‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ

ನಟ ಧನುಶ್‌ಗೆ 'ಥೇಂಡಾಲ್ ಫಿಲ್ಮ್ಸ್' ಸಂಸ್ಥೆಯು 20 ಕೋಟಿ ರೂ. ಪರಿಹಾರಕ್ಕಾಗಿ ಕಾನೂನು ನೋಟಿಸ್ ಜಾರಿ ಮಾಡಿದೆ. 2016ರಲ್ಲಿ ಒಪ್ಪಿಕೊಂಡ 'ನಾನ್ ರುದ್ರನ್' ಸಿನಿಮಾ ಯೋಜನೆಯ ವಿಳಂಬಕ್ಕೆ ಧನುಶ್ ಅವರೇ ಕಾರಣ ಎಂದು ಸಂಸ್ಥೆ ಆರೋಪಿಸಿದೆ. ಚಿತ್ರಕಥೆ ನೀಡದೆ ಯೋಜನೆ ಸ್ಥಗಿತಗೊಂಡಿದೆ. ಈ ವಿಳಂಬದಿಂದ ತಮಗೆ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ
ಧನುಶ್

Updated on: Feb 14, 2026 | 9:06 AM

ತಮಿಳು ನಟ ಧನುಶ್ (Dhanush) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇಷ್ಟು ದಿನ ಅವರ ಎರಡನೇ ವಿವಾಹದ ಬಗ್ಗೆ ಚರ್ಚೆ ಆಗಿತ್ತು. ಈಗ ಅವರು ಲೀಗಲ್ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ‘ಥೇಂಡಾಲ್’ ಫಿಲ್ಮ್ಸ್’ ಸಂಸ್ಥೆ ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಅಷ್ಟೇ ಅಲ್ಲ, 20 ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಅಷ್ಟಕ್ಕೂ ಏನಿದು ಪ್ರಕರಣ? ಆ ಬಗ್ಗೆ ಇಲ್ಲಿದೆ ವಿವರ.

‘ಥೆಂಡಾಲ್ ಫಿಲ್ಮ್ಸ್’ ಹೆಸರಿನ ಸಂಸ್ಥೆ ಜೊತೆ ಧನುಶ್ ಸಿನಿಮಾ ಒಪ್ಪಿಕೊಂಡಿದ್ದರು. ಈ ಸಿನಿಮಾ ವಿಳಂಬ ಆಗುತ್ತಲೇ ಬರುತ್ತಿದೆ.ಈ ಚಿತ್ರದ ಶೂಟ್ ವಿಳಂಬ ಮಾಡುತ್ತಿರುವುದಕ್ಕೆ ಸಂಸ್ಥೆಗೆ ನಷ್ಟ ಆಗುತ್ತಿದೆ. ಹೀಗಾಗಿ, 20 ಕೋಟಿ ಪರಿಹಾರ ನೀಡಬೇಕು ಎಂಬುದು ತಂಡದ ಬೇಡಿಕೆ ಆಗಿದೆ.

2016ರಲ್ಲಿ ‘ನಾನ್ ರುದ್ರನ್’ ಎಂಬ ಚಿತ್ರಕ್ಕೆ ಧನುಶ್ ಸಹಿ ಹಾಕಿದ್ದರು. ಆದರೆ ಅದರ ಶೂಟಿಂಗ್ ಮಾಡಿಯೇ ಇಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ ಧನುಶ್ ಈ ಯೋಜನೆಯಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಒಪ್ಪಿಕೊಂಡಿದ್ದರು ಎಂದು ನೋಟಿಸ್​​ ಅಲ್ಲಿ ಆರೋಪಿಸಲಾಗಿದೆ.

ಕಥೆಯಲ್ಲಿ ಧನುಶ್ ಸೂಚಿಸಿದ ಬದಲಾವಣೆಗಳಿಗೆ ನಿರ್ಮಾಣ ಸಂಸ್ಥೆ ಒಪ್ಪಿಗೆ ನೀಡಿದ್ದರೂ, ನಟ ನಂತರ ಸಂಪೂರ್ಣ ಚಿತ್ರಕಥೆಯನ್ನು ಒದಗಿಸಲಿಲ್ಲ ಎಂದು ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಯೋಜನೆ ಸೆಟ್ಟೇರಿಲ್ಲ.

ಈ ವಿಳಂಬದಿಂದಾಗಿ ನಿರ್ಮಾಪಕರಿಗೆ ಆರ್ಥಿಕ ನಷ್ಟ ಉಂಟು ಮಾಡಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಈ ಯೋಜನೆಯ ಆರಂಭಿಕ ಹಂತಗಳಲ್ಲಿ ಮಾಡಿದ ಹೂಡಿಕೆಗಳನ್ನು ಹಿಂಪಡೆಯಲು ಹಣಕಾಸಿನ ಪರಿಹಾರವನ್ನು ಕೋರಲಾಗಿದೆ. ನಿಗದಿತ ಸಮಯದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಬ್ಯಾನರ್ ಎಚ್ಚರಿಸಿದೆ. ಈವರೆಗೆ ಪ್ರಕರಣದ ಬಗ್ಗೆ ಧನುಶ್ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಧನುಶ್ ಹುಟ್ಟೂರಿನ ವಿಷಯ ಬರುತ್ತಿದ್ದಂತೆ ನಾಚಿ ನೀರಾದ ಮೃಣಾಲ್ ಠಾಕೂರ್

ಧನುಶ್ ತಮ್ಮ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ ‘D55’ ಎಂದು ಹೆಸರು ಇಟ್ಟಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಘೋಷಣೆ ಕೂಡ ಮಾಡಿದ್ದಾರೆ. ಈ ಚಿತ್ರಕ್ಕೆ ‘ಅಮರನ್’ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:06 am, Sat, 14 February 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us