ಯಾವ ವಿಚಾರದಲ್ಲಿ ನೋವಾಗಬಾರದಿತ್ತೋ ಅದೇ ವಿಚಾರದಲ್ಲಿ ಶುಭಾ ಪೂಂಜಾಗೆ ನೋವಾಗ್ತಿದೆ!
ಗಾರ್ಡನ್ ಏರಿಯಾದಿಂದ ಎಲ್ಲರೂ ಮನೆ ಒಳಗೆ ಹೋಗುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಇದಕ್ಕೆ ಶುಭಾ ಪೂಂಜಾ ಬೇಸರ ಹೊರ ಹಾಕಿ ಒಲ್ಲದ ಮನಸ್ಸಿನಿಂದ ಮನೆ ಒಳಗೆ ಹೋದರು.
ಬಿಗ್ ಬಾಸ್ ಮನೆಯಲ್ಲಿರುವ ನಟಿ ಶುಭಾ ಪೂಂಜಾ ತುಂಬಾನೇ ಸೂಕ್ಷ್ಮ. ಯಾವುದೇ ವಿಚಾರವನ್ನು ಹೇಳಿದರೂ ಅವರು ಗಂಭೀರವಾಗಿ ಪರಿಗಣಿಸುತ್ತಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಅವರಿಗೆ ಕಣ್ಣಲ್ಲಿ ನೀರು ಬಂದುಬಿಡುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ತುಂಬಾನೇ ನೋವಾಗುವ ಘಟನೆ ಒಂದು ನಡೆದಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಅವರು ಕಣ್ಣೀರು ಕೂಡ ಹಾಕಿದ್ದಾರೆ. ಬಿಗ್ ಬಾಸ್ ಮನೆಯ ಹೊರ ಭಾಗದಲ್ಲಿ ಧಾರಾಕಾರವಾಗಿ ಮಳೆ ಬರುವ ಸೂಚನೆ ಇತ್ತು. ಹೀಗಾಗಿ, ಗಾರ್ಡನ್ ಏರಿಯಾದಿಂದ ಎಲ್ಲರೂ ಮನೆ ಒಳಗೆ ಹೋಗುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಇದಕ್ಕೆ ಶುಭಾ ಪೂಂಜಾ ಬೇಸರ ಹೊರ ಹಾಕಿ ಒಲ್ಲದ ಮನಸ್ಸಿನಿಂದ ಮನೆ ಒಳಗೆ ಹೋದರು.
ಬಿಗ್ ಬಾಸ್ ಮನೆ ಒಳಗೆ ಹೋಗುತ್ತಿದ್ದಂತೆ ಬಾಗಿಲನ್ನು ಹಾಕಲಾಯಿತು. ಈ ವೇಳೆ ಜೋರಾಗಿ ಮಳೆ ಸುರಿಯೋಕೆ ಆರಂಭವಾಯಿತು. ಇದನ್ನು ನೋಡಿ ಶುಭಾ ತುಂಬಾನೇ ಬೇಸರ ಹೊರ ಹಾಕಿದರು. ನಿನ್ನೆ ಮಳೆ ಬಂದಿತ್ತು. ಆದರೂ ನೆನೆಯೋಕೆ ಅವಕಾಶ ಕೊಟ್ಟಿಲ್ಲ. ಇಂದು ಕೂಡ ಬಿಗ್ ಬಾಸ್ ಮಳೆ ಬರುತ್ತಿದೆ. ಆದರೆ, ಮಳೆಯಲ್ಲಿ ನೆನೆಯೋಕೆ ಬಿಗ್ ಬಾಸ್ ಅವಕಾಶ ಕೊಡುತ್ತಿಲ್ಲ ಎಂದು ಬೇಸರ ಹೊರ ಹಾಕಿದರು.
ಮಂಜು ಪಕ್ಕ ಕೂತಿದ್ದ ಶುಭಾ ತಲೆ ಮುಚ್ಚಿಕೊಂಡಿದ್ದರು. ಈ ವೇಳೆ ಏಕಾಏಕಿ ಒಂದೇ ಸಮನೆ ಅವರು ಅಳೋಕೆ ಪ್ರಾರಂಭಿಸಿದರು. ನಿಜವಾಗಲೂ ನೀವು ಅಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಶುಭಾ, ದಿನಾ ಟಾಸ್ಕ್ ಮಾಡಿ ಸಾಕಾಗಿದೆ. ಒಂದೇ ಒಂದು ದಿನ ಕೂಡ ಮಳೆಯಲ್ಲಿ ನೆನೆಯೋಕೆ ಅವಕಾಶ ಕೊಟ್ಟಿಲ್ಲ. ಈ ಮಳೆ ಮತ್ತೆ ನಾಳೆ ಬರುವುದಿಲ್ಲ ಎಂದು ಬೇಸರ ಹೊರ ಹಾಕಿದರು. ಕೊನೆಗೆ ಅವರಿಗೆ ಮಳೆಯಲ್ಲಿ ಆಡೋಕೆ ಅವಕಾಶ ನೀಡಲಾಯಿತು. ಆ ನಂತರವೇ ಅವರು ಖುಷಿಯಿಂದ ಮಳೆಯಲ್ಲಿ ನೆನೆದರು.
ಇದನ್ನೂ ಓದಿ: ಅಪ್ಪ-ಅಮ್ಮನ ಪತ್ರ ಓದಿ ಬಿಕ್ಕಿಬಿಕ್ಕಿ ಅತ್ತ ದಿವ್ಯಾ; ಆ ಒಂದು ಮಾತಿಗೆ ಗಂಟಲೇ ಕಟ್ಟೋಯ್ತು
Kichcha Sudeep: ಬಿಗ್ ಬಾಸ್ ನಿರೂಪಣೆ ಬಗ್ಗೆ ಹರಡಿದ ಅಂತೆಕಂತೆಗೆ ಸುದೀಪ್ ಸ್ಪಷ್ಟನೆ