ಅಪ್ಪ-ಅಮ್ಮನ ಪತ್ರ ಓದಿ ಬಿಕ್ಕಿಬಿಕ್ಕಿ ಅತ್ತ ದಿವ್ಯಾ; ಆ ಒಂದು ಮಾತಿಗೆ ಗಂಟಲೇ ಕಟ್ಟೋಯ್ತು

ಬಿಗ್​ ಬಾಸ್​ನಲ್ಲಿ ಅಪ್ಪ-ಅಮ್ಮ ಬರೆದಿರುವ ಲೆಟರ್​ ಓದೋಕೆ ಒಂದು ಅವಕಾಶ ಕಲ್ಪಿಸಲಾಗಿತ್ತು. ಇಬ್ಬರಿಗೆ ಒಂದು ಟಾಸ್ಕ್​ ನೀಡಲಾಗುತ್ತದೆ. ಈ ಟಾಸ್ಕ್​ನಲ್ಲಿ ಗೆದ್ದವರಿಗೆ ಮನೆಯವರು ಬರೆದ ಪತ್ರ ಓದೋಕೆ ಅವಕಾಶ ನೀಡಲಾಗಿತ್ತು.

ಅಪ್ಪ-ಅಮ್ಮನ ಪತ್ರ ಓದಿ ಬಿಕ್ಕಿಬಿಕ್ಕಿ ಅತ್ತ ದಿವ್ಯಾ; ಆ ಒಂದು ಮಾತಿಗೆ ಗಂಟಲೇ ಕಟ್ಟೋಯ್ತು
ದಿವ್ಯಾ ಉರುಡುಗ

ಸ್ಪರ್ಧಿಗಳು ಬಿಗ್​ ಬಾಸ್​ ಮನೆ ಸೇರಿ 50 ದಿನ ಕಳೆಯುತ್ತಾ ಬಂದಿದೆ. ಎಲ್ಲರೂ ಹೊರ ಜಗತ್ತಿನಿಂದ ದೂರ ಉಳಿದಿದ್ದಾರೆ. ಅನೇಕರು ಮನೆಯವರನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಮನೆಯವರ ಧ್ವನಿ ಕೇಳೋಕೆ ಒಂದು ಅವಕಾಶ ಸಿಕ್ಕರೂ ಅದನ್ನು ಬಿಟ್ಟುಕೊಳ್ಳೋಕೆ ಸ್ಪರ್ಧಿಗಳು ಸಿದ್ಧರಿರುವುದಿಲ್ಲ. ಅದೇ ರೀತಿ ಅಪ್ಪ-ಅಮ್ಮ ಬರೆದ ಪತ್ರ ಓದಿ ದಿವ್ಯಾ ಉರುಡುಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಿಗ್​ ಬಾಸ್​ನಲ್ಲಿ ಅಪ್ಪ-ಅಮ್ಮ ಬರೆದಿರುವ ಲೆಟರ್​ ಓದೋಕೆ ಒಂದು ಅವಕಾಶ ಕಲ್ಪಿಸಲಾಗಿತ್ತು. ಇಬ್ಬರಿಗೆ ಒಂದು ಟಾಸ್ಕ್​ ನೀಡಲಾಗುತ್ತದೆ. ಈ ಟಾಸ್ಕ್​ನಲ್ಲಿ ಗೆದ್ದವರಿಗೆ ಮನೆಯವರು ಬರೆದ ಪತ್ರ ಓದೋಕೆ ಅವಕಾಶ ನೀಡಲಾಗಿತ್ತು. ಅದೇ ರೀತಿ ದಿವ್ಯಾ ಟಾಸ್ಕ್​ನಲ್ಲಿ ಗೆದ್ದು ಪತ್ರ ಓದುವ ಅವಕಾಶ ಗಿಟ್ಟಿಸಿಕೊಂಡರು.

ಪತ್ರ ಕೈಯಲ್ಲಿ ಎತ್ತಿಕೊಳ್ಳುತ್ತಿದ್ದಂತೆ ದಿವ್ಯಾ ಉರುಡುಗ ಅಳೋಕೆ ಪ್ರಾರಂಭಿಸಿದರು. ನಂತರ ಈ ಪತ್ರವನ್ನು ದಿವ್ಯಾ ಸುರೇಶ್​ ಓದಲು ಪ್ರಾರಂಭಿಸಿದರು. ನನ್ನ ಪ್ರೀತಿಯ ಪುಟ್ಟಿಮಗ, ನಿನಗೆ ನನ್ನ ಸಾವಿರ ಸಿಹಿ ಮುತ್ತು ಎಂದು ಹೇಳುತ್ತಿದ್ದಂತೆ ದಿವ್ಯಾ ಉರುಡುಗ ಗಂಟಲು ಕಟ್ಟಿ ಹೋಯಿತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು.

ನಾನು ಚೆನ್ನಾಗಿದ್ದೇನೆ. ನೀನು ಚೆನ್ನಾಗಿರು ಎಂದು ದೇವರ ಬಳಿ ಕೇಳಿಕೊಳ್ಳುತ್ತೇನೆ. ನೀನು ಕಾನ್ಫಿಡೆನ್ಸ್​ ಆಗಿ ಆಡ್ತಾ ಇದೀಯಾ. ಬಿಗ್​ ಬಾಸ್​ ಮನೆಯಲ್ಲಿದ್ದರೂ ನಮ್ಮ ಜತೆಯೇ ಇದ್ದಂತೆ ಭಾಸವಾಗುತ್ತಿದೆ. ಧೈರ್ಯವಾಗಿರು, ತಾಳ್ಮೆಯಿಂದಿರು. ನಿನ್ನಲ್ಲಿ ಎಲ್ಲಾ ಅಂಶ ಇದೆ. ಮನೆ ನೆನಪು ಮಾಡಿಕೊಳ್ಳಬೇಡ. ಮನೆಯಲ್ಲಿದ್ದಾಗ ನಿನಗೆ ಯಾವಾಗಲೂ ಕುರುಕಲು ತಿಂಡಿಬೇಕು, ನಾನ್​ವೆಜ್​ ಬೇಕು. ಸಿಕ್ಕಿದರಲ್ಲೇ ಖುಷಿಪಡು. ನಿದ್ರೆ ಮಾಡುವ ಸಮಯದಲ್ಲಿ ನಿದ್ರೆ ಮಾಡು. ಮನೆಯಲ್ಲಿ ಹಾಡ್ತಿದ್ದೆ. ಆದ್ರೆ, ಬಿಗ್​ ಬಾಸ್​ ಮನೆಯಲ್ಲೇಕೆ ಹಾಡ್ತಾ ಇಲ್ಲ? ಹಾಡು. ನೀನು ಕ್ಯಾಪ್ಟನ್​ ಆಗ್ತೀಯಾ. ಸಿಕ್ಕ ಕ್ಯಾಪ್ಟನ್ಸಿಯನ್ನು ಜವಾಬ್ದಾರಿ ಎಂದು ಭಾವಿಸು ಎಂದು ದಿವ್ಯಾ ಸುರೇಶ್​ ಪತ್ರ ಓದಿ ಮುಗಿಸುತ್ತಿದ್ದಂತೆ ದಿವ್ಯಾ ಉರುಡುಗ ಅಳುತ್ತಲೇ ಇದ್ದರು.

ಇದನ್ನೂ ಓದಿ: ದಿವ್ಯಾ ಸುರೇಶ್​ ವಿಚಾರಕ್ಕೆ ಬಿಕ್ಕಿ ಬಿಕ್ಕಿ ಅತ್ತ ಚಕ್ರವರ್ತಿ ಚಂದ್ರಚೂಡ್​! ಇಡೀ ಮನೆಯೇ ಎಮೋಷನಲ್​

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

Click on your DTH Provider to Add TV9 Kannada