ಮಹೇಶ್​ ಬಾಬು-ರಾಜಮೌಳಿ ಸಿನಿಮಾದಲ್ಲಿ ಚಿಯಾನ್​ ವಿಕ್ರಮ್? ಸುಳಿವು ಕೊಟ್ಟ ನಟ

ದೊಡ್ಡ ಮಟ್ಟದಲ್ಲಿ ‘SSMB 29’ ಸಿನಿಮಾ ಮೂಡಿಬರಲಿದೆ. ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಕಾಂಬಿನೇಷನ್​ನ ಈ ಚಿತ್ರದಲ್ಲಿ ಚಿಯಾನ್​ ವಿಕ್ರಮ್​ ಕೂಡ ಇರುತ್ತಾರಾ ಎಂಬ ಅನುಮಾನ ಹುಟ್ಟಿದೆ. ಅದಕ್ಕೆ ಕಾರಣ ಆಗಿರುವುದು ವಿಕ್ರಮ್ ಅವರ ಒಂದು ಹೇಳಿಕೆ. ‘ತಂಗಲಾನ್​’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಹೊಸ ಸುಳಿವು ನೀಡಿದ್ದಾರೆ.

ಮಹೇಶ್​ ಬಾಬು-ರಾಜಮೌಳಿ ಸಿನಿಮಾದಲ್ಲಿ ಚಿಯಾನ್​ ವಿಕ್ರಮ್? ಸುಳಿವು ಕೊಟ್ಟ ನಟ
ಚಿಯಾನ್​ ವಿಕ್ರಮ್, ರಾಜಮೌಳಿ, ಮಹೇಶ್​ ಬಾಬು

Updated on: Aug 05, 2024 | 7:10 PM

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ‘ಆರ್​ಆರ್​ಆರ್​’ ಸಿನಿಮಾದ ನಂತರ ಮಹೇಶ್​ ಬಾಬು ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಈ ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಬಹಳ ದೊಡ್ಡದು. ಇನ್ನೂ ಶೂಟಿಂಗ್ ಆರಂಭವಾಗಿಲ್ಲ, ಅಷ್ಟರಲ್ಲಾಗಲೇ ಅನೇಕ ಬಗೆಯ ಎಗ್ಸೈಟಿಂಗ್​ ಸುದ್ದಿಗಳು ಕೇಳಿಬರುತ್ತಿವೆ. ಮಹೇಶ್​ ಬಾಬು ಅವರ ಲುಕ್ ಬಗ್ಗೆ ಜನರು ಮಾತನಾಡಲು ಆರಂಭಿಸಿದ್ದಾರೆ. ಈಗ ಈ ಚಿತ್ರತಂಡದ ಜೊತೆ ಚಿಯಾನ್​ ವಿಕ್ರಮ್ ಅವರ ಹೆಸರು ಕೂಡ ಸೇರಿಕೊಂಡಿದೆ. ಅದಕ್ಕೆ ಕಾರಣ ಆಗಿರುವುದು ಸ್ವತಃ ವಿಕ್ರಮ್​ ಅವರ ಒಂದು ಹೇಳಿಕೆ.

ಚಿಯಾನ್​ ವಿಕ್ರಮ್​ ಅವರು ‘ತಂಗಲಾನ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕೋಲಾರ ಚಿನ್ನದ ಗಣಿಯ ಕಹಾನಿ ಹೊಂದಿರುವ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಅದರ ಪ್ರಚಾರದ ಸಲುವಾಗಿ ಚಿತ್ರತಂಡದವರು ಇತ್ತೀಚೆಗೆ ಹೈದರಾಬಾದ್​ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೇಳಿಬಂದ ಪ್ರಶ್ನೆಗೆ ಉತ್ತರಿಸುವಾಗ ವಿಕ್ರಮ್​ ಅವರು ಒಂದು ಸುಳಿವು ಬಿಟ್ಟುಕೊಟ್ಟಿದ್ದಾರೆ.

‘ಒಂದು ಮಹತ್ವದ ಪ್ರಾಜೆಕ್ಟ್​ ಸಲುವಾಗಿ ನಾವು ಮಾತುಕಥೆ ಮಾಡುತ್ತಿದ್ದೇವೆ. ನಾವಿಬ್ಬರು ಒಂದು ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡುತ್ತೇವೆ. ಅದು ಯಾವ ಸಿನಿಮಾ ಎಂಬುದನ್ನು ನಾನು ವಿಚಾರಿಸಿಲ್ಲ’ ಎಂದು ಚಿಯಾನ್​ ವಿಕ್ರಮ್​ ಅವರು ಹೇಳಿದ್ದಾರೆ. ಅವರು ಮಾತನಾಡಿರುವುದು ‘SSMB 29’ ಸಿನಿಮಾದ ಬಗ್ಗೆಯೇ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಆ ಮೂಲಕ ಕೌತುಕ ಹೆಚ್ಚಾಗಿದೆ.

ಇದನ್ನೂ ಓದಿ: ಯಶ್​ ರೀತಿ ‘ಗೋಲ್ಡ್​’ ಮೇಲೆ ಕಣ್ಣಿಟ್ಟ ರಾಜಮೌಳಿ-ಮಹೇಶ್​ ಬಾಬು? ಶೀರ್ಷಿಕೆ ಬಗ್ಗೆ ಸುಳಿವು

ರಾಜಮೌಳಿ ಅವರ ಸಿನಿಮಾದಲ್ಲಿ ಹಲವು ಪಾತ್ರಗಳು ಇರುತ್ತವೆ. ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಅನೇಕ ಭಾಷೆಯ ಸ್ಟಾರ್​ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಕಾರಣದಿಂದಲೇ ‘SSMB 29’ ಸಿನಿಮಾದಲ್ಲಿ ಚಿಯಾನ್​ ವಿಕ್ರಮ್​ ಅವರು ಒಂದು ಮುಖ್ಯ ಪಾತ್ರವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಕುರಿತು ಚಿತ್ರತಂಡದವರು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us