
ಸಿನಿಮಾಗಳು ರಿಲೀಸ್ ಆದ ಮೊದಲ ವಾರ ಅಬ್ಬರಿಸಿ ನಂತರದ ವಾರಗಳಲ್ಲಿ ಮುಗ್ಗರಿಸುತ್ತವೆ. ಮೂರನೇ ವಾರಕ್ಕೆ ಬರೋವರೆಗೆ ಸಿನಿಮಾ ಸುಸ್ತಾಗಿ ಬಿಡುತ್ತದೆ. ಆದರೆ, ‘ಧುರಂಧರ್’ ಹಾಗಲ್ಲ. ರಿಲೀಸ್ ಆಗಿ ಆರು ವಾರ ಕಳೆದರೂ ಸಿನಿಮಾ ಮುನ್ನುಗ್ಗುತ್ತಿದೆ. ಈಗ ಈ ಚಿತ್ರ 10 ವರ್ಷಗಳ ಹಿಂದೆ ಬರೆದಿದ್ದ ದಾಖಲೆಯನ್ನು ಉಡೀಸ್ ಮಾಡಿದೆ.
‘ಬಾಹುಬಲಿ 2’ ಸಿನಿಮಾ 2016ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಚಿತ್ರ ಬರೆದ ದಾಖಲೆ ಒಂದೆರಡಲ್ಲ. ಇದನ್ನು ಅಳಿಸಲು ಅನೇಕ ಸಿನಿಮಾಗಳ ಬಳಿ ಸಾಧ್ಯವೇ ಆಗಿಲ್ಲ. ಆದರೆ, ದಶಕಗಳ ಬಳಿಕ ಬಂದ ‘ಧುರಂದರ್’ ಸಿನಿಮಾ ಈ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
ಉತ್ತರ ಅಮೇರಿಕದಲ್ಲಿ ‘ಬಾಹುಬಲಿ 2’ ಚಿತ್ರವನ್ನು 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಇದಾದ ಬಳಿಕ ಯಾವ ಭಾರತೀಯ ಸಿನಿಮಾಗೂ 20 ಲಕ್ಷಕ್ಕೂ ಹೆಚ್ಚು ಜನರು ಬಂದಿರಲಿಲ್ಲ. ಆದರೆ, ‘ಧರುಂಧರ್ 2’ ಚಿತ್ರಕ್ಕೆ ಉತ್ತರ ಅಮೆರಿಕದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರ ಆಗಮನ ಆಗಿದೆ. ಈ ಮೂಲಕ ದಶಕದ ಹಿಂದಿನ ದಾಖಲೆ ಮುರಿದು ಬಿದ್ದಿದೆ.
dhurandar lifetime collection estimate: 894.69 crores hindi.. can it touch 900?#Dhurandhar pic.twitter.com/kksxJjh1fl
— MAN (@daydreamerrr69) January 12, 2026
ಭಾರತಾದ್ಯಂತ ಈ ಸಿನಿಮಾ 800 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಸಿನಿಮಾ 1254 ಕೋಟಿ ರೂಪಾಯಿ ಗಳಿಸಿದೆ. ‘ಧುರಂಧರ್’ ಸಿನಿಮಾ 38ನೇ ದಿನ 6.15 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಚಿತ್ರದ ಹೆಚ್ಚುಗಾರಿಕೆ.
ಇದನ್ನೂ ಓದಿ: ‘ನನಗೆ ಧುರಂಧರ್ 2, ಟಾಕ್ಸಿಕ್ ಬಗ್ಗೆ ಭಯವಿಲ್ಲ’; ನೇರವಾಗಿ ಹೇಳಿದ ನಿರ್ಮಾಪಕ
ಈ ಸಿನಿಮಾ ನಾಲ್ಕು ಹಿಟ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ. ‘ಕೆಜಿಎಫ್ ಚಾಪ್ಟರ್ 2’, ‘ಆರ್ಆರ್ಆರ್’, ‘ಜವಾನ್’ ಹಾಗೂ ‘ಪಠಾಣ್’ ಚಿತ್ರಗಳ ಕಲೆಕ್ಷನ್ ಮೀರಿ ‘ಧುರಂಧರ್’ ಚಿತ್ರದ ಕಲೆಕ್ಷನ್ ನಿಂತಿದೆ. ಇನ್ನಷ್ಟು ದಾಖಲೆಗಳು ಚಿತ್ರದಿಂದ ನಿರೀಕ್ಷಿಸಬಹುದಾಗಿದೆ.
‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ವೇಳೆ ‘ಟಾಕ್ಸಿಕ್’ ಸಿನಿಮಾ ಕೂಡ ತೆರೆಗೆ ಬರಲಿದೆ. ಎರಡೂ ಚಿತ್ರಗಳ ಮಧ್ಯೆ ದೊಡ್ಡ ಕ್ಲ್ಯಾಶ್ ಏರ್ಪಡುತ್ತಾ ಇದೆ. ಈ ಕ್ಲ್ಯಾಶ್ ತುಂಬಾನೇ ದೊಡ್ಡ ಮಟ್ಟದಲ್ಲಿರೋ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.