ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?

ಧನಶ್ರೀ ವರ್ಮ ಮತ್ತು ಯಜುವೇಂದ್ರ ಚಾಹಲ್ ಅವರ ವಿಚ್ಛೇದನದಲ್ಲಿ ಧನಶ್ರೀಗೆ 4.75 ಕೋಟಿ ರೂಪಾಯಿ ಜೀವನಾಂಶ ಸಿಕ್ಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಮೊತ್ತವನ್ನು ದಿನನಿತ್ಯದ ಗಳಿಕೆಯಾಗಿ ಲೆಕ್ಕಾಚಾರ ಮಾಡಲಾಗಿದೆ. 2020ರಲ್ಲಿ ವಿವಾಹವಾದ ಈ ದಂಪತಿ ನಾಲ್ಕು ವರ್ಷಗಳ ಬಳಿಕ ಬೇರ್ಪಟ್ಟಿದ್ದಾರೆ. ವಿಚ್ಛೇದನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ; ಧನಶ್ರೀಗೆ ಒಂದು ದಿನಕ್ಕೆ ಸಿಕ್ಕ ಹಣ ಇಷ್ಟೊಂದಾ?
ಚಾಹಲ್-ಧನಶ್ರೀ

Updated on: Mar 21, 2025 | 3:06 PM

ಡ್ಯಾನ್ಸರ್, ಇನ್​ಫ್ಲ್ಯುಯೆನ್ಸರ್ ಧನಶ್ರೀ ವರ್ಮ ಹಾಗೂ ಕ್ರಿಕೆಟರ್ ಯಜುವೇಂದ್ರ ಚಾಹಲ್ ಸಂಸಾರ ಕೊನೆ ಆಗಿದೆ. ಇಬ್ಬರೂ ಅಧಿಕೃತವಾಗಿ ಬೇರೆ ಆಗಿದ್ದಾರೆ. ಮಾರ್ಚ್​ 20ರಂದು ಈ ಜೋಡಿ ಕೋರ್ಟ್​ಗೆ ಆಗಮಿಸಿತ್ತು. ಅಲ್ಲಿ ಅವರು ವಿಚ್ಛೇದನ ಪಡೆದರು. ಈ ಬೆನ್ನಲ್ಲೇ ಧನಶ್ರೀ ವರ್ಮಾಗೆ  (Dhanshree Verma) ಸಿಕ್ಕ ಜೀವನಾಂಶದ ವಿಚಾರ ಚರ್ಚೆ ಆಗುತ್ತಿದೆ. ಚಹಲ್​ನಿಂದ ವಿಚ್ಛೇದನ ಪಡೆಯುತ್ತಿರುವುದಕ್ಕೆ ಧನಶ್ರೀಗೆ 4.75 ಕೋಟಿ ರೂಪಾಯಿ ಜೀವನಾಂಶ ಸಿಕ್ಕಿದೆ. ಇದನ್ನು ಕೆಲವರು ದಿನದ ಲೆಕ್ಕಕ್ಕೆ ಕೌಂಟ್ ಮಾಡಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಧನಶ್ರೀ ಹಾಗೂ ಚಾಹಲ್ 2020ರ ಡಿಸೆಂಬರ್​ನಲ್ಲಿ ವಿವಾಹ ಆದರು. ಗುರುಗ್ರಾಮದಲ್ಲಿ ಈ ವಿವಾಹ ನಡೆಯಿತು. ವೃತ್ತಿಯಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿರೋ ಧನಶ್ರೀ ನಾಲ್ಕು ವರ್ಷದ ಮೂರು ತಿಂಗಳ ಕಾಲ ಚಹಲ್ ಜೊತೆ ಸಂಸಾರ ನಡೆಸಿದರು. ಈಗ ಇವರು ಬೇರೆ ಆಗಿದ್ದಾರೆ. ಇದಕ್ಕಾಗಿ ಅವರು ಪಡೆಯುತ್ತಿರುವ ಹಣ ಬೋರಬ್ಬರಿ 4.75 ಕೋಟಿ ರೂಪಾಯಿ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಧನಶ್ರೀ ಅವರ ಒಂದು ದಿನದ ಗಳಿಕೆ ಎಷ್ಟಾಯಿತು ಎಂಬ ಲೆಕ್ಕಾಚಾರವನ್ನು ತೆಗೆದು ತೋರಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಹೇಳುವಾದಾದರೆ ಧನಶ್ರೀ ಅವರು ಚಹಲ್ ಜೊತೆ 1,550 ದಿನ ವಾಸ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಸಿಕ್ಕಿದ್ದು ಸುಮಾರು ಐದು ಕೋಟಿ. 1550 ದಿನವನ್ನು 4.75 ಕೋಟಿ ರೂಪಾಯಿನಲ್ಲಿ ಡಿವೈಡ್ ಮಾಡಿದಾಗ ಒಂದು ದಿನಕ್ಕೆ ಬರುವ ಮೊತ್ತ ಬರೋಬ್ಬರಿ 30 ಸಾವಿರ ರೂಪಾಯಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್​ಗಳ ಸುರಿಮಳೆ ಹರಿದು ಬಂದಿದೆ. ಅಂದಹಾಗೆ ಈ ರೀತಿ ಸಿಗುವ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ಇದನ್ನೂ ಓದಿ
ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್; ಚಾಹಲ್​ಗೂ ಕೌಂಟರ್

ಇದನ್ನೂ ಓದಿ: ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ

ಧನಶ್ರೀ ಅವರು ಡ್ಯಾನ್ಸ್ ಕ್ಲಾಸ್ ನಡೆಸುತ್ತಾ ಇದ್ದರು. ಡ್ಯಾನ್ಸ್ ಕಲಿಯುವ ಉದ್ದೇಶದಿಂದ ಚಾಹಲ್ ಅವರು ಈ ಕ್ಲಾಸ್​ಗೆ ಸೇರಿಕೊಂಡರು. ಈ ವೇಳೆ ಧನಶ್ರೀ ಹಾಗೂ ಚಾಹಲ್ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಕುಟುಂಬದವರ ಒಪ್ಪಿಗೆ ಪಡೆದು ಇಬ್ಬರೂ ವಿವಾಹ ಆದರು.  ವಿಚ್ಛೇದನಕ್ಕೆ ಕಾರಣ ರಿವೀಲ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.