ನಟ ರಣವೀರ್ ಸಿಂಗ್​ಗೆ​ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!

Deepika Padukone | Ranveer Singh: 2018ರಲ್ಲಿ ಬಾಳಬಂಧನಕ್ಕೆ ಒಳಗಾದ ಈ ಜೋಡಿ ಹಾಯಾಗಿ ದಾಂಪತ್ಯ ಜೀವನ ನಡೆಸುತ್ತಿದೆ. ಈಗ ದೀಪಿಕಾ ಹೇಳಿರುವ ಮಾತು ವೈರಲ್​ ಆಗುತ್ತಿದೆ.

ನಟ ರಣವೀರ್ ಸಿಂಗ್​ಗೆ​ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!
ದೀಪಿಕಾ ಪಡುಕೋಣೆ - ರಣವೀರ್​ ಸಿಂಗ್​

Updated on: Apr 20, 2021 | 5:41 PM

ನಟ ರಣವೀರ್​ ಸಿಂಗ್​ ಮತ್ತು ನಟಿ ದೀಪಿಕಾ ಪಡುಕೋಣೆ ಬಾಲಿವುಡ್​ನ ಕ್ಯೂಟ್​ ಕಪಲ್​ ಎನಿಸಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ಈ ಜೋಡಿ ಈಗ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇದರ ನಡುವೆ ರಣವೀರ್​ ಸಿಂಗ್​ಗೆ ದೀಪಿಕಾ ಪಡುಕೋಣೆ ಬೆದರಿಕೆ ಹಾಕಿದ್ದಾರೆ. ಅದು ಕೂಡ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ ಎಂಬುದು ಗಮನಿಸಬೇಕಾದ ವಿಚಾರ. ಅಷ್ಟಕ್ಕೂ ಈ ದಂಪತಿ ನಡುವೆ ಏನಾಯ್ತು? ಇಲ್ಲಿದೆ ಇಂಟರೆಸ್ಟಿಂಗ್​ ಸ್ಟೋರಿ…

ಹಿಂದಿ ಚಿತ್ರರಂಗದ ಟಾಪ್​ ನಟರಲ್ಲಿ ಒಬ್ಬರಾಗಿರುವ ರಣವೀರ್​ ಸಿಂಗ್​ ಅನೇಕ ಖಾಸಗಿ ಕಂಪನಿಗಳಿಗೆ ಬ್ರ್ಯಾಂಡ್​ ಅಂಬಾಸಡರ್​ ಆಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಅವರು ಅಭಿನಯಿಸುತ್ತಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಯಶಸ್ವಿ ಆಗಿರುವ ಅವರಿಗೆ ಜಾಹೀರಾತು ಲೋಕದಲ್ಲೂ ದೊಡ್ಡಮಟ್ಟದ ಬೇಡಿಕೆ ಇದೆ. ಇತ್ತೀಚೆಗೆ ತಾವು ನಟಿಸಿದ ಒಂದು ಜಾಹೀರಾತಿನ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ದೀಪಿಕಾ ಮಾಡಿದ ಕಮೆಂಟ್​ ಎಲ್ಲರ ಗಮನ ಸೆಳೆಯುತ್ತಿದೆ.

‘ಯಾವ ಸಾಧ್ಯತೆಗಳನ್ನು ನೀವು ನೋಡುತ್ತೀರಿ?’ ಎಂದು ಆ ವಿಡಿಯೋಗೆ ರಣವೀರ್​ ಸಿಂಗ್​ ಕ್ಯಾಪ್ಷನ್​ ನೀಡಿದ್ದರು. ಅದಕ್ಕೆ ಹಲವು ಸೆಲೆಬ್ರಿಟಿಗಳು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ಅವುಗಳ ನಡುವೆ ಎದ್ದು ಕಾಣುತ್ತಿರುವುದು ದೀಪಿಕಾ ಮಾಡಿರುವ ಕಮೆಂಟ್​. ‘ನೀವು ಸಮಯಕ್ಕೆ ಸರಿಯಾಗಿ ರಾತ್ರಿ ಊಟಕ್ಕೆ ಬಾರದಿದ್ದರೆ ನಿಮಗೆ ಹೊಡೆತೆ ಬೀಳುವ ಸಾಧ್ಯತೆ ಇದೆ’ ಎಂದು ದೀಪಿಕಾ ಕಮೆಂಟ್​ ಮಾಡಿದ್ದಾರೆ! ಹೀಗೆ ಅವರು ಗಂಡನಿಗೆ ತಮಾಷೆಯಾಗಿ ಬೆದರಿಕೆ ಹಾಕಿರುವುದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

2018ರಲ್ಲಿ ಬಾಳಬಂಧನಕ್ಕೆ ಒಳಗಾದ ಈ ಜೋಡಿ ಹಾಯಾಗಿ ದಾಂಪತ್ಯ ಜೀವನ ನಡೆಸುತ್ತಿದೆ. ಮದುವೆಗೂ ಮುನ್ನವೇ ಸಾಲು ಸಾಲು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ದೀಪಿಕಾ ಮತ್ತು ರಣವೀರ್​ ಸಿಂಗ್​ ಮದುವೆ ಬಳಿಕ ‘83’ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಾರೆ.

1983ರ ಕ್ರಿಕೆಟ್ ವರ್ಲ್ಡ್​ಕಪ್​ ಕುರಿತಾಗಿ ಈ ಸಿನಿಮಾ ಮೂಡಿಬಂದಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ. ಅವರ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರಲ್ಲಿಯೇ ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ವೈರಸ್​ ಕಾರಣದಿಂದಾಗಿ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿದೆ. ಇದಲ್ಲದೇ ಅನೇಕ ಸಿನಿಮಾ ಆಫರ್​ಗಳು ಈ ಸೆಲೆಬ್ರಿಟಿ ದಂಪತಿಯ ಕೈಯಲ್ಲಿವೆ.

ಇದನ್ನೂ ಓದಿ: ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್​ ಸಿಂಗ್​! ಕೊರೊನಾ ಕಾರಣ

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us