ರಾತ್ರೋರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ-ರಣವೀರ್ ಸಿಂಗ್! ಕೊರೊನಾ ಕಾರಣ
ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹರಡುತ್ತಿದೆ. ಮುಂಬೈ ಮಹಾನಗರದಲ್ಲೂ ಕೊವಿಡ್-19 ಹಾವಳಿ ಮಿತಿ ಮೀರುತ್ತಿದೆ. ಅದನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ 15 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ.
ನಟಿ ದೀಪಿಕಾ ಪಡುಕೋಣೆ ಮೂಲತಃ ಬೆಂಗಳೂರಿನವರು. ಆದರೆ ಬಾಲಿವುಡ್ನಲ್ಲಿ ಅವಕಾಶ ಸಿಕ್ಕ ಬಳಿಕ ಸಿನಿಮಾ ಚಟುವಟಿಕೆಗಳ ಸಲುವಾಗಿ ಅವರು ಮುಂಬೈನಲ್ಲಿ ಹೆಚ್ಚಾಗಿ ವಾಸಿಸಲು ಆರಂಭಿಸಿದರು. ನಟ ರಣವೀರ್ ಸಿಂಗ್ ಜೊತೆ ಮದುವೆ ಆದ ಬಳಿಕ ಅಲ್ಲಿಯೇ ಸೆಟ್ಲ್ ಆದರು. ಆದರೆ ಈಗ ಅವರು ರಾತ್ರೋ ರಾತ್ರಿ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನೇಕ ಬಗೆಯ ಗುಸುಗುಸು ಹರಿದಾಡುತ್ತಿದೆ. ಈ ಸ್ಟಾರ್ ದಂಪತಿ ಯಾಕೆ ಧಿಡೀರ್ ಅಂತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ ಎಂಬ ಬಗ್ಗೆ ಕೆಲವೆಡೆ ವರದಿ ಆಗಿದೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೀಗೆ ಏಕಾಏಕಿ ವಾಣಿಜ್ಯ ನಗರಿ ಬಿಟ್ಟು ಉದ್ಯಾನ ನಗರಿಯತ್ತ ಪ್ರಯಾಣ ಬೆಳೆಸಿದ್ದಕ್ಕೆ ಕೊರೊನಾ ವೈರಸ್ ಕಾರಣ ಎನ್ನಲಾಗುತ್ತಿದೆ! ಹಾಗಂತ ಈ ಸೆಲೆಬ್ರಿಟಿ ಜೋಡಿಗೆ ಕೊವಿಡ್-19 ಪಾಸಿಟಿವ್ ಆಗಿಲ್ಲ. ಬದಲಿಗೆ, ಕೊರೊನಾದಿಂದಾಗಿ ಮುಂಬೈನಲ್ಲಿ ಆಗಿರುವ ಜನತಾ ಕರ್ಫ್ಯೂನಿಂದ ತಪ್ಪಿಸಿಕೊಳ್ಳಲು ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಕೊರೊನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹರಡುತ್ತಿದೆ. ಮುಂಬೈ ಮಹಾನಗರದಲ್ಲೂ ಕೊವಿಡ್-19 ಹಾವಳಿ ಮಿತಿ ಮೀರುತ್ತಿದೆ. ಅದನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ 15 ದಿನಗಳ ಜನತಾ ಕರ್ಫ್ಯೂ ಜಾರಿ ಮಾಡಿದೆ. ಅತಿ ಅವಶ್ಯಕ ಕೆಲಸಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಿನಿಮಾ ಚಿತ್ರೀಕರಣದ ಮೇಲೂ ನಿರ್ಬಂಧ ಹೇರಲಾಗಿದೆ. ಹಾಗಾಗಿ ಈ ಸಮಯದಲ್ಲಿ ದೀಪಿಕಾ-ರಣವೀರ್ ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕುವ ಅನಿವಾರ್ಯತೆ ಎದುರಾಗಿದೆ.
ಮುಂಬೈನಲ್ಲಿ ಕರ್ಫ್ಯೂ ಸಂದರ್ಭವನ್ನು ತಪ್ಪಿಸಿಕೊಳ್ಳಲು ದೀಪಿಕಾ ಮತ್ತು ರಣವೀರ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಈ ಸ್ಟಾರ್ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕರ್ನಾಟಕದಲ್ಲಿಯೂ ಮತ್ತೆ ಲಾಕ್ಡೌನ್ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ವೇಳೆ ಬೆಂಗಳೂರಿನಲ್ಲಿ ಇಬ್ಬರೂ ಜೊತೆಯಾಗಿ ಕಾಲ ಕಳೆಯಲಿದ್ದಾರೆ. ದೀಪಿಕಾ-ರಣವೀರ್ ನಟಿಸಿರುವ ‘83’ ಸಿನಿಮಾ ಜೂ.4ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: Indira Nagar Ka Gunda: ದ್ರಾವಿಡ್ ಬಳಿಕ ನಾನೇ ಇಂದಿರಾ ನಗರದ ಗೂಂಡಾ ಎನ್ನುತ್ತಿದ್ದಾರೆ ದೀಪಿಕಾ ಪಡುಕೋಣೆ!