AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshit Shetty: ಇವತ್ತಿನ ಕಾಲದ ಹುಡುಗರು ಬೆಳಗ್ಗೆನೇ ಕುಡೀತಾರೆ ಎಂದ ರಕ್ಷಿತ್​ ಶೆಟ್ಟಿ ಸ್ವತಃ ಸಾಕ್ಷಿ ಸಮೇತ ಸಿಕ್ಕಿ ಬಿದ್ರು!

Hostel Hudugaru Bekagiddare | ಹಾಸ್ಟೆಲ್​ ಹುಡುಗರ ಬಗ್ಗೆ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಮಾತನಾಡುತ್ತಾರೆ. ಆದರೆ ಮರುಕ್ಷಣ ಅವರೇ ಸಿಕ್ಕಿಬೀಳುತ್ತಾರೆ. ಈ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

Rakshit Shetty: ಇವತ್ತಿನ ಕಾಲದ ಹುಡುಗರು ಬೆಳಗ್ಗೆನೇ ಕುಡೀತಾರೆ ಎಂದ ರಕ್ಷಿತ್​ ಶೆಟ್ಟಿ ಸ್ವತಃ ಸಾಕ್ಷಿ ಸಮೇತ ಸಿಕ್ಕಿ ಬಿದ್ರು!
ರಕ್ಷಿತ್​ ಶೆಟ್ಟಿ
ಮದನ್​ ಕುಮಾರ್​
|

Updated on: Apr 16, 2021 | 9:09 AM

Share

ಮನೆಯ ಟೆರಸ್​ ಮೇಲೆ ರಕ್ಷಿತ್​ ಶೆಟ್ಟಿ ಯೋಗಾಸನ ಮಾಡುತ್ತಿರುತ್ತಾರೆ. ಪಕ್ಕದಲ್ಲೇ ಇರುವ ಬಾಯ್ಸ್​ ಹಾಸ್ಟೆಲ್​ ಕಡೆಗೆ ಕಣ್ಣು ಹಾಯಿಸುತ್ತಾರೆ. ಅಲ್ಲಿ ಹುಡುಗರು ಮದ್ಯಪಾನ ಮಾಡುತ್ತಿರುವುದು ರಕ್ಷಿತ್​ ಕಣ್ಣಿಗೆ ಕಾಣುತ್ತದೆ! ‘ಛೇ ಛೇ.. ಎಂಥ ಕಾಲ ಬಂತಪ್ಪ. ಇವತ್ತಿನ ಕಾಲದ ಹುಡುಗರಿಗೆ ಲೈಫ್​ನಲ್ಲಿ ಸೀರಿಯಸ್​ನೆಸ್​ ಅನ್ನೋದೇ ಇಲ್ಲ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲಪ್ಪ. ಬೆಳಗ್ಗೆ ಬೆಳಗ್ಗೆನೇ ಕುಡೀತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಮರುಕ್ಷಣವೇ ಸೀನ್​ ಬದಲಾಗಿಬಿಡುತ್ತದೆ.

ರಕ್ಷಿತ್​ ನಿಂತುಕೊಂಡು ಹಾಸ್ಟೆಲ್​ ಹುಡುಗರಿಗೆ ಬಯ್ಯುತ್ತಿರುವಾಗಲೇ ಅವರ ಫ್ರೆಂಡ್ಸ್​ ಆಗಮಿಸುತ್ತಾರೆ. ಅವರನ್ನು ಕಂಡು ಕೊಂಚ ಗಾಬರಿಯಾದ ರಕ್ಷಿತ್​ ಶೆಟ್ಟಿ, ‘ನೀವೆಲ್ಲ ಇಲ್ಲಿ ಏನು ಮಾಡ್ತಿದ್ದೀರೋ’ ಅಂತ ಕೇಳ್ತಾರೆ. ‘ಬೆಳಗ್ಗೆ ಬೆಳಗ್ಗನೇ ಎಣ್ಣೆ ತಗೊಂಡು ಬನ್ನಿ. ಹೊಸ ಬೈನಾಕ್ಯುಲರ್​ ತಗೊಂಡೀದೀನಿ. ಲೇಡೀಸ್​ ಹಾಸ್ಟೆಲ್​ನಲ್ಲಿ ಒಳ್ಳೊಳ್ಳೆಯ ಹಕ್ಕಿ ನೋಡೋಣ ಅಂತ ನೀನೇ ತಾನೆ ಹೇಳಿದ್ದು’ ಎಂದು ರಕ್ಷಿತ್​ ಶೆಟ್ಟಿ ಫ್ರೆಂಡ್ಸ್​ ತಿರುಗೇಟು ಕೊಡುತ್ತಾರೆ. ಅಲ್ಲಿಗೆ ರಕ್ಷಿತ್​ ಶೆಟ್ಟಿ ಸಾಕ್ಷಿ ಸಮೇತ ಸಿಕ್ಕಿಬೀಳುತ್ತಾರೆ!

ಅಷ್ಟಕ್ಕೂ ಇದೆಲ್ಲವೂ ರಿಯಲ್​ ಅಲ್ಲ. ಅಪ್ಪಟ ರೀಲ್​. ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಎಂಬ ಕನ್ನಡ ಸಿನಿಮಾದ ಪ್ರಚಾರದ ಸಲುವಾಗಿ ಇಂಥದ್ದೊಂದು ವಿಡಿಯೋ ಮಾಡಲಾಗಿದೆ. ಅದರಲ್ಲಿ ಈ ಮೇಲಿನ ದೃಶ್ಯ ಗಮನ ಸೆಳೆಯುತ್ತಿದೆ. ಈಗಾಗಲೇ ಕೆಲವು ಟೀಸರ್​ಗಳನ್ನು ಬಿಡುಗಡೆ ಮಾಡಿಕೊಂಡಿರುವ ಈ ಚಿತ್ರತಂಡದ ಕ್ರಿಯೇಟಿವಿಟಿಗೆ ಸ್ಯಾಂಡಲ್​ವುಡ್​ನ ಅನೇಕ ಸ್ಟಾರ್​ಗಳು ಫಿದಾ ಆಗಿದ್ದಾರೆ.

ನಿತಿನ್​ ಕೃಷ್ಣಮೂರ್ತಿ ಅವರು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಕೆಲಸವನ್ನು ಮೆಚ್ಚಿಕೊಂಡಿರುವ ಪುನೀತ್​ ರಾಜ್​ಕುಮಾರ್​, ರಿಷಬ್​ ಶೆಟ್ಟಿ, ಕಿಚ್ಚ ಸುದೀಪ್​ ಮುಂತಾದವರು ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ತುಂಬಾ ಕ್ರಿಯೇಟೀವ್​ ಆದಂತಹ ಪ್ರೊಮೋಷನಲ್​ ವಿಡಿಯೋಗಳಲ್ಲಿ ನಟಿಸುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಈಗ ರಕ್ಷಿತ್​ ಶೆಟ್ಟಿ ಕೂಡ ಒಂದು ಹೊಸ ಪ್ರಮೋಷನಲ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಸ್ನೀಕ್​ ಪೀಕ್​ ದೃಶ್ಯ ಕೂಡ ಇದೆ.

ಸದ್ಯ ಈ ವಿಡಿಯೋವನ್ನು ರಕ್ಷಿತ್​ ಶೆಟ್ಟಿ ಅವರು ತಮ್ಮ ಸೋಶಿಯಲ್​ ಮಿಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಿದ್ದಾರೆ. ಅದನ್ನು ಕಂಡ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದು, ಎಲ್ಲ ಕಡೆ ವೈರಲ್​ ಆಗುತ್ತಿದೆ. ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More