ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!

10 ದಿನಗಳ ಕಾಲ ಸಲ್ಮಾನ್​ ಖಾನ್​ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರಕ್ಕಾಗಿ ನಿರ್ಮಾಪಕ ಆದಿತ್ಯ ಚೋಪ್ರಾ ದೊಡ್ಡ ಮೊತ್ತದ ಸಂಭಾವನೆ ಕೊಡೋಕೆ ಸಿದ್ಧರಾಗಿದ್ದರು.

ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!
ಸಲ್ಮಾನ್​-ಶಾರುಖ್​

ಜೀರೋ ನಂತರ ಶಾರುಖ್​ ಖಾನ್​ ‘ಪಠಾಣ್’​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಾರುಖ್​ ಈ ಚಿತ್ರಕ್ಕಾಗಿ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರ ಭಾರೀ ಚರ್ಚೆ ಆಗಿತ್ತು.  ಈಗ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಕೇಳಿ ಬಂದಿದೆ. ಶಾರುಖ್​ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ಗಾಗಿ ಸಲ್ಮಾನ್​ ಖಾನ್​ ಸಂಭಾವನೆಯನ್ನೇ ಪಡೆದಿಲ್ಲ. 10 ದಿನಗಳ ಕಾಲ ಸಲ್ಮಾನ್​ ಖಾನ್​ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಈ ಚಿತ್ರಕ್ಕಾಗಿ ನಿರ್ಮಾಪಕ ಆದಿತ್ಯ ಚೋಪ್ರಾ ದೊಡ್ಡ ಮೊತ್ತದ ಸಂಭಾವನೆ ಕೊಡೋಕೆ ಸಿದ್ಧರಾಗಿದ್ದರು. ಆದರೆ, ಸಲ್ಮಾನ್​ ಖಾನ್​ ಇದನ್ನು ತಿರಸ್ಕರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ವಿಚಾರ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಸಲ್ಮಾನ್​ ಖಾನ್​ ಕಾಲ್​ಶೀಟ್​ ಪಡೆಯೋಕೆ ದೊಡ್ಡ ದೊಡ್ಡ ಪ್ರೊಡ್ಯೂಸರ್​ಗಳು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಭಾರೀ ಸಂಭಾವನೆಯನ್ನೇ ನೀಡಲಾಗುತ್ತದೆ. ಆದರೆ, ಶಾರುಖ್​ ಚಿತ್ರಕ್ಕೆ ಅವರು ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಅನ್ನೋದು ವಿಶೇಷ. ಶಾರುಖ್​ ಖಾನ್​ ನನ್ನ ಸಹೋದರನಿದ್ದಂತೆ. ಅವರಿಗಾಗಿ ನಾನು ಏನು ಬೇಕಾದರೂ ಮಾಡೋಕೆ ಸಿದ್ಧನಿದ್ದೇನೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ ಎಂದು ವರದಿ ಆಗಿದೆ.

ಸಲ್ಮಾನ್​ ಖಾನ್ ಸಂಭಾವನೆ ಬೇಡ ಎಂದ ಹೊರತಾಗಿಯೂ ಸಿನಿಮಾ ನಿರ್ಮಾಪಕ ಆದಿತ್ಯ ಚೋಪ್ರಾ ದುಬಾರಿ ಗಿಫ್ಟ್​ ಒಂದನ್ನು ನೀಡಿದ್ದಾರಂತೆ. ಆ ಗಿಫ್ಟ್​ ಏನು ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ದೇಶದಲ್ಲಿ ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಹೀಗಾಗಿ, ಪಠಾಣ್​ ಸಿನಿಮಾ ಶೂಟಿಂಗ್​​ ನಿಲ್ಲಿಸಲಾಗಿದೆ. ಇದರಿಂದ ಸಿನಿಮಾ ರಿಲೀಸ್​ ದಿನಾಂಕ ಕೂಡ ಮುಂದೂಡುತ್ತಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಸಿನಿಮಾಕ್ಕಾಗಿ ಒಂದಾದ ಸಲ್ಮಾನ್​ ಖಾನ್​, ಮಹೇಶ್​ ಬಾಬು, ಪೃಥ್ವಿರಾಜ್!

 ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?

Published On - 9:10 pm, Thu, 15 April 21

Click on your DTH Provider to Add TV9 Kannada