ಮರುಕಳಿಸಿದ ಇತಿಹಾಸ; ದರ್ಶನ್ ಇಲ್ಲದೆ ರಿಲೀಸ್ ಆಗಿತ್ತು ಸಾರಥಿ ಸಿನಿಮಾ
ನಟ ದರ್ಶನ್ ಅವರ 'ಡೆವಿಲ್' ಸಿನಿಮಾ ಅವರು ಜೈಲಿನಲ್ಲಿರುವಾಗಲೇ ಇಂದು ತೆರೆಕಂಡಿದೆ. 2011ರಲ್ಲಿ ದರ್ಶನ್ ಜೈಲಿನಲ್ಲಿದ್ದಾಗಲೂ 'ಸಾರಥಿ' ಚಿತ್ರ ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಆಗಿತ್ತು. ಈಗ 'ಡೆವಿಲ್' ಚಿತ್ರಕ್ಕೂ ಅದೇ ರೀತಿಯ ಅದೃಷ್ಟವಿರುವುದೇ ಎಂಬ ಕುತೂಹಲವಿದೆ. ಸಂಪೂರ್ಣವಾಗಿ ತಿಳಿದುಕೊಳ್ಳಲು ಸುದ್ದಿ ಓದಿ.

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ (Devil Movie) ಇಂದು (ಡಿಸೆಂರ್ 11) ರಿಲೀಸ್ ಆಗಿದೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿದೆ. ಈ ಸಿನಿಮಾಗೆ ಮುಂಜಾನೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಸಿನಿಮಾಗೆ 6.30ಕ್ಕೆ ಶೋ ಆರಂಭ ಆಗಿದೆ. ಹೀಗಾಗಿ, ಇನ್ನು ಕೆಲವೇ ಗಂಟೆಗಳಲ್ಲಿ ಸಿನಿಮಾದ ಭವಿಷ್ಯ ನಿರ್ಧಾರವಾಗಲಿದೆ. ದರ್ಶನ್ ಅವರು ಈ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ಜೈಲಿನಲ್ಲಿ ಇದ್ದಾರೆ. ಈ ಮೊದಲು ಕೂಡ ಈ ರೀತಿಯ ಘಟನೆ ನಡೆದಿತ್ತು ಎಂಬುದು ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ.
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಮೊದಲು ಜಾಮೀನು ಪಡೆದು ಹೊರಕ್ಕೆ ಬಂದಿದ್ದ ಅವರು ಈಗ ಮತ್ತೆ ಜೈಲಿಗೆ ಹೋಗಬೇಕಾಯಿತು. ಇದಕ್ಕೆ ಕಾರಣ ಆಗಿದ್ದು ಸುಪ್ರೀಂಕೋರ್ಟ್. ಕೋರ್ಟ್ ದರ್ಶನ್ ಜಾಮೀನನ್ನು ರದ್ದು ಮಾಡಿತು ಮತ್ತು ಇದರಿಂದ ದರ್ಶನ್ ಅವರು ಮತ್ತೆ ಜೈಲು ಸೇರಿದರು. ಸಿನಿಮಾ ಕೆಲಸ ಸಂಪೂರ್ಣವಾಗಿ ಮುಗಿದಿದ್ದರಿಂದ ನಿರ್ದೇಶಕರು ಚಿತ್ರವನ್ನು ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ದರ್ಶನ್ ಇಲ್ಲದೆಯೇ ಚಿತ್ರ ರಿಲೀಸ್ ಆಗುತ್ತಿದೆ.
ಈ ಘಟನೆ ಈ ಮೊದಲು ಕೂಡ ನಡೆದಿತ್ತು ಎಂದರೆ ನೀವು ನಂಬಲೇಬೇಕು. 2011ರಲ್ಲಿ ‘ಸಾರಥಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಚಿತ್ರವನ್ನು ಅವರ ಸಹೋದರ ದಿನಕರ್ ಸುದೀಪ್ ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಸಿನಿಮಾ ನೋಡಲು ದರ್ಶನ್ ಹೊರಗೆ ಇರಲಿಲ್ಲ. ಅವರು ಇದ್ದಿದ್ದು ಜೈಲಿನಲ್ಲಾಗಿತ್ತು. ಇದಕ್ಕೆ ಕಾರಣ ಅವರ ಪತ್ನಿ ವಿಜಯಲಕ್ಷ್ಮೀ ಅವರು.
ಇದನ್ನೂ ಓದಿ: ಥಿಯೇಟರ್‌ಗಳಲ್ಲಿ ‘ಡೆವಿಲ್’ ಅಬ್ಬರ; ಮುಗಿಲುಮುಟ್ಟಿದ ದರ್ಶನ್ ಫ್ಯಾನ್ಸ್ ಸಂಭ್ರಮ
ವಿಜಯಲಕ್ಷ್ಮೀ ಅವರ ಮೇಲೆ ದರ್ಶನ್ 2011ರಲ್ಲಿ ಹಲ್ಲೆ ಮಾಡಿದ್ದರು. ಆಗ ಸ್ವತಃ ವಿಜಯಲಕ್ಷ್ಮೀ ಅವರೇ ಕೇಸ್ ಹಾಕಿದರು. ಈ ಸಂಬಂಧ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಅವರು ಆಗ ನ್ಯಾಯಾಂಗ ಬಂಧನದಲ್ಲಿ ಇದ್ದರು. ಅವರು ಜೈಲಿನಲ್ಲಿ ಇರುವಾಗಲೇ ‘ಸಾರಾಥಿ’ ಸಿನಿಮಾ ರಿಲೀಸ್ ಆಯಿತು. ಆ ಬಳಿಕ ಸಿನಿಮಾ ಸೂಪರ್ ಹಿಟ್ ಆಯಿತು. ಆ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ‘ಸಾರಥಿ’ ಹೊರಹೊಮ್ಮಿತು. ಈಗ ‘ಡೆವಿಲ್’ ಯಶಸ್ಸು ಕಾಣುತ್ತದೆಯೇ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



