ಮುಂದುವರಿದ ‘ಧುರಂಧರ್’ ಅಬ್ಬರ; ‘ಟಾಕ್ಸಿಕ್’​ ಚಿತ್ರಕ್ಕೆ ಸಿಗಲಿದೆ ಟಫ್ ಫೈಟ್

ಡಿಸೆಂಬರ್ 9ರವರೆಗೆ ಸಿನಿಮಾ 153 ಕೋಟಿ ರೂಪಾಯಿ ಗಳಿಸಿತ್ತು. ಈಗ ಬುಧವಾರ ಸಿನಿಮಾ ಅಬ್ಬರಿಸಿದೆ. ಈ ಚಿತ್ರ 27 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟೂ ಕಲೆಕ್ಷನ್ 180 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ಇಂದೇ (ಡಿಸೆಂಬರ್ 11) ಒಳ್ಳೆಯ ಕಲೆಕ್ಷನ್ ಮಾಡಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಮುಂದುವರಿದ ‘ಧುರಂಧರ್’ ಅಬ್ಬರ; ‘ಟಾಕ್ಸಿಕ್’​ ಚಿತ್ರಕ್ಕೆ ಸಿಗಲಿದೆ ಟಫ್ ಫೈಟ್
ಧುರಂಧರ್

Updated on: Dec 11, 2025 | 9:04 AM

‘ಧುರಂಧರ್’ ಸಿನಿಮಾದ ಅಬ್ಬರ ಮುಂದುವರಿದಿದೆ. ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿರುವುದರಿಂದ ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವಾರದ ದಿನಗಳಲ್ಲೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ಸಿನಿಮಾ ಬುಧವಾರ (ಡಿಸೆಂಬರ್ 10) 27 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಿಂದ ಸಿನಿಮಾ ಶೀಘ್ರವೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ‘ಧುರಂಧರ್’ ಸೀಕ್ವೆಲ್ ಬಗ್ಗೆಯೂ ನಿರೀಕ್ಷೆ ಮೂಡಿದ್ದು, ‘ಟಾಕ್ಸಿಕ್’ ಚಿತ್ರಕ್ಕೆ ಟಫ್ ಫೈಟ್ ಸಿಗಲಿದೆ.

‘ಧುರಂಧರ್’ ಸಿನಿಮಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಪ್ರಮುಖವಾಗಿ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರ ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ಅವರ ಆ್ಯಕ್ಷನ್ ದೈವವನ್ನು ಟೀಕಿಸಿದಂತೆ ಇತ್ತು. ಇದರಿಂದ ರಣವೀರ್ ಸಿಂಗ್ ಚಿತ್ರಕ್ಕೆ ಹಿನ್ನಡೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಅದು ಸುಳ್ಳಾಗಿತ್ತು. ಈಗ ಧುರಂಧರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.

ಡಿಸೆಂಬರ್ 9ರವರೆಗೆ ಸಿನಿಮಾ 153 ಕೋಟಿ ರೂಪಾಯಿ ಗಳಿಸಿತ್ತು. ಈಗ ಬುಧವಾರ ಸಿನಿಮಾ ಅಬ್ಬರಿಸಿದೆ. ಈ ಚಿತ್ರ 27 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟೂ ಕಲೆಕ್ಷನ್ 180 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾ ಇಂದೇ (ಡಿಸೆಂಬರ್ 11) ಒಳ್ಳೆಯ ಕಲೆಕ್ಷನ್ ಮಾಡಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇದನ್ನೂ ಓದಿ: ಊಹೆಗೂ ಮೀರಿ ಧುರಂಧರ್ ಕಲೆಕ್ಷನ್; ಸೋಮವಾರಕ್ಕಿಂತ ಮಂಗಳವಾರದ ಗಳಿಕೆ ಜೋರು

ಟಾಕ್ಸಿಕ್​​ ಜೊತೆ ಫೈಟ್

‘ಟಾಕ್ಸಿಕ್’ ಸಿನಿಮಾ 2026ರ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಇದು ಯಶ್ ನಟನೆಯ ಚಿತ್ರ. ಹೀಗಾಗಿ, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೆ ‘ಧುರಂಧರ್ 2’ ಫೈಟ್ ಕೊಡಲಿದೆ. ‘ಧುರಂಧರ್’ ಚಿತ್ರದ ಕಥೆ ಮುಂದುವರಿಯಲಿದೆ. ಎರಡನೇ ಪಾರ್ಟ್ ಮಾರ್ಚ್ 19ಕ್ಕೆ ಬಿಡುಗಡೆ ಕಾಣಲಿದೆ ಎಂದು ತಂಡ ಘೋಷಿಸಿದೆ. ಹೀಗಾಗಿ, ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.