AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈದ್​ ವೇಳೆಗೆ ತೆರೆಕಾಣಲಿದೆ ಸಲ್ಮಾನ್​ ಖಾನ್ ಅಭಿನಯದ​ ರಾಧೆ; ಪ್ರಭುದೇವ ನಿರ್ದೇಶನದ ಮೇಲೆ ಭಾರೀ ನಿರೀಕ್ಷೆ

ರಾಧೆ ಚಿತ್ರದ ಪೋಸ್ಟರ್​ನಲ್ಲಿ ಗನ್​ ಹಿಡಿದಿರುವ ಸಲ್ಮಾನ್ ಖಾನ್​ ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದು, ಅವರ ಲುಕ್​ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. #RadheOn13thMay ಹಾಗೂ #2MonthsToRadhe ಎಂಬ ಹ್ಯಾಶ್​ಟ್ಯಾಗ್​ಗಳೊಂದಿಗೆ ಹಾಕಿರುವ ಟ್ವೀಟ್​ ಕೇವಲ ಮೂರು ತಾಸಿನಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಚಿತ್ರಾಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ.

ಈದ್​ ವೇಳೆಗೆ ತೆರೆಕಾಣಲಿದೆ ಸಲ್ಮಾನ್​ ಖಾನ್ ಅಭಿನಯದ​ ರಾಧೆ; ಪ್ರಭುದೇವ ನಿರ್ದೇಶನದ ಮೇಲೆ ಭಾರೀ ನಿರೀಕ್ಷೆ
ರಾಧೆ ಸಿನಿಮಾದ ಪೋಸ್ಟರ್​ನಲ್ಲಿ ಸಲ್ಮಾನ್​ ಖಾನ್​ ಲುಕ್​
Follow us
Skanda
| Updated By: ganapathi bhat

Updated on: Mar 13, 2021 | 3:34 PM

ಬಾಲಿವುಡ್​ ಸುಲ್ತಾನ್​ ಸಲ್ಮಾನ್ ಖಾನ್ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆಂದರೆ ಅಭಿಮಾನಿಗಳ ಪಾಲಿಗೆ ಅದೇ ದೊಡ್ಡ ಹಬ್ಬ. ತಮ್ಮ ನೆಚ್ಚಿನ ನಟನನ್ನು ಚಿತ್ರ ಮಂದಿರದ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿ ತುದಿಗಾಲಲ್ಲಿ ಕುಳಿತಿರುತ್ತಾರೆ. ಇದೀಗ ಸಲ್ಮಾನ್ ಖಾನ್ ತಮ್ಮ ಹೊಸ ಸಿನಿಮಾ ‘ರಾಧೆ’ಯ ಫಸ್ಟ್ ಲುಕ್​ ಹಂಚಿಕೊಂಡು ಸಂಚಲನ ಮೂಡಿಸಿದ್ದಾರೆ. ಈದ್​ ಮಿಲಾದ್​ ಹಬ್ಬಕ್ಕೆ ಕೊಡುಗೆಯಾಗಿ ಮೇ.13ರಂದು ರಾಧೆ ತೆರೆಕಾಣಲಿದೆ ಎಂಬ ಸಂಗತಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆ ಮೂಲಕ ಬಹಿರಂಗಗೊಳಿಸಿದ್ದಾರೆ. ಸಲ್ಮಾನ್ ಖಾನ್ ಈ ಪೋಸ್ಟ್ ಶೇರ್​ ಮಾಡಿಕೊಳ್ಳುತ್ತಿರುವಂತೆಯೇ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದು, ರಾಧೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಧೆ ಚಿತ್ರದ ಪೋಸ್ಟರ್​ನಲ್ಲಿ ಗನ್​ ಹಿಡಿದಿರುವ ಸಲ್ಮಾನ್ ಖಾನ್​ ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದು, ಅವರ ಲುಕ್​ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. #RadheOn13thMay ಹಾಗೂ #2MonthsToRadhe ಎಂಬ ಹ್ಯಾಶ್​ಟ್ಯಾಗ್​ಗಳೊಂದಿಗೆ ಹಾಕಿರುವ ಟ್ವೀಟ್​ ಕೇವಲ ಮೂರು ತಾಸಿನಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಚಿತ್ರಾಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದೆ.

ಈ ಬಾರಿಯ ಜನವರಿ ತಿಂಗಳಲ್ಲಿ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದ ಸಲ್ಮಾನ್​ ಖಾನ್​, ಈದ್​ ಮಿಲಾದ್ ವೇಳೆಗೆ ಚಿತ್ರಮಂದಿರದಲ್ಲಿ ಕಾಣಿಸಿಕೊಳ್ಳುವ ಭರವಸೆ ನೀಡಿದ್ದರು. ಅದರೊಂದಿಗೆ, ‘ಕ್ಷಮೆಯಿರಲಿ ನಾನು ಚಿತ್ರಮಂದಿರಗಳಿಗೆ ಹಿಂತಿರುಗಲು ಸುದೀರ್ಘ ಸಮಯವನ್ನು ತೆಗೆದುಕೊಂಡಿದ್ದೇನೆ. ಈ ಸಂಕಷ್ಟದ ಸಂದರ್ಭದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತಾಗಿದೆ. ಸದ್ಯ ಚಿತ್ರಮಂದಿರಗಳ ಮಾಲೀಕರು, ಸಿನಿಮಾ ವಿತರಕರು, ಸಿನಿ ರಂಗದ ಎಲ್ಲರೂ ಅನುಭವಿಸುತ್ತಿರುವ ಆರ್ಥಿಕ ಕಷ್ಟದ ಬಗ್ಗೆ ಅರಿವಿದೆ. ಈ ಕಷ್ಟವನ್ನು ನೀಗಿಸಲು ರಾಧೆ ಮೂಲಕ ಚಿತ್ರಮಂದಿರಗಳಿಗೆ ಬರಲು ನಾನು ಅಣಿಯಾಗುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿ ರಾಧೆಯನ್ನು ಕಾಣಲು ಥಿಯೇಟರ್​ಗಳಿಗೆ ಆಗಮಿಸುವ ಪ್ರೇಕ್ಷಕರ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ಅಂದಹಾಗೆ ನಾನು 2021ರ ಈದ್​ಗೆ ಬರುತ್ತಿದ್ದೇನೆ’ ಎಂದು ಹಂಚಿಕೊಂಡಿದ್ದರು.

ರಾಧೆ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದ್ದು, ದಿಶಾ ಪಟಾಣಿ, ಜಾಕಿ ಶ್ರಾಫ್, ರಣ್​ದೀಪ್​ ಹೂಡ ಕಾಣಿಸಿಕೊಂಡಿದ್ದು ಪ್ರಭುದೇವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದೀಗ ಪ್ರಭುದೇವ ಮತ್ತು ಸಲ್ಮಾನ್​ ಖಾನ್ ಜೋಡಿ 2009ರ ಆ್ಯಕ್ಷನ್​ ಥ್ರಿಲ್ಲರ್​ ವಾಂಟೆಡ್​, 2019ರ ಆ್ಯಕ್ಷನ್​-ಕಾಮಿಡಿ ದಬಾಂಗ್​ ನಂತರ ಮೂರನೇ ಬಾರಿಗೆ ಒಂದಾಗಿ ತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಧನ್ಯವಾದ ಹೇಳಿದ ರಾಖಿ ಸಾವಂತ್; ಕಾರಣವೇನು ಗೊತ್ತಾ? 

ರಣ್​ಬೀರ್ ಕಪೂರ್​ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಬಾಲಿವುಡ್ ಬೆಡಗಿ ಆಲಿಯಾ ಭಟ್