AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalaivi: ಜಯಲಲಿತಾ ಬಯೋಪಿಕ್ ‘ತಲೈವಿ’​ಗೆ ಕುಟುಂಬದವರಿಂದಲೇ ವಿರೋಧ; ಹೈಕೋರ್ಟ್​ನಲ್ಲಿ ಕಂಗನಾ ಚಿತ್ರಕ್ಕೆ ಗ್ರೀನ್​ ಸಿಗ್ನಲ್​

Kangana Ranaut | ಜಯಲಲಿತಾ ಸಂಬಂಧಿ ದೀಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ದೀಪಾ ಅವರ ಆರೋಪಕ್ಕೆ ನಿರ್ದೇಶಕ ಎ.ಎಲ್​. ವಿಜಯ್​ ಪ್ರತಿಕ್ರಿಯೆ ನೀಡಿದ್ದಾರೆ.

Thalaivi: ಜಯಲಲಿತಾ ಬಯೋಪಿಕ್ ‘ತಲೈವಿ’​ಗೆ ಕುಟುಂಬದವರಿಂದಲೇ ವಿರೋಧ; ಹೈಕೋರ್ಟ್​ನಲ್ಲಿ ಕಂಗನಾ ಚಿತ್ರಕ್ಕೆ ಗ್ರೀನ್​ ಸಿಗ್ನಲ್​
(ತಲೈವಿ ಸಿನಿಮಾದಲ್ಲಿ ಕಂಗನಾ ರಣಾವತ್​)
ಮದನ್​ ಕುಮಾರ್​
|

Updated on: Apr 17, 2021 | 12:57 PM

Share

ಕಂಗನಾ ರಣಾವತ್​ ಇದ್ದಲ್ಲಿ ಕಿರಿಕ್​ ಇರಲೇಬೇಕು. ಇಂಥ ಒಂದು ಅಲಿಖಿತ ನಿಯಮ ಚಿತ್ರರಂಗದಲ್ಲಿ ಜಾರಿ ಆದಂತಿದೆ. ಈಗ ಕಂಗನಾ ನಟನೆಯ ತಲೈವಿ ಚಿತ್ರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ತಲೈವಿ’ ಚಿತ್ರಕ್ಕೆ ಸ್ವತಃ ಜಯಲಲಿತಾ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿವಾದವು ಮದ್ರಾಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು. ಆದರೆ ತಲೈವಿ ಚಿತ್ರತಂಡದ ಪರವಾಗಿ ಕೋರ್ಟ್​ ತೀರ್ಪು ನೀಡಿದೆ.

ಜಯಲಲಿತಾ ಅವರ ಸಂಬಂಧಿ ಜೆ. ದೀಪಾ ಅವರು ‘ತಲೈವಿ’ ಚಿತ್ರದ ವಿರುದ್ಧ ತಕರಾರು ತೆಗೆದಿದ್ದರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆಯುವಾಗ ನಿರ್ದೇಶಕ ಎ.ಎಲ್​. ವಿಜಯ್​ ಅವರು ನಮ್ಮ ಅನುಮತಿ ಪಡೆದುಕೊಂಡಿಲ್ಲ. ಈ ಸಿನಿಮಾದಲ್ಲಿ ಜಯಲಲಿತಾ ಅವರ ಖಾಸಗಿ ಜೀವನವನ್ನು ನೆಗೆಟಿವ್ ಆಗಿ ತೋರಿಸಿರಬಹುದು. ಇದರಿಂದ ನಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಆಗಲಿದೆ. ಹಾಗಾಗಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ದೀಪಾ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ದೀಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ದೀಪಾ ಅವರ ಆರೋಪಕ್ಕೆ ನಿರ್ದೇಶಕ ಎ.ಎಲ್​. ವಿಜಯ್​ ಪ್ರತಿಕ್ರಿಯೆ ನೀಡಿದ್ದಾರೆ. ವಾಸಂತಿ ಬರೆದ ತಲೈವಿ ಪುಸ್ತಕವನ್ನು ಆಧರಿಸಿ ನಾವು ಈ ಸಿನಿಮಾ ಮಾಡಿದ್ದೇವೆ. ಜಯಲಲಿತಾ ಅವರ ಜೀವನವನ್ನು ಒಳ್ಳೆಯ ರೀತಿಯಲ್ಲಿ ತೋರಿಸಿದ್ದೇವೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಎಂದು ವಿಜಯ್​ ಹೇಳಿದ್ದಾರೆ.

ಚಿತ್ರವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ತಮ್ಮ ಎದುರು ಒಮ್ಮೆ ಪ್ರದರ್ಶನ ಮಾಡಬೇಕು ಎಂದು ದೀಪಾ ಒತ್ತಾಯ ಮಾಡಿದ್ದರು. ಸೆನ್ಸಾರ್​ ಮಂಡಳಿಯಿಂದ ಈಗಾಗಲೇ ಚಿತ್ರಕ್ಕೆ ಪ್ರಮಾಣಪತ್ರ ಸಿಕ್ಕಿರುವುದರಿಂದ ಬೇರೆ ಯಾರಿಗೂ ಸಿನಿಮಾ ತೋರಿಸುವ ಅವಶ್ಯಕತೆ ಇಲ್ಲ ಎಂದಿರುವ ನಿರ್ದೇಶಕರು ದೀಪಾ ಮನವಿಯನ್ನು ತಿರಸ್ಕರಿಸಿದ್ದಾರೆ.

ಏ.23ರಂದು ತಲೈವಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಎಂ.ಜಿ.ಆರ್​. ಪಾತ್ರದಲ್ಲಿ ಅರವಿಂದ್​ ಸ್ವಾಮಿ ಅಭಿನಯಿಸಿದ್ದಾರೆ. ತಮಿಳು, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ಸಿದ್ಧವಾಗಿದೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ