‘ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್ ಸೀಸನ್​ 2’ ಫಿನಾಲೆ; ಯಾರಾಗಲಿದ್ದಾರೆ ವಿನ್ನರ್​?

| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 3:47 PM

ನೂರಾರು ಜನರ ಶ್ರಮದಿಂದ ಈ ಅಂತಿಮ ಸಂಚಿಕೆಗಳ ವೇದಿಕೆ ಸಜ್ಜಾಗಿದೆ. ಯಾರು ಚಾಂಪಿಯನ್​ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಪ್ರೇಕ್ಷಕರ ಮನದಲ್ಲಿ ಮೂಡಿದೆ.

‘ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್ ಸೀಸನ್​ 2’ ಫಿನಾಲೆ; ಯಾರಾಗಲಿದ್ದಾರೆ ವಿನ್ನರ್​?
ಕಾಮಿಡಿ ಕಿಲಾಡಿಗಳು
Follow us on

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಅನೇಕ ಪ್ರತಿಭಾವಂತರಿಗೆ ವೇದಿಕೆ ಸಿಕ್ಕಿದೆ. ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳಲ್ಲಿ ಇದೂ ಕೂಡ ಹೆಚ್ಚು ಜನಪ್ರಿಯವಾಗಿದೆ. ಇಷ್ಟು ದಿನಗಳ ಕಾಲ ಪ್ರೇಕ್ಷಕರನ್ನು ನಕ್ಕು ನಗಿಸಿದ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್​ಶಿಪ್​ ಸೀಸನ್​ 2’ ಶೋ ಈಗ ಫಿನಾಲೆ ಹಂತ ತಲುಪಿದೆ. ಇದೇ ಶನಿವಾರ (ಜು.10) ಮತ್ತು ಭಾನುವಾರ (ಜು.11) ಅದ್ದೂರಿಯಾಗಿ ಈ ಕಾರ್ಯಕ್ರಮದ ಫಿನಾಲೆ ಪ್ರಸಾರವಾಗಲಿದೆ.

ಹಲವು ಕಾರಣಗಳಿಗಾಗಿ ಈ ಶೋ ವಿಭಿನ್ನ ಎನಿಸಿಕೊಂಡಿದೆ. ಪ್ರತಿ ದಿನದ ಜಂಜಾಟದ ಬದುಕಿನಲ್ಲಿ ಸಿಲುಕಿದವರಿಗೆ ಕಾಮಿಡಿ ಕಿಲಾಡಿಗಳು ನಗುವಿನ ಕಚಗುಳಿ ಇಡುತ್ತಾರೆ. ಆ ಉದ್ದೇಶದಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ವಾರ ಪೂರ್ತಿ ತಯಾರಿ ನಡೆಸಿ, ವಾರಾಂತ್ಯದಲ್ಲಿ ಕರುನಾಡಿನ ಜನರನ್ನು ನಕ್ಕು ನಲಿಸಿದ ಖ್ಯಾತಿ ಕಾಮಿಡಿ ಕಿಲಾಡಿಗಳಿಗೆ ಸಲ್ಲುತ್ತದೆ. ಹೊಸ ಪರಿಲ್ಪನೆಯೊಂದಿಗೆ ಶೋ ಆರಂಭ ಆಗಿತ್ತು. ಮೂರು ಸೀಸನ್‍ನ ಕಿಲಾಡಿಗಳು 6 ತಂಡಗಳಾಗಿ ಪೈಪೋಟಿ ನಡೆಸಿದರು. 37 ವಾರಗಳು ನಡೆದ ಈ ಕಾರ್ಯಕ್ರಮದಲ್ಲಿ 220ಕ್ಕೂ ಅಧಿಕ ನಾಟಕಗಳು, ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಸ್ಕಿಟ್‍ಗಳನ್ನು ಪ್ರದರ್ಶಿಸಲಾಯಿತು. ಈಗ ಈ ಶೋ ಫಿನಾಲೆ ಹಂತಕ್ಕೆ ಬಂದಿದೆ.

ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್, ನಿರ್ದೇಶಕ ಯೋಗರಾಜ್​ ಭಟ್ ಹಾಗೂ ‘ಕ್ರೇಜಿ ಕ್ವೀನ್’ ರಕ್ಷಿತಾ ಪ್ರೇಮ್​ ಈ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ. ಮಾಸ್ಟರ್ ಆನಂದ್‍ ಅವರ ನಿರೂಪಣೆಯಲ್ಲಿ ಫಿನಾಲೆ ಎಪಿಸೋಡ್​ಗಳು ಮೂಡಿಬರಲಿವೆ. ನೂರಾರು ಜನರ ಶ್ರಮದಿಂದ ಈ ಅಂತಿಮ ಸಂಚಿಕೆಗಳ ವೇದಿಕೆ ಸಜ್ಜಾಗಿದೆ. ಯಾರು ಚಾಂಪಿಯನ್​ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕಾತರ ಪ್ರೇಕ್ಷಕರ ಮನದಲ್ಲಿ ಮೂಡಿದೆ.

6 ತಂಡಗಳ ವಿಭಿನ್ನ ಹಾಸ್ಯ ನಾಟಕಗಳ ಜೊತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಪ್ರತಿಭೆಗಳು ಕೂಡ ಪ್ರೇಕ್ಷಕರನ್ನು ಈ ವೇದಿಕೆಯಲ್ಲೇ ರಂಜಿಸಲು ಸಿದ್ಧರಾಗಿದ್ದಾರೆ. ಜುಲೈ 10ರ ಶನಿವಾರ ಹಾಗು 11ರ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಈ ಸಂಚಿಕೆಗಳಲ್ಲಿ ಮನರಂಜನೆಯ ಮಹಾಪೂರ ಹರಿಸುವ ಭರವಸೆಯನ್ನು ಜೀ ಕನ್ನಡ ವಾಹಿನಿ ನೀಡಿದೆ.

ಇದನ್ನೂ ಓದಿ:

‘ಇದು ಕೊನೆಯ ದಿನದ ಶೂಟಿಂಗ್’​; ಕಾಮಿಡಿ ಕಿಲಾಡಿಗೆ ರಕ್ಷಿತಾ ಭಾವುಕ ವಿದಾಯ

ರಿಯಾಲಿಟಿ ಶೋ ಸುಳ್ಳು ಅನ್ನೋದಕ್ಕೆ ಮತ್ತೊಂದು ಸಾಕ್ಷಿ? ಹಿಗ್ಗಾಮುಗ್ಗ ಟ್ರೋಲ್​ ಮಾಡಿದ ನೆಟ್ಟಿಗರು