕ್​ನಲ್ಲಿ ಮಾರಾಟವಾಗಿತ್ತಂತೆ. ಅತಿ ಹೆಚ್ಚು ಬೆಲೆಗೆ (ಮೌಲ್ಯದ ಲೆಕ್ಕದಲ್ಲಿ) ಬ್ಲಾಕ್​ನಲ್ಲಿ ಮಾರಾಟವಾದ ಟಿಕೆಟ್ ಇದೇ ಸಿನಿಮಾದ್ದು ಎನ್ನಲಾಗುತ್ತದೆ. ಈಗಿನ ಸಿನಿಮಾಗಳ ಟಿಕೆಟ್​ಗಳು ಬ್ಲಾಕ್​ನಲ್ಲಿ ಮಾರಾಟವಾಗುವುದೇ ಕಡಿಮೆ. ಆದರೂ ಸಹ 500 ರೂಪಾಯಿಯ ಟಿಕೆಟ್ 1000ಕ್ಕೆ ಹೆಚ್ಚೆಂದರೆ 2000ಕ್ಕೆ ಮಾರಾಟ ಆಗಬಹುದು. ಅದು ಎರಡು ಪಟ್ಟು ಹೆಚ್ಚಿನ ಬೆಲೆ ಎನ್ನಬಹುದು ಆದರೆ 35 ಪಟ್ಟು ಹೆಚ್ಚಿನ ಬೆಲೆಗೆ ಅದೂ 1990ರಲ್ಲಿ ಎಂದರೆ ಅದು ಸಾಮಾನ್ಯವಲ್ಲ.

ಇದನ್ನೂ ಓದಿ: ಆ ಒಂದು ಕಾರಣಕ್ಕೆ ರಾಜಮೌಳಿ ಸಿನಿಮಾದಲ್ಲಿ ನಟಿಸುವುದಿಲ್ಲವಂತೆ ಮೆಗಾಸ್ಟಾರ್ ಚಿರಂಜೀವಿ

ಅಂದಹಾಗೆ ‘ಜಗದೇಕ ವೀರುಡು, ಅತಿಲೋಕ ಸುಂದರಿ’ ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಉತ್ತರ ಆಂಧ್ರ ಪ್ರದೇಶದಲ್ಲಿ ಭಾರಿ ಪ್ರವಾಹ ಅಂತೆ. ಆದರೆ ಆ ಪ್ರವಾಹದ ನಡುವೆಯೂ ಜನ ಬಂದು ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾ ನೋಡುತ್ತಿದ್ದರಂತೆ. ಆಗಿನ ಕಾಲದಲ್ಲಿಯೇ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 15 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕಿತ್ತಂತೆ. ಈ ಮೇ 9ಕ್ಕೆ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾ ಬಿಡುಗಡೆ ಆಗಿ ಬರೋಬ್ಬರಿ 25 ವರ್ಷವಾಗುತ್ತದೆ. ಇದೇ ಸಂದರ್ಭದಲ್ಲಿ ಈ ಸಿನಿಮಾವನ್ನು 3ಡಿ ತಂತ್ರಜ್ಞಾನದ ಮೂಲಕ ಮರು ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾನಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ಶ್ರೀದೇವಿ ನಟಿಸಿದ್ದರು. ವಿಲನ್ ಆಗಿ ಬಾಲಿವುಡ್​ನ ಖ್ಯಾತ ನಟ ಅಮರೀಶ್ ಪುರಿ ನಟಿಸಿದ್ದರು. ಬ್ರಹ್ಮಾನಂದಂ, ತನಿಕೇಲ ಭರಣಿ ಇನ್ನೂ ಹಲವರು ಸಿನಿಮಾನಲ್ಲಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us