ರಣವೀರ್​ ಸಿಂಗ್ ನಟನೆಯ ‘83’ ರಿಲೀಸ್​ಗೆ ಮುಹೂರ್ತ ಫಿಕ್ಸ್​: ಕನ್ನಡದಲ್ಲೂ ಬಿಡುಗಡೆ ಆಗಲಿದೆ ವಿಶ್ವಕಪ್​ ಕಥೆ

ರಣವೀರ್​ ಸಿಂಗ್ ನಟನೆಯ ‘83’ ರಿಲೀಸ್​ಗೆ ಮುಹೂರ್ತ ಫಿಕ್ಸ್​: ಕನ್ನಡದಲ್ಲೂ ಬಿಡುಗಡೆ ಆಗಲಿದೆ ವಿಶ್ವಕಪ್​ ಕಥೆ

1983 Cricket World Cup | ಬಹುತೇಕ ಸಿನಿಮಾಗಳು ಈಗ ಡಬ್​ ಆಗಿ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ಇದಕ್ಕೆ '83' ಸಿನಿಮಾ ಕೂಡ ಹೊರತಾಗಿಲ್ಲ. ಈ ಚಿತ್ರ ಐದು ಭಾಷೆಗಳಲ್ಲಿ ಏಕಕಕಾಲದಲ್ಲಿ ಬಿಡುಗಡೆ ಆಗುತ್ತಿದೆ.

Rajesh Duggumane

|

Feb 20, 2021 | 4:13 PM

ಶೂಟಿಂಗ್​ ಹಾಗೂ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಪೂರ್ಣಗೊಂಡಿದ್ದರೂ ರಣವೀರ್​ ಸಿಂಗ್​ ಅಭಿನಯದ ಕ್ರೀಡಾಧಾರಿತ ಚಿತ್ರ ’83’ ಸಿನಿಮಾ ಕೊರೊನಾ ಕಾರಣದಿಂದ ರಿಲೀಸ್​ ಆಗಿರಲಿಲ್ಲ. ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಕುತೂಹಲ ಅಭಿಮಾನಿಗಳದ್ದಾಗಿತ್ತು. ಕೊನೆಗೂ ಸಿನಿಮಾ ರಿಲೀಸ್​ ದಿನಾಂಕ ಘೋಷಣೆ ಆಗಿದೆ. ರಣವೀರ್​ ಸಿಂಗ್​ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಜೂನ್​ 4ರಂದು ಚಿತ್ರ ತೆರೆಗೆ ಬರಲಿದೆ. 

ಈ ಬಗ್ಗೆ ಬರೆದುಕೊಂಡಿರುವ ರಣವೀರ್​ ಸಿಂಗ್​, ಜೂನ್​ 4, 2021! ಹಿಂದಿ, ತಮಿಳು, ತೆಲುಗು ಕನ್ನಡ ಮತ್ತು ಮಲಯಾಳಂನಲ್ಲಿ ’83’ ರಿಲೀಸ್​ ಆಗುತ್ತಿದೆ ಎಂದಿದ್ದಾರೆ. ಕಪಿಲ್​ ದೇವ್​ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊಟ್ಟ ಮೊದಲ ಬಾರಿಗೆ 1983ರಲ್ಲಿ ವಿಶ್ವಕಪ್​ ಗೆದ್ದಿತ್ತು. ವೆಸ್ಟ್​ ಇಂಡೀಸ್​ ತಂಡವನ್ನು ಫೈನಲ್​ನಲ್ಲಿ ಭಾರತ ಸೋಲಿಸಿತ್ತು. ಇದೇ ಘಟನೆಯನ್ನು ಇಟ್ಟುಕೊಂಡು 83 ಸಿದ್ಧಗೊಂಡಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದಾರೆ. 1983ರ  ಜೂನ್​ 25ರಂದು ವಿಶ್ವಕಪ್​ ಫೈನಲ್​ ಏರ್ಪಟ್ಟಿತ್ತು. ಇದೇ ಕಾರಣಕ್ಕೆ ಜೂನ್​ ತಿಂಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ದೀಪಿಕಾ ಪಡುಕೋಣೆ ಕಪಿಲ್ ದೇವ್​ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಪಂಕಜ್​ ತ್ರಿಪಾಟಿ, ಬೋಮನ್​ ಇರಾನಿ, ಸಖೀಬ್​ ಸಲೀಮ್​, ತಾಹಿರ್​ ರಾಜ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.​ ’83’ ಚಿತ್ರವನ್ನು ಕಬೀರ್​ ಖಾನ್ ರಿಲೀಸ್​ ಮಾಡಿದ್ದಾರೆ. ಸಿನಿಮಾದ ಫಸ್ಟ್​ ಪೋಸ್ಟ್​ ರಿಲೀಸ್​ ಆದಾಗ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದರು. ರಣವೀರ್​ ಸಿಂಗ್ ಅಷ್ಟು ನೈಜವಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಬಹುತೇಕ ಸಿನಿಮಾಗಳು ಈಗ ಡಬ್​ ಆಗಿ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ಇದಕ್ಕೆ ’83’ ಸಿನಿಮಾ ಕೂಡ ಹೊರತಾಗಿಲ್ಲ. ಈ ಚಿತ್ರ ಐದು ಭಾಷೆಗಳಲ್ಲಿ ಏಕಕಕಾಲದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರ ಕನ್ನಡಕ್ಕೂ ಡಬ್​ ಆಗಿ ತೆರ ಕಾಣ್ತಿರೋದು ವಿಶೇಷ.

ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಬಂದ್​ ಆದಾಗ ’83’ ಸಿನಿಮಾ ಒಟಿಟಿ ರಿಲೀಸ್​ ಆಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ನಂತರ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಎಷ್ಟೇ ವಿಳಂಬವಾದರೂ  83 ಸಿನಿಮಾ ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ ಎಂದು ಹೇಳಿತ್ತು.

ರಣವೀರ್​ ಸಿಂಗ್​ ಕೊನೆಯ ಬಾರಿ 2019ರಲ್ಲಿ ತೆರೆಕಂಡಿದ್ದ ಗಲ್ಲಿ ಬಾಯ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಣವೀರ್​  ​ ನಟನೆಗೆ ಫಿಲ್ಮ್​​ ಫೇರ್​ ಅವಾರ್ಡ್​ ಕೂಡ ಸಿಕ್ಕಿತ್ತು. ’83’ ಅಲ್ಲದೆ 3 ಚಿತ್ರಗಳಲ್ಲಿ ರಣವೀರ್​ ಸಿಂಗ್​ ಅಭಿನಯಿಸುತ್ತಿದ್ದಾರೆ. ಅವರ ನಟನೆಯ ‘ಸೂರ್ಯವಂಶಿ’ ಚಿತ್ರ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ: ಡ್ರಗ್ಸ್‌ ಟೆಸ್ಟ್ ತೆಗೆದುಕೊಳ್ಳುವಂತೆ ರಣಬೀರ್‌, ರಣವೀರ್‌, ವಿಕ್ಕಿಗೆ ಕಂಗನಾ ಸಖತ್ ಚಾಲೆಂಜ್​

Follow us on

Related Stories

Most Read Stories

Click on your DTH Provider to Add TV9 Kannada