AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನ ಥಿಯೇಟರ್​​ಗೆ ಹೋಗಿ ದರ್ಶನ್ ಸಿನಿಮಾ ನೋಡುತ್ತಿರಲಿಲ್ಲವೇಕೆ? ಇಲ್ಲಿದೆ ಉತ್ತರ

ನಟ ದರ್ಶನ್ ಅವರ 'ಡೆವಿಲ್' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಪತ್ನಿ ವಿಜಯಲಕ್ಷ್ಮೀ ಹಾಗೂ ಕುಟುಂಬ ಚಿತ್ರ ವೀಕ್ಷಿಸಿದೆ. ದರ್ಶನ್ ತಮ್ಮ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡದಿರಲು ಕಾರಣ ಅವರ ಅತಿ ದೊಡ್ಡ ಅಭಿಮಾನಿ ಬಳಗ. ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟ, ಥಿಯೇಟರ್‌ಗೆ ಹಾನಿಯಾಗುವ ಸಾಧ್ಯತೆಯಿಂದ ಅವರು ದೂರ ಉಳಿಯುತ್ತಾರೆ. 'ಡೆವಿಲ್' ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆತಿದೆ, ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.

ಮೊದಲ ದಿನ ಥಿಯೇಟರ್​​ಗೆ ಹೋಗಿ ದರ್ಶನ್ ಸಿನಿಮಾ ನೋಡುತ್ತಿರಲಿಲ್ಲವೇಕೆ? ಇಲ್ಲಿದೆ ಉತ್ತರ
ದರ್ಶನ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 11, 2025 | 10:02 AM

Share

ನಟ ದರ್ಶನ್ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಅಭಿನಯದ ‘ಡೆವಿಲ್’ ಚಿತ್ರವು ಇಂದು (ಡಿಸೆಂಬರ್ 11) ರಿಲೀಸ್ ಆಗಿದೆ. ಈ ಚಿತ್ರವನ್ನು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಮಗ ವಿನೀಶ್, ದರ್ಶನ್ ಅವರ ಆಪ್ತ ಎನಿಸಿಕೊಂಡಿರುವ ಧನ್ವೀರ್ ವೀಕ್ಷಣೆ ಮಾಡಿದರು. ಬೆಂಗಳೂರಿನ ನರ್ತಕಿ ಥಿಯೇಟರ್​​ನಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ದರ್ಶನ್ ಅವರು ತಮ್ಮ ಚಿತ್ರವನ್ನು ನೋಡಲು ಎಂದಿಗೂ ಥಿಯೇಟರ್​ಗೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣವನ್ನು ಹೇಳಿದ್ದರು.

ದರ್ಶನ್ ಅವರ ಅಭಿಮಾನಿ ಬಳಗ ಎಷ್ಟು ದೊಡ್ಡದಿದೆ ಎಂದು ಹೇಳಬೇಕಿಲ್ಲ. ಅವರು ಇನ್ನೂ ಜೈಲಿಗೆ ಹೋಗದೆ ಇರುವಾಗ ಅವರ ಮನೆಯ ಹೊರಗೆ ಒಂದಷ್ಟು ಅಭಿಮಾನಿಗಳು ಸದಾ ನೆರೆದಿರುತ್ತಿದ್ದರು. ಅವರು ದರ್ಶನ್​ಗಾಗಿ ಕಾದು ಕುಳಿತುರುತ್ತಿದ್ದರು. ಅವರು ಬಂದ ತಕ್ಷಣ ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹೀಗಿರುವಾಗ ಅವರು ಥಿಯೇಟರ್​ಗೆ ಹೋದರೆ ಜನರನ್ನು ನಿಯಂತ್ರಿಸಲು ಎಲ್ಲಾದರೂ ಸಾಧ್ಯವೇ? ಈ ಕಾರಣಕ್ಕೆ ಅವರು ಥಿಯೇಟರ್​ಗೆ ಹೋಗುತ್ತಾ ಇರಲಿಲ್ಲ.

ದರ್ಶನ್ ಬರುತ್ತಾರೆ ಎಂಬ ವಿಷಯ ತಿಳಿದರೆ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬರಹುದು. ಇಷ್ಟೇ ಅಲ್ಲ, ದರ್ಶನ್ ಅವರು ಬಂದರೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆರೆದು ಥಿಯೇಟರ್​ಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ನುಗ್ಗಾಟದಲ್ಲಿ ಗಾಜು ಒಡೆಯಬಹುದು, ಕುರ್ಚಿ ಹಾಳಾಗಬಹುದು. ಇದರಿಂದ ಚಿತ್ರಮಂದಿದವರಿಗೆ ನಷ್ಟ ಆಗುತ್ತದೆ. ಈ ಕಾರಣದಿಂದ ದರ್ಶನ್ ಅವರು ಥಿಯೇಟರ್​ಗೆ ಹೋಗುತ್ತಾ ಇರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

ಇದನ್ನೂ ಓದಿ:  ‘ನಾವು ಗೆದ್ವಿ’; ‘ಡೆವಿಲ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

‘ಡೆವಿಲ್’ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಥಿಯೇಟರ್​​ನ ಸಿಂಗರಿಸಿಲಾಗಿದೆ. ದೊಡ್ಡ ದೊಡ್ಡ ಕಟೌಟ್​ಗಳನ್ನು ಹಾಕಲಾಗಿದೆ. ದರ್ಶನ್ ಕಟೌಟ್​ಗೆ ಹಾಲಿನ ಅಭಿಷೇಕದ ದೃಶ್ಯಗಳು ಸರ್ವೇ ಸಾಮಾನ್ಯ ಎಂಬಂತಾಗಿತ್ತು. ದರ್ಶನ್ ಅವರ ಈ ಚಿತ್ರ ಹಿಟ್ ಆಗುವ ಎಲ್ಲಾ ಸಾಧ್ಯತೆ ಇದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.