ಹೈದರಾಬಾದ್‌: ‘ಧುರಂಧರ್ 2’ ಶೋನಲ್ಲಿ ಭಾಷಾ ವಿವಾದ, ಪೊಲೀಸರ ಎಂಟ್ರಿ

Dhurandhar 2 Hyderabad: ‘ಧುರಂಧರ್ 2’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಸಿನಿಮಾದ ಪ್ರದರ್ಶನದ ವೇಳೆ ಕೆಲವೆಡೆ ಕಿರಿಕ್ ಸಹ ಆಗಿದೆ. ಕೆನಡಾದಲ್ಲಿ ಸಿನಿಮಾ ಪ್ರದರ್ಶನದ ವೇಳೆ ನಡೆದ ಗಲಾಟೆಯಲ್ಲಿ ಸಿನಿಮಾ ಪರದೆಯನ್ನೇ ಹರಿದ ಘಟನೆ ನಿನ್ನೆ ವರದಿ ಆಗಿತ್ತು. ಇದೀಗ ಹೈದರಾಬಾದ್​​ನಲ್ಲಿ ಸಹ ಸಿನಿಮಾ ಪ್ರದರ್ಶನದ ವೇಳೆ ಕಿರಿಕ್ ಆಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಹೈದರಾಬಾದ್‌: ‘ಧುರಂಧರ್ 2’ ಶೋನಲ್ಲಿ ಭಾಷಾ ವಿವಾದ, ಪೊಲೀಸರ ಎಂಟ್ರಿ
Dhurandharr

Updated on: Mar 22, 2026 | 10:19 PM

ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಿದೆ. ಎಲ್ಲೆಡೆ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಸಿನಿಮಾದ ಪ್ರದರ್ಶನದ ವೇಳೆ ಕೆಲವೆಡೆ ಕಿರಿಕ್ ಸಹ ಆಗಿದೆ. ಕೆನಡಾದಲ್ಲಿ ಸಿನಿಮಾ ಪ್ರದರ್ಶನದ ವೇಳೆ ನಡೆದ ಗಲಾಟೆಯಲ್ಲಿ ಸಿನಿಮಾ ಪರದೆಯನ್ನೇ ಹರಿದ ಘಟನೆ ನಿನ್ನೆ ವರದಿ ಆಗಿತ್ತು. ಇದೀಗ ಹೈದರಾಬಾದ್​​ನಲ್ಲಿ ಸಹ ಸಿನಿಮಾ ಪ್ರದರ್ಶನದ ವೇಳೆ ಕಿರಿಕ್ ಆಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಒಂದರಲ್ಲಿ ‘ಧುರಂಧರ್ 2’ ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಆದರೆ ತಾಂತ್ರಿಕ ದೋಷವೋ ಅಥವಾ ವಿಭಿನ್ನ ಪ್ರಯೋಗವೋ ಏನೋ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಂಭಾಷಣೆ ಕೇಳಲು ಆರಂಭಿಸಿದೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದು ವಿಚಿತ್ರವೆಂದರೆ ಆ ನಿರ್ದಿಷ್ಟ ಶೋನ ಟಿಕೆಟ್​​ಗಳು ತೆಲುಗು ಮತ್ತು ಹಿಂದಿ ಎರಡೂ ಆವೃತ್ತಿಗೆ ಮಾರಾಟ ಆಗಿವೆ. ಕೆಲವರು ತೆಲುಗು ಆವೃತ್ತಿಯ ಟಿಕೆಟ್ ಖರೀದಿಸಿದ್ದರೆ ಇನ್ನು ಕೆಲವರು ಹಿಂದಿ ಆವೃತ್ತಿಯ ಟಿಕೆಟ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?

ಸಿನಿಮಾ ಪ್ರದರ್ಶನದ ವೇಳೆ ಒಂದು ಗುಂಪು ಚಿತ್ರವನ್ನು ಪೂರ್ತಿ ಹಿಂದಿಯಲ್ಲೇ ನೋಡಬೇಕು ಎಂದು ಪಟ್ಟು ಹಿಡಿದರೆ, ಸ್ಥಳೀಯ ಪ್ರೇಕ್ಷಕರು ತೆಲುಗು ಆವೃತ್ತಿಯನ್ನೇ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಭಾಷಾ ವಿವಾದ ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಲ್ಟಿಪ್ಲೆಕ್ಸ್​ನ ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರೇಕ್ಷಕರನ್ನು ಸಮಾಧಾನಪಡಿಸಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಬಳಿಕ ಬೇರೆ ಬೇರೆ ಶೋಗಳನ್ನು ಆಯೋಜನೆ ಮಾಡುವಂತೆ ಮಲ್ಟಿಪ್ಲೆಕ್ಸ್​​ನವರಿಗೆ ನಿರ್ದೇಶಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಸಿನಿಮಾದಲ್ಲಿರೋ ಆಕ್ಷನ್‌ಗಿಂತ ಥಿಯೇಟರ್ ಒಳಗಡೆ ಇರೋ ಆಕ್ಷನ್ ಚೆನ್ನಾಗಿದೆ” ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ‘ರಣವೀರ್ ಸಿಂಗ್ ಎನರ್ಜಿಯೇ ಹಾಗೆ, ಪ್ರೇಕ್ಷಕರಿಗೂ ಹತ್ತಿಕೊಂಡಿದೆ’ ಎಂದು ಕಾಲೆಳೆದಿದ್ದಾರೆ. ‘ಧುರಂಧರ್ 2’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಗೂಢಚಾರಿಯ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us