
ನಯನತಾರಾ ಅವರು ತಮ್ಮ ವಿವಾಹ ಡಾಕ್ಯುಮೆಂಟರಿಗೆ ‘ನಾನುಂ ರೌಡಿ ದಾನ್’ ಚಿತ್ರದ ದೃಶ್ಯವನ್ನು ಒಪ್ಪಿಗೆ ಇಲ್ಲದೆ ಬಳಕೆ ಮಾಡಿಕೊಂಡಿದ್ದರು. ಈ ಸಂಬಂಧ ಧನುಷ್ ಅವರು ಕೋರ್ಟ್ನಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಡಾಕ್ಯುಮೆಂಟರಿ ಪ್ರಸಾರ ಮಾಡಿದ್ದ ‘ನೆಟ್ಫ್ಲಿಕ್ಸ್ ಇಂಡಿಯಾ’ ಅರ್ಜಿಯನ್ನು ರದ್ದು ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿ ಹಾಕಿದೆ.
ಕಳೆದ ನವೆಂಬರ್ ತಿಂಗಳಲ್ಲಿ ನಯನತಾರಾ, ಅವರ ಪತಿ ವಿಘ್ನೇಶ್ ಶಿವನ್ ಹಾಗೂ ಇವರ ನಿರ್ಮಾಣ ಸಂಸ್ಥೆ ‘ರೌಡಿ ಪಿಕ್ಚರ್ಸ್’ ವಿರುದ್ಧ್ ಧನುಷ್ ಅವರು ಕೇಸ್ ಹಾಕಿದ್ದರು. ಧನುಷ್ ಅವರು ನಿರ್ಮಾಣ ಮಾಡಿದ ‘ನಾನುಂ ರೌಡಿ ದಾನ್’ ಚಿತ್ರದ 3 ಸೆಕೆಂಡ್ ದೃಶ್ಯವನ್ನು ‘ನೆಟ್ಫ್ಲಿಕ್ಸ್’ ಡಾಕ್ಯುಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರು ಟೇಲ್’ನಲ್ಲಿ ಬಳಕೆ ಮಾಡಿದ್ದಾಗಿ ಆರೋಪಿಸಿದ್ದರು.
ಇದನ್ನೂ ಓದಿ: ನೀಚ ಧನುಶ್ ನಿಜ ಬಣ್ಣ ಬಯಲು ಮಾಡಿದ ನಯನತಾರಾ
‘ಒಪ್ಪಿಗೆ ಇಲ್ಲದೆ ಬಳಸಿದ ದೃಶ್ಯವನ್ನು 24 ಗಂಟೆಯಲ್ಲಿ ತೆಗೆಯದೇ ಇದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು’ ಎಂದು ಧನುಷ್ ಎಚ್ಚರಿಸಿದ್ದರು. ಆದಾಗ್ಯೂ ದೃಶ್ಯವನ್ನು ತೆಗೆದಿರಲಿಲ್ಲ. ಹೀಗಾಗಿ, ಧನುಷ್ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಧನುಷ್ ನಿರ್ಮಾಣ ಸಂಸ್ಥೆ ‘ವುಂಡಬಾರ್ ಫಿಲ್ಮ್ಸ್’ ನಷ್ಟ ಭರಿಸಬೇಕು ಎಂದು ಕೂಡ ಕೋರಿತ್ತು. ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಧನುಷ್ ಹಾಗೂ ನಯನತಾರಾ ವಿರುದ್ಧ ಕಿತ್ತಾಟಕ್ಕೂ ಇದು ಕಾರಣ ಆಗಿತ್ತು. ಈಗ ಈ ಅರ್ಜಿಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
‘ನಾನೂಮ್ ರೌಡಿ ದಾನ್’ ಸಿನಿಮಾದ ಹಾಡು, ವಿಡಿಯೋ ತುಣುಕು ಬಳಸಿಕೊಳ್ಳಲು ನಯನತಾರಾ ಎರಡು ವರ್ಷಗಳ ಹಿಂದೇ ಅನುಮತಿ ಕೋರಿದ್ದರು. ಆದರೆ, ಅದಕ್ಕೆ ಧನುಷ್ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ಅದೇ ಸಿನಿಮಾದ ಶೂಟಿಂಗ್ ದೃಶ್ಯವನ್ನು ಬಳಸಿಕೊಂಡಿದ್ದರು. ಮೂರು ಸೆಕೆಂಡ್ ಬಳಸಿಕೊಂಡಿದ್ದಕ್ಕೆ 10 ಕೋಟಿ ರೂಪಾಯಿ ನೊಟೀಸ್ನ ಧನುಷ್ ಕಳುಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:25 pm, Tue, 28 January 25