ಯಶ್​ ರೀತಿ ‘ಗೋಲ್ಡ್​’ ಮೇಲೆ ಕಣ್ಣಿಟ್ಟ ರಾಜಮೌಳಿ-ಮಹೇಶ್​ ಬಾಬು? ಶೀರ್ಷಿಕೆ ಬಗ್ಗೆ ಸುಳಿವು

ಮಹೇಶ್​ ಬಾಬು ಅವರು ರಾಜಮೌಳಿ ಜೊತೆಗಿನ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ಅವರು ನಟಿಸುವ 29ನೇ ಸಿನಿಮಾ. ಸದ್ಯಕ್ಕೆ ಇದನ್ನು ‘SSMB 29’ ಎಂದು ಕರೆಯಲಾಗುತ್ತಿದೆ. ಶೀಘ್ರದಲ್ಲೇ ಟೈಟಲ್​ ಬಹಿರಂಗ ಆಗಲಿದೆ. ಮಹೇಶ್​ ಬಾಬು ಹುಟ್ಟುಹಬ್ಬದ ದಿನ ಹೊಸ ಸಿನಿಮಾದ ಶೀರ್ಷಿಕೆ ಬಗ್ಗೆ ಮಾಹಿತಿ ಬಹಿರಂಗ ಆಗಲಿದೆ ಎಂಬ ನಿರೀಕ್ಷೆ ಇದೆ.

ಯಶ್​ ರೀತಿ ‘ಗೋಲ್ಡ್​’ ಮೇಲೆ ಕಣ್ಣಿಟ್ಟ ರಾಜಮೌಳಿ-ಮಹೇಶ್​ ಬಾಬು? ಶೀರ್ಷಿಕೆ ಬಗ್ಗೆ ಸುಳಿವು
ರಾಜಮೌಳಿ, ಮಹೇಶ್​ ಬಾಬು
Follow us
ಮದನ್​ ಕುಮಾರ್​
|

Updated on: Jul 25, 2024 | 10:01 PM

ನಟ ಮಹೇಶ್​ ಬಾಬು ಅವರ ಜನ್ಮದಿನ ಸಮೀಪಿಸುತ್ತಿದೆ. ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾ ಟೈಟಲ್​ ಬಗ್ಗೆ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ. ‘ಗುಂಟೂರು ಖಾರಂ’ ಬಳಿಕ ಮಹೇಶ್​ ಬಾಬು ಅವರು ಹೊಸ ಸಿನಿಮಾಗೆ ಸಖತ್ ತಯಾರಿ ಮಾಡಿಕೊಂಡರು. ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಅವರು ಕೈ ಜೋಡಿಸಿದ್ದಾರೆ. ಮಹೇಶ್​ ಬಾಬು ಹಾಗೂ ರಾಜಮೌಳಿ ಜೊತೆಯಾಗಿ ಮಾಡಲಿರುವ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಶೀರ್ಷಿಕೆ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಟೈಟಲ್​ ಬಗ್ಗೆ ಒಂದು ಸುಳಿವು ಸಿಕ್ಕಿದೆ.

ರಾಜಮೌಳಿ ಅವರು ಪ್ರತಿ ಸಿನಿಮಾದ ಮೇಕಿಂಗ್​ಗೆ ತುಂಬ ಸಮಯ ಮೀಸಲಿಡುತ್ತಾರೆ. ಮಹೇಶ್​ ಬಾಬು ಜೊತೆಗಿನ ಸಿನಿಮಾಗೆ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಟೈಟಲ್​ ಅನೌನ್ಸ್​ ಆಗುವ ಸಾಧ್ಯತೆ ಇದೆ. ಮಹೇಶ್​ ಬಾಬು ಅವರ ಬರ್ತ್​ಡೇ ಪ್ರಯುಕ್ತ ಟೈಟಲ್​ ಬಹಿರಂಗ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರಕ್ಕೆ ‘ಗೋಲ್ಡ್​’ ಎಂದು ಶೀರ್ಷಿಕೆ ಇಡಲಾಗಿದೆ ಎಂಬ ಗಾಸಿಪ್​ ಕೇಳಿಬಂದಿದೆ.

ಟೈಟಲ್​ ಬಗ್ಗೆ ಚಿತ್ರತಂಡದವರು ಸದ್ಯಕ್ಕೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹಾಗಿದ್ರೂ ಕೂಡ ‘ಗೋಲ್ಡ್​’ ಎಂಬ ಶೀರ್ಷಿಕೆ ಕೇಳಿಬರುತ್ತಿದೆ. ನಟ ಯಶ್​ ಅವರು ‘ಕೆಜಿಎಫ್​’ ಸಿನಿಮಾದಲ್ಲಿ ಬಂಗಾರದ ಕಥೆ ಹೇಳಿದ್ದರು. ಈಗ ಮಹೇಶ್​ ಬಾಬು ಮತ್ತು ರಾಜಮೌಳಿ ಕೂಡ ‘ಗೋಲ್ಡ್​’ ಬಗೆಗಿನ ಕಥೆ ಹೇಳುತ್ತಾರಾ ಎಂಬ ಅನುಮಾನ ಮೂಡಿದೆ. ಈ ಎಲ್ಲ ಕಾರಣದಿಂದ ಈ ಪ್ರಾಜೆಕ್ಟ್​ ಮೇಲೆ ಜನರ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: ಬಡ ಕುಟುಂಬದ ಮೆಡಿಕಲ್ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ಮಾಡಿದ ಮಹೇಶ್​ ಬಾಬು ಮಗಳು

ಇದು ಮಹೇಶ್​ ಬಾಬು ನಟನೆಯ 29ನೇ ಸಿನಿಮಾ. ಶೀರ್ಷಿಕೆ ಬಹಿರಂಗ ಆಗುವ ತನಕ ತಾತ್ಕಾಲಿಕವಾಗಿ ಈ ಚಿತ್ರವನ್ನು ‘ಎಸ್​ಎಸ್​ಎಂಬಿ 29’ ಎಂದು ಕರೆಯಲಾಗುತ್ತದೆ. ಈ ಸಿನಿಮಾಗಾಗಿ ಮಹೇಶ್​ ಬಾಬು ಗೆಟಪ್​ ಬದಲಾಯಿಸಿಕೊಳ್ಳಲಿದ್ದಾರೆ. ಆಸ್ಕರ್​ ವಿಜೇತ ಮ್ಯೂಸಿಕ್​ ಡೈರೆಕ್ಟರ್​ ಎಂಎಂ ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ವಿಜಯೇಂದ್ರ ಪ್ರಸಾದ್​ ಸ್ಕ್ರಿಪ್ಟ್​ ಬರೆದಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ಗ್ರ್ಯಾಂಡ್​ ಸಕ್ಸಸ್​ ಬಳಿಕ ರಾಜಮೌಳಿ ಅವರು ಕೈಗೆತ್ತಿಕೊಂಡ ಸಿನಿಮಾ ಎಂಬ ಕಾರಣದಿಂದ ಅಭಿಮಾನಿಗಳ ಮನದಲ್ಲಿ ಬೆಟ್ಟದಷ್ಟು ಹೈಪ್​ ಕ್ರಿಯೇಟ್​ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.