ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್​ ಬಂಧನವಾಯ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಸೋಶಿಯಲ್​ ಮೀಡಿಯಾದಲ್ಲಿ ಅಲ್ಲು ಅರ್ಜುನ್​ ಅವರ ಈ ಫೋಟೋ ವೈರಲ್​ ಆಗಿದೆ. ಅಧಿಕಾರಿಗಳ ಎದುರಿನಲ್ಲಿ ಅವರು ನಿಂತುಕೊಂಡ ಸಹಿ ಮಾಡುತ್ತಿರುವ ದೃಶ್ಯ ಇದರಲ್ಲಿದೆ. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಗಾಬರಿ ಆಗಿದೆ. ಅಲ್ಲು ಅರ್ಜುನ್​ ಅರ್ಜುನ್​ ಅರೆಸ್ಟ್​ ಆಗಿದ್ದಾರೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ. ಆದರೆ ಅದು ಸುಳ್ಳು ಎಂಬುದು ಗೊತ್ತಾಗಿದೆ.

ಹೈದರಾಬಾದ್​ ಪೊಲೀಸರಿಂದ ಅಲ್ಲು ಅರ್ಜುನ್​ ಬಂಧನವಾಯ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ
ಅಲ್ಲು ಅರ್ಜುನ್ ವೈರಲ್​ ಫೋಟೋ

Updated on: Mar 21, 2024 | 5:52 PM

ನಟ ಅಲ್ಲು ಅರ್ಜುನ್​ (Allu Arjun) ಅವರು ಪ್ರತಿ ದಿನ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಇಂದು (ಮಾರ್ಚ್​ 21) ಅವರನ್ನು ಹೈದರಾಬಾದ್​ ಪೊಲೀಸರು ಬಂಧಿಸಿದ್ದಾರೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದಾರೆ. ಆ ವಿಷಯ ಕೇಳಿ ಅಭಿಮಾನಿಗಳಿಗೆ ಆತಂಕ ಆಗಿದೆ. ಅಷ್ಟಕ್ಕೂ ಅರೆಸ್ಟ್​ (Arrest) ಆಗುವಂತಹ ಯಾವ ತಪ್ಪನ್ನು ಅಲ್ಲು ಅರ್ಜುನ್ ಮಾಡಿದರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿತು. ಆದರೆ ಅಸಲಿ ಸಂಗತಿಯೇ ಬೇರೆ. ಅಲ್ಲು ಅರ್ಜುನ್​ ಅವರು ಆರ್​ಟಿಒ ಕಚೇರಿಗೆ ಭೇಟಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಡ್ರೈವಿಂಗ್​ ಲೈಸೆನ್ಸ್​ ಪಡೆಯುವ ಉದ್ದೇಶದಿಂದ ಅವರು ಆರ್​ಟಿಒ ಕಚೇರಿಗೆ ತೆರಳಿದ್ದಾರೆ ಅಷ್ಟೇ. ಆ ಸಂದರ್ಭದ ಫೋಟೋವನ್ನು (Allu Arjun Viral Photo) ಇಟ್ಟುಕೊಂಡು ಕಿಡಿಗೇಡಿಗಳು ಬಂಧನದ ಗಾಸಿಪ್​ ಹಬ್ಬಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಆರ್​ಟಿಒ ಅಧಿಕಾರಿಗಳ ಎದುರಿನಲ್ಲಿ ಅಲ್ಲು ಅರ್ಜುನ್​ ಅವರು ಸಹಿ ಮಾಡುತ್ತಿರುವ ದೃಶ್ಯ ಈ ಫೋಟೋದಲ್ಲಿದೆ. ಈ ಫೋಟೋ ನೋಡಿದ ಫ್ಯಾನ್ಸ್​ಗೆ ಗಾಬರಿ ಆಗಿದೆ. ಆದರೆ ಅವರು ಸಹಿ ಮಾಡುತ್ತಿರುವುದು ಅಂತಾರಾಷ್ಟ್ರೀಯ ಡ್ರೈವಿಂಗ್​ ಲೈಸೆನ್ಸ್​ ಅರ್ಜಿಗೆ. ಈ ವಿಷಯ ಗೊತ್ತಾದ ಬಳಿಕ ಅರೆಸ್ಟ್​ ವದಂತಿಗೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ: ‘ನಾವು ಸಹೋದರರು, ಪರಸ್ಪರ ಗೌರವ ಇದೆ’; ಬಾಲಿವುಡ್​ ಬಗ್ಗೆ ಅಲ್ಲು ಅರ್ಜುನ್​ ಮಾತು

ಅಷ್ಟಕ್ಕೂ ಅಲ್ಲು ಅರ್ಜುನ್​ ಅವರಿಗೆ ಇಂಟರ್​ನ್ಯಾಷನಲ್​ ಡ್ರೈವಿಂಗ್​ ಲೈಸೆನ್ಸ್​ ಅಗತ್ಯತೆ ಏನಿದೆ? ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಸದ್ಯ ಅಲ್ಲು ಅರ್ಜುನ್​ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ವಿದೇಶದಲ್ಲೂ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಫಾರಿನ್​ನಲ್ಲಿ ನಡೆಯುವ ಭರ್ಜರಿ ಚೇಸಿಂಗ್​ ದೃಶ್ಯಗಳಲ್ಲಿ ಅಲ್ಲು ಅರ್ಜುನ್​ ಅವರು ವಾಹನ ಚಾಲನೆ ಮಾಡಬೇಕಿದೆ. ಆ ಸಂದರ್ಭದಲ್ಲಿ ಕಾನೂನಿನ ಅಡೆತಡೆ ಉಂಟಾಗುವುದು ಬೇಡ ಎಂಬ ಉದ್ದೇಶದಿಂದ ಅವರು ಮುಂಚಿತವಾಗಿ ಅಂತಾರಾಷ್ಟ್ರೀಯ ಡ್ರೈವಿಂಗ್​ ಲೈಸೆನ್ಸ್​ ಪಡೆದುಕೊಳ್ಳುತ್ತಿದ್ದಾರೆ.

ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಇತ್ತೀಚೆಗೆ ಶೂಟಿಂಗ್​ ಸೆಟ್​ನಿಂದ ಒಂದು ವಿಡಿಯೋ ಲೀಕ್​ ಆಗಿತ್ತು. ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಡಿಯೋ ಲೀಕ್​ ಮೂಲಕ ಆ ಪಾತ್ರದ ಗೆಟಪ್​ ಬಹಿರಂಗ ಆಗಿದೆ. ಹೀಗೆ ಒಂದಲ್ಲ ಒಂದು ಕಾರಣದಿಂದ ಈ ಸಿನಿಮಾ ಸುದ್ದಿ ಆಗುತ್ತಿದೆ. ಸುಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us