ಮಗನಿಗೆ ಸೇರಬೇಕಿದ್ದ 2,603 ಕೋಟಿ ರೂ ಆಸ್ತಿಯನ್ನು ಜಾಕಿ ಚಾನ್ ಚಾರಿಟಿಗೆ ನೀಡಿದ್ದೇಕೆ?
ಡ್ರಗ್ ಪ್ರಕರಣದಲ್ಲಿ ಜಾಕಿ ಚಾನ್ ಮಗ ಜೈಸಿ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಬೇಸರ ಹೊರ ಹಾಕಿದ್ದರು.
ನಟ ಜಾಕಿ ಚಾನ್ ಇತ್ತೀಚೆಗೆ 67ನೇ ವಯಸ್ಸಿಗೆ ಕಾಲಿಟ್ಟಿದ್ದರು. ಇವರು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ ತುಂಬಾನೇ ದೊಡ್ಡ ಮೊತ್ತದ್ದು. ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಜಾಕಿ ಚಾನ್ ಮೊದಲ ಸ್ಥಾನದಲ್ಲಿದ್ದಾರೆ. ಅಚ್ಚರಿ ಎಂದರೆ, ಇವರು ತಮ್ಮ 2603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ (ದತ್ತಿ) ಕೊಟ್ಟಿದ್ದಾರೆ.
2019ರಲ್ಲಿ ಜಾಕಿ ಚಾನ್ ಬರೋಬ್ಬರಿ 267 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರತಿ ವರ್ಷ ಅವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ, ಇವರು ತಮ್ಮೆಲ್ಲ ಆಸ್ತಿಯನ್ನು ಚಾರಿಟಿಗೆ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಹೀಗೆ ಮಾಡುವುದಕ್ಕೂ ಒಂದು ಬಲವಾದ ಕಾರಣವಿದೆ. ಜಾಕಿ ಚಾನ್ ಮಗನ ಹೆಸರು ಜೈಸಿ ಚಾನ್. ವೃತ್ತಿಯಲ್ಲಿ ಮ್ಯೂಸಿಷಿಯನ್ ಹಾಗೂ ನಟ. 2014ರಲ್ಲಿ ಜೈಸಿ ಡ್ರಗ್ ಪ್ರಕರಣವೊಂದಲ್ಲಿ ಸಿಲುಕಿದ್ದರು. ಅರೆಸ್ಟ್ ಕೂಡ ಆಗಿದ್ದರು. ಆ ಸಮಯದಲ್ಲಿ ಮಗನ ಪರವಾಗಿ ಜಾಕಿ ಚಾನ್ ಕ್ಷಮೆ ಕೇಳಿದ್ದರು.
ಡ್ರಗ್ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದರು. ನನ್ನ ಮಗನನ್ನು ಡ್ರಗ್ಸ್ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ ಎಂದು ಜಾಕಿ ಚಾನ್ ಬೇಸರ ಹೊರ ಹಾಕಿದ್ದರು.
ನನ್ನ ಮಗ ಸಮರ್ಥನಾಗಿದ್ದರೆ ಸ್ವಂತ ಹಣವನ್ನು ಸಂಪಾದಿಸಬಹುದು. ಇಲ್ಲದಿದ್ದರೆ, ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ ಎಂದು ಅವರು ಹೇಳಿಕೊಂಡಿದ್ದರು. ಮಗ ತಪ್ಪು ಹಾದಿ ಹಿಡಿದ್ದಾನೆ ಎನ್ನುವ ಕಾರಣಕ್ಕೆ ತಮ್ಮ ಆಸ್ತಿಯನ್ನು ಜಾಕಿ ಚಾನ್ ಚಾರಿಟಿಗೆ ನೀಡಿದ್ದಾರೆ.