Devil Twitter Review: ‘ನಾವು ಗೆದ್ವಿ’; ‘ಡೆವಿಲ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ದರ್ಶನ್ ಅವರಿಗೆ ಈ ಗೆಲುವು ತುಂಬಾನೇ ಮುಖ್ಯವಾಗಿತ್ತು. ಅವರು ಜೈಲಿನಲ್ಲಿ ಇರುವಾಗ ಸಿನಿಮಾ ರಿಲೀಸ್ ಆಗಿದ್ದರಿಂದ ಪ್ರಚಾರ ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಅಭಿಮಾನಿಗಳು ಮುಂದೆ ನಿಂತು ಸಿನಿಮಾಗೆ ಪ್ರಚಾರ ಮಾಡಿದ್ದಾರೆ. ಈಗ ಚಿತ್ರಕ್ಕೆ ಪಾಸಿಟಿವ್ ವಿಮರ್ಶೆ ಸಿಕ್ಕಿರವುದು ಅವರ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ರಿಲೀಸ್ ಆಗಿ ಅಬ್ಬರಿಸುತ್ತಿದೆ. ಏಕಪರದೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ನೋಡಿ ಬಂದ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಇತ್ತ ಅವರ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಮಾಸ್ ಡೈಲಾಗ್, ಟ್ವಿಸ್ಟ್ಗಳನ್ನು ಒಳಗೊಂಡ ಕಥೆಗಳ ಮೂಲಕ ಫ್ಯಾನ್ಸ್ಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ಈ ಚಿತ್ರವನ್ನು ಫ್ಯಾನ್ಸ್ ಹೆಚ್ಚು ಖುಷಿಯಿಂದ ನೋಡುತ್ತಿದ್ದಾರೆ. ‘ನಾವು ಗೆದ್ವಿ’ ಎಂದು ಎಲ್ಲರೂ ಹಾಕಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮರುಕಳಿಸಿದ ಇತಿಹಾಸ; ದರ್ಶನ್ ಇಲ್ಲದೆ ರಿಲೀಸ್ ಆಗಿತ್ತು ಸಾರಥಿ ಸಿನಿಮಾ
ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಅಭಿಮಾನಿಗಳ ಜೊತೆ ಫ್ಯಾಮಿಲಿ ಆಡಿಯನ್ಸ್ಗೂ ಇಷ್ಟ ಆಗಿತ್ತು. ‘ಡೆವಿಲ್’ ಕೂಡ ಹಾಗೆಯೇ ಇದೆ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ. ‘ಫ್ಯಾನ್ಸ್ಗೂ ಜೈ, ಫ್ಯಾಮಿಲಿ ಆಡಿಯನ್ಸ್ಗೂ ಜೈ’ ಎಂದು ಫ್ಯಾನ್ಸ್ ಬರೆದುಕೊಂಡಿದ್ದಾರೆ. ದರ್ಶನ್ ಎಂಟ್ರಿ, ಅವರ ನಟನೆಯನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಆರಂಭಿಕ ವಿಮರ್ಶೆ ನೋಡಿದರೆ ದರ್ಶನ್ ಅಭಿಮಾನಿಗಳಿಗೆ ಇದು ಹಬ್ಬದೂಟದ ರೀತಿ ಕಾಣಿಸುತ್ತಿದೆ.
One line review.. Fans ಗು ಜೈ , Family audience ಗು ಜೈ. ಎರಡು contents balanced ಆಗಿದೆ 🔥🔥💥💥 #TheDevil #DBoss @sjmcfilms @saregamasouth
— ನಿಮಿಷ್ ಎಸ್ ಕೌಶಿಕ್ / Nimish S Koushik (@nimish_koushik) December 11, 2025
Thank You Boss 🥲🥲💥💥
Prakash anna once again Thank you 🫡🫡❤️
Konegu Nave Gedbitvi🥲🥲💗❤️
Mass + Family Audience Movie 🔥❤️
Already TL Thumba Neutrals BB Review aktha idare🔥🔥🔥
Love You all Neutrals ❤️❤️❤️#DBoss #TheDevilFDFSpic.twitter.com/iZArzfk5ox
— DBoss_VK_cult ᴰᴱⱽᴵᴸ 🗡️👀🏏 (@DBossVK18Fan) December 11, 2025
Finally #DBoss come back 💥🔥🔥 En movie guru yappa Boss entry 💥#TheDevilFdfs#TheDevil#BossOfSandalwood
— D–EVI-L (@Dboss7899) December 11, 2025
Thank you Devil prakash…. wt a movie ❣️❣️ pic.twitter.com/kLfl5htVaL
— Rohit (@Rohit59198395) December 11, 2025
ದರ್ಶನ್ ಅವರಿಗೆ ಈ ಗೆಲುವು ತುಂಬಾನೇ ಮುಖ್ಯವಾಗಿತ್ತು. ಅವರು ಜೈಲಿನಲ್ಲಿ ಇರುವಾಗ ಸಿನಿಮಾ ರಿಲೀಸ್ ಆಗಿದ್ದರಿಂದ ಪ್ರಚಾರ ದೊಡ್ಡ ಚಾಲೆಂಜ್ ಆಗಿತ್ತು. ಆದರೆ, ಅಭಿಮಾನಿಗಳು ಮುಂದೆ ನಿಂತು ಸಿನಿಮಾಗೆ ಪ್ರಚಾರ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




