ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್ ಬಗ್ಗೆ ಅನೇಕರಿಗೆ ಗೊತ್ತು. ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇದ್ದಾಗ ಅವರು ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡಿ, ರೀಲ್ಸ್ ಮಾಡಿ ಗಮನ ಸೆಳೆದರು. ಅವರು ಈ ಮೊದಲು ವಿವಿಧ ರೀತಿಯ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರು. ಈಗ ಅವರು ತೆಲುಗು ಸಿನಿಮಾದಲ್ಲಿ ನಟಿಸೋದು ಪಕ್ಕಾ ಆಗಿದೆ. ಈ ಬಗ್ಗೆ ವೇದಿಕೆ ಮೇಲೆ ಮಾಹಿತಿ ರಿವೀಲ್ ಆಗಿದೆ.
ಮೈತ್ರಿ ಮೂವೀ ಮೇಕರ್ಸ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದೆ. ಇವರು ಈಗ ಡೇವಿಡ್ ವಾರ್ನರ್ನ ಕರೆತಂದಿದ್ದಾರೆ. ಈ ಸಂಸ್ಥೆಯ ನಿರ್ಮಾಪಕರಲ್ಲಿ ಒಬ್ಬರಾದ ರವಿ ಶಂಕರ್ ಅವರು ಪ್ರೆಸ್ಮೀಟ್ ಒಂದರಲ್ಲಿ ಈ ಮಾತನ್ನು ಹೇಳಿದ್ದಾರೆ. ಈ ಸಂಸ್ಥೆ ನಿರ್ಮಾಣ ಮಾಡುತ್ತಿರುವ ‘ರಾಬಿನ್ ಹುಡ್’ ಚಿತ್ರದಲ್ಲಿ ಡೇವಿಡ್ ವಾರ್ನರ್ ಅತಿಥಿ ಪಾತ್ರ ಮಾಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅವರ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಅವರನ್ನು ದೊಡ್ಡ ಪರದೆಯಮೇಲೆ ನೋಡಲು ಫ್ಯಾನ್ಸ್ ಕೂಡ ಕಾದಿದ್ದಾರೆ. ಡೇವಿಡ್ ವಾರ್ನರ್ ಅವರ ಪರ್ಸನಾಲಿಟಿ ಭಿನ್ನವಾಗಿದೆ. ತೆಲುಗು ಪ್ರೇಕ್ಷಕರ ಜೊತೆ ಅವರು ಒಳ್ಳೆಯ ನಂಟು ಹೊಂದಿರುವುದರಿಂದ ಮತ್ತಷ್ಟು ಇಷ್ಟ ಆಗುವ ಸಾಧ್ಯತೆ ಹೆಚ್ಚು.
‘ರಾಬಿನ್ ಹುಡ್’ ಚಿತ್ರ ಮಾರ್ಚ್ 28ರಂದು ತೆರೆಮೇಲೆ ಬರಲಿದೆ. ಅಂದರೆ, ಈಗಾಗಲೇ ಚಿತ್ರದ ಶೂಟ್ ಕೂಡ ಪೂರ್ಣಗೊಂಡಿದೆ. ಡೇವಿಡ್ ವಾರ್ನರ್ ಭಾಗದ ಶೂಟ್ನ ಗುಟ್ಟಾಗಿ ಮಾಡಲಾಗಿದೆ. ಇಷ್ಟು ದಿನ ತಂಡ ಈ ಬಗ್ಗೆ ಗೌಪ್ಯತೆ ಕಾದುಕೊಂಡು ಬಂದಿತ್ತು. ನಿತಿನ್, ಶ್ರೀಲೀಲಾ ಮೊದಲಾದವರು ನಟಿಸಿದ್ದಾರೆ. ವೆಂಕಿ ಕುಡುಮುಲಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಕ್ರಿಕೆಟಿಗ ಡೇವಿಡ್ ವಾರ್ನರ್
ಡೇವಿಡ್ ವಾರ್ನರ್ 2025ರ ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆಗಿದ್ದಾರೆ. ಅವರ ಬೇಸ್ ಬೆಲೆ 2 ಕೋಟಿ ರೂಪಾಯಿ ಆಗಿತ್ತು. 2024ರ ಟಿ20 ವರ್ಲ್ಡ್ಕಪ್ನಿಂದ ಹೊರಬಿದ್ದ ಬಳಿಕ ವಾರ್ನರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Tue, 4 March 25