ಅಂಬರೀಷ್ ಸ್ಮಾರಕ ಪತ್ರವನ್ನು ಕುಮಾರಸ್ವಾಮಿ ಎಸೆದಿದ್ದರು; ದೊಡ್ಡಣ್ಣ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅಂಬರೀಷ್ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು ಎಂಬುದಾಗಿ ಎಚ್ಡಿಕೆ ಕೇಳಿದ್ದರು ಎಂದು ದೊಡ್ಡಣ್ಣ ಆರೋಪಿಸಿದ್ದಾರೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅಂಬರೀಷ್ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು ಎಂಬುದಾಗಿ ಎಚ್ಡಿಕೆ ಕೇಳಿದ್ದರು ಎಂದು ದೊಡ್ಡಣ್ಣ ಆರೋಪಿಸಿದ್ದಾರೆ.
‘ಅಂಬರೀಷ್ ಸ್ಮಾರಕ ನಿರ್ಮಾಣದ ಮನವಿ ಮಾಡಲು ಹೋಗಿದ್ದೆವು. ಈ ವೇಳೆ ನಮ್ಮನ್ನು ಕಾಯಿಸಿದ್ದರು. ನಂತರ ಮನವಿ ಪತ್ರ ಕೊಟ್ಟಾಗ ‘ಸ್ಮಾರಕ ಮಾಡಲು ಅವನೇನು ಮಾಡಿದ್ದಾನೆ’ ಎಂದು ನಮ್ಮ ಮನವಿ ಪತ್ರವನ್ನು ಎಸೆದಿದ್ದರು. ಅಂಬರೀಷ್ ಸ್ಮಾರಕ ಮಾಡಿದ್ದು ಕುಮಾರಸ್ವಾಮಿ ಅಲ್ಲವೇ ಅಲ್ಲ. ಅದನ್ನು ಮಾಡಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ’ ಎಂದು ದೊಡ್ಡಣ್ಣ ಹೇಳಿದ್ದಾರೆ.
ಇದನ್ನೂ ಓದಿ: ‘ಅಂಬರೀಷ್ ಏನು ಮಾಡಿದ್ದಾನೆ ಎಂದು ಸ್ಮಾರಕ ಮಾಡಬೇಕು?’; ಕುಮಾರಸ್ವಾಮಿ ಇದೇ ಮಾತನ್ನು ಹೇಳಿದ್ದರು; ದೊಡ್ಡಣ್ಣ ಆರೋಪ
Latest Videos