ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ

|

Updated on: Sep 29, 2024 | 4:28 PM

Dhruva Sarja: ನಟ ಧ್ರುವ ಸರ್ಜಾ, ಅಭಿಮಾನಿಗಳಿಗೆ ಬಹಳ ಪ್ರಾಮುಖ್ಯತೆ ನೀಡುವ ನಟ, ಇಂದು ಭಾನುವಾರ ತಮ್ಮ ನಿವಾಸದ ಬಳಿ ಧ್ರುವ ಸರ್ಜಾ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ನೆಚ್ಚಿನ ನಟನನ್ನು ನೋಡಲು ಭಾರಿ ಸಂಖ್ಯೆಯ ಅಭಿಮಾನಿಗಳು ಧ್ರುವ ಸರ್ಜಾ ಮನೆ ಬಳಿ ಆಗಮಿಸಿದ್ದರು.

ನಟ ಧ್ರುವ ಸರ್ಜಾ ಕನ್ನಡದ ಮಾಸ್ ನಟರಲ್ಲಿ ಒಬ್ಬರು. ಧ್ರು ಸರ್ಜಾಗೆ ಸಹ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಭಿಮಾನಿಗಳಿಗೆ ಹೆಚ್ಚಿನ ಪ್ರೀತಿ, ಗೌರವ ನೀಡುವ ಧ್ರುವ ಸರ್ಜಾ ಪ್ರತಿ ವಾರವೂ ತಮ್ಮನ್ನು ಕಾಣಲು ಬರುವ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಇಂದು ಭಾನುವಾರ ನಟ ಧ್ರುವ ಸರ್ಜಾ ತಮ್ಮ ಕೆಆರ್ ರಸ್ತೆಯ ಮನೆಯ ಬಳಿ ಬಂದಿದ್ದ ನೂರಾರು ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಕಿ.ಮೀಗಟ್ಟಲೆ ಸಾಲು ನಿಂತಿದ್ದರು. ಈ ಸಮಯದಲ್ಲಿ ಧ್ರುವ ಸರ್ಜಾ, ಸಮಾಧಾನದಿಂದ ಎಲ್ಲ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಕೆಲವರು ನಟನ ಜೊತೆ ರೀಲ್ಸ್ ಮಾಡಿದರು. ಕೆಲವರು ಧ್ರುವ ಸರ್ಜಾ ಚಿತ್ರಕ್ಕೆ ಹಾಲಿನ ಅಭಿಷೇಕ ಸಹ ಮಾಡಿದರು. ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ