‘ಅಂಬರೀಷ್​​​ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು?’; ಕುಮಾರಸ್ವಾಮಿ ಇದೇ ಮಾತನ್ನು ಹೇಳಿದ್ದರು; ದೊಡ್ಡಣ್ಣ ಆರೋಪ

‘ಅಂಬರೀಷ್​ ಸಾಯುವ ವೇಳೆ ಅಲ್ಲಿದ್ದಿದ್ದು ನಾನು, ಸುಮಲತಾ, ರಾಕ್‌ಲೈನ್ ವೆಂಕಟೇಶ್, ಅಭಿ.  ಅವರ ಮೃತದೇಹ ಮಂಡ್ಯಕ್ಕೆ ಕೊಂಡೊಯ್ಯಬೇಕೆಂದು ಹಠ ಮಾಡಿದ್ದು ಅಭಿ’ ಎಂದು ದೊಡ್ಡಣ್ಣ ಹೇಳಿದ್ದಾರೆ.

‘ಅಂಬರೀಷ್​​​ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು?’; ಕುಮಾರಸ್ವಾಮಿ ಇದೇ ಮಾತನ್ನು ಹೇಳಿದ್ದರು; ದೊಡ್ಡಣ್ಣ ಆರೋಪ
‘ಅಂಬರೀಷ್​​​ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು?’; ಕುಮಾರಸ್ವಾಮಿ ಇದೇ ಮಾತನ್ನು ಹೇಳಿದ್ದರು; ದೊಡ್ಡಣ್ಣ ಆರೋಪ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 3:23 PM

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಂಬರೀಷ್ ಕುಟುಂಬದವರ ಮೇಲೆ ಹಾಗೂ ಅವರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಜನರು ಸಿಡಿದೆದ್ದಿದ್ದಾರೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅಂಬರೀಷ್​​ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು ಎಂಬುದಾಗಿ ಎಚ್​ಡಿಕೆ ಕೇಳಿದ್ದರು ಎಂದು ದೊಡ್ಡಣ್ಣ ಆರೋಪಿಸಿದ್ದಾರೆ.

‘ಅಂಬರೀಷ್​ ಸ್ಮಾರಕ ನಿರ್ಮಾಣದ ಮನವಿ ಮಾಡಲು ಹೋಗಿದ್ದೆವು. ಈ ವೇಳೆ ನಮ್ಮನ್ನು ಕಾಯಿಸಿದ್ದರು. ನಂತರ ಮನವಿ ಪತ್ರ ಕೊಟ್ಟಾಗ ‘ಸ್ಮಾರಕ ಮಾಡಲು ಅವನೇನು ಮಾಡಿದ್ದಾನೆ’ ಎಂದು ನಮ್ಮ ಮನವಿ ಪತ್ರವನ್ನು ಎಸೆದಿದ್ದರು. ಅಂಬರೀಷ್​​ ಸ್ಮಾರಕ ಮಾಡಿದ್ದು ಕುಮಾರಸ್ವಾಮಿ ಅಲ್ಲವೇ ಅಲ್ಲ. ಅದನ್ನು ಮಾಡಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ’ ಎಂದು ದೊಡ್ಡಣ್ಣ ಹೇಳಿದ್ದಾರೆ.

‘ಅಂಬರೀಷ್​ ಅನ್ನೋದು ಒಂದು ಮಹಾನ್ ಶಕ್ತಿ. ಅವರಲ್ಲಿ ಅತ್ಯಂತ ದಿಟ್ಟತನ ಇತ್ತು. ಅಂಬರೀಷ್​ ಸತ್ತಾಗ ಭಾವುಕರಾಗಿ ಜನ ಅತ್ತಿರೋದನ್ನು ನಾನು ನೋಡಿದ್ದೇನೆ. ಆ ಗಡಸು ಮಾತಿನ ಹಿಂದೆ ಮಲ್ಲಿಗೆ ಹೂವಿನಂತಹ ಮನಸ್ಸಿತ್ತು. ಅಂಬರೀಷ್​​ ಇದ್ದಾಗಲೂ ಅದೇ ಗೌರವ ಇತ್ತು. ಹೋದಾಗಲೂ ಅದೇ ಗೌರವ ಇದೆ’ ಎಂದು ದೊಡ್ಡಣ್ಣ ಹೇಳಿದ್ದಾರೆ.

‘ಸಿನಿಮಾದವರು ಯಾರ ತಂಟೆಗೂ ಹೋಗುವವರಲ್ಲ. ಚಿತ್ರರಂಗ ನಮ್ಮೆಲ್ಲರ ತಾಯಿ, ನಮ್ಮದು ಒಂದೇ ಕುಟುಂಬ. ಒಬ್ಬರಿಗೆ ಹೇಳಿದರೆ ಅದರಿಂದ ಎಲ್ಲರಿಗೂ ನೋವಾಗುತ್ತದೆ. ಕಲಾವಿದರು ಅತ್ಯಂತ ಭಾವುಕರು. ಅವರನ್ಯಾಕೆ ಪದೇಪದೇ ಬೊಟ್ಟು ಮಾಡಿ ತೋರಿಸುತ್ತೀರಿ?’ ಎಂದು ದೊಡ್ಡಣ್ಣ ಪ್ರಶ್ನೆ ಮಾಡಿದ್ದಾರೆ.

‘ಅಂಬರೀಷ್​ ಸಾಯುವ ವೇಳೆ ಅಲ್ಲಿದ್ದಿದ್ದು ನಾನು, ಸುಮಲತಾ, ರಾಕ್‌ಲೈನ್ ವೆಂಕಟೇಶ್, ಅಭಿ.  ಅವರ ಮೃತದೇಹ ಮಂಡ್ಯಕ್ಕೆ ಕೊಂಡೊಯ್ಯಬೇಕೆಂದು ಹಠ ಮಾಡಿದ್ದು ಅಭಿ’ ಎಂದು ದೊಡ್ಡಣ್ಣ ಹೇಳಿದ್ದಾರೆ.

ಇದನ್ನೂ ಓದಿ: ನನ್ನ- ಸುಮಲತಾ ಮಧ್ಯೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು: ಅಂಬರೀಷ್ ಕುಟುಂಬದ ಅತ್ಯಾಪ್ತ ರಾಕ್​ಲೈನ್ ವೆಂಕಟೇಶ್

ಡಾ. ರಾಜ್​, ಅಂಬರೀಷ್​ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್​ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್