ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?

ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?
ಶಾರುಖ್​ ಖಾನ್​

‘ಜೀರೋ’ ಚಿತ್ರದ ಸೋಲಿನ ಬಳಿಕ ಮೂರು ವರ್ಷ ಸುಮ್ಮನಿದ್ದ ಶಾರುಖ್​ ಈಗ ‘ಪಠಾಣ್​’ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾಗಾಗಿ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

Madan Kumar

|

Mar 28, 2021 | 9:04 AM

ಶಾರುಖ್​ ಖಾನ್​ಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಬಾಲಿವುಡ್​ನ ಟಾಪ್​ ಹೀರೋಗಳ ಸಾಲಿನಲ್ಲಿ ಶಾರುಖ್​ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತದೆ. ಆದರೆ ಮೊದಲೆಲ್ಲ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದ ಶಾರುಖ್​ಗೆ ಇತ್ತೀಚಿನ ವರ್ಷಗಳಲ್ಲಿ ಸಿಕ್ಕಿದ್ದೆಲ್ಲವೂ ಸೋಲು. ಹಾಗಾದರೆ ಕಿಂಗ್​ ಖಾನ್​ ಈಗ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ?

ಒಂದು ಕಾಲದಲ್ಲಿ ಶಾರುಖ್​ ಖಾನ್​, ಆಮೀರ್​ ಖಾನ್​ ಮತ್ತು ಸಲ್ಮಾನ್​ ಖಾನ್​ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟರಾಗಿ ಮಿಂಚುತ್ತಿದ್ದರು. ಆದರೆ ಈಗ ಆಮೀರ್ ಖಾನ್​ ಮತ್ತು ಶಾರುಖ್​ ಯಾಕೋ ಸ್ವಲ್ಪ ಮಂಕಾಗಿದ್ದಾರೆ. ಅದರಲ್ಲೂ ಶಾರುಖ್ ಬರೀ ಸೋಲುಗಳನ್ನೇ ಕಾಣುತ್ತಿದ್ದಾರೆ. ಏನೇ ಪ್ರಯೋಗ ಮಾಡಿದರೂ ಅವರಿಗೆ ಗೆಲುವು ಸಿಗುತ್ತಿಲ್ಲ. ಅವರು ನಟಿಸಿದ ಸಾಲು ಸಾಲು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಮಕಾಡೆ ಮಲಗಿದವು.

2014ರಲ್ಲಿ ಬಂದ ‘ಹ್ಯಾಪಿ ನ್ಯೂ ಇಯರ್’​ ಸಿನಿಮಾ ಬಳಿಕ ಶಾರುಖ್​ ಅವರ ಯಾವ ಸಿನಿಮಾಗಳೂ ಗೆದ್ದಿಲ್ಲ. ದಿಲ್​ವಾಲೆ, ಫ್ಯಾನ್​, ರಯೀಸ್​, ಜೀರೋ, ಜಬ್​ ಹ್ಯಾರಿ ಮೆಟ್​ ಸೇಜಲ್​ ಚಿತ್ರಗಳು ಸೋತು ಸುಣ್ಣವಾದವು. ಹಾಗಂತ ಶಾರುಖ್​ಗೆ ಇದ್ದ ಬೇಡಿಕೆ ಕಮ್ಮಿ ಆಗಿಲ್ಲ. ಈಗಲೂ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಜೀರೋ ಚಿತ್ರದ ಸೋಲಿನ ಬಳಿಕ ಮೂರು ವರ್ಷ ಸುಮ್ಮನಿದ್ದ ಶಾರುಖ್​ ಈಗ ‘ಪಠಾಣ್​‘ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ.

ಪಠಾಣ್​ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ. ಜಾನ್​ ಅಬ್ರಾಹಂ ಅವರು ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ಗೆ ಎಷ್ಟು ಸಂಭಾವನೆ ಸಿಗುತ್ತಿದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕುತ್ತರ ಬರೋಬ್ಬರಿ 100 ಕೋಟಿ ರೂ.! ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದು, ಬ್ಯಾಂಗ್​ ಬ್ಯಾಂಗ್​, ವಾರ್​ ಸಿನಿಮಾಗಳ ಖ್ಯಾತಿಯ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ.

ಶಾರುಖ್​ ಪದೇಪದೇ ಸೋತು ಸುಣ್ಣವಾಗಿದ್ದರೂ ಕೂಡ ಅವರಿಗೆ ಇದ್ದ ಬೇಡಿಕೆ ಕಮ್ಮಿ ಆಗಿಲ್ಲ. ಸಿಗಬೇಕಾದ ಸಂಭಾವನೆ ಮೊತ್ತವೂ ಇಳಿಕೆ ಆಗಿಲ್ಲ. ಇಂದಿಗೂ 100 ಕೋಟಿ ರೂ. ಡಿಮ್ಯಾಂಡ್​ ಮಾಡುವ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕಾಯುತ್ತಿರುತ್ತಾರೆ.

ಇದನ್ನೂ ಓದಿ: ದುಬೈನಲ್ಲಿ ಶಾರುಖ್ ಖಾನ್​​ ಸಿನಿಮಾ ಶೂಟಿಂಗ್​: ಲೀಕ್​ ಆಯ್ತು ಪಠಾಣ್​ ಸಿನಿಮಾ ದೃಶ್ಯಗಳು!

Follow us on

Related Stories

Most Read Stories

Click on your DTH Provider to Add TV9 Kannada