ಪೂಜಾ ಹೆಗ್ಡೆ ಕ್ಯಾರಾವ್ಯಾನ್​ಗೆ ನುಗ್ಗಿದ್ದರೇ ಪ್ರಭಾಸ್? ಸತ್ಯಾಂಶವೇನು?

Pooja Hegde: ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮಾಡುವಾಗ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ನಟರೊಬ್ಬರು ನನಗಾಗಿ ಮೀಸಲಿದ್ದ ಕ್ಯಾರಾವ್ಯಾನ್ ಒಳಕ್ಕೆ ಬಲವಂತವಾಗಿ ನುಗ್ಗಿದರು, ಆಗ ನಾನು ಅವರ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಸುದ್ದಿ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದೆ.

ಪೂಜಾ ಹೆಗ್ಡೆ ಕ್ಯಾರಾವ್ಯಾನ್​ಗೆ ನುಗ್ಗಿದ್ದರೇ ಪ್ರಭಾಸ್? ಸತ್ಯಾಂಶವೇನು?
Prabhas Pooja Hegde

Updated on: Jan 20, 2026 | 3:40 PM

ಸಿನಿಮಾ ರಂಗದಲ್ಲಿ (Cinema) ಮಹಿಳೆಯರ ಮೇಲೆ ದೌರ್ಜನ್ಯ ದಶಕಗಳಿಂದಲೂ ನಡೆದುಕೊಂಡು ಬರುತ್ತಲೇ ಇದೆ. ನಟಿಯರು, ಚಿತ್ರರಂಗದಲ್ಲಿ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಆದರೆ ಮೀ ಟೂ ಚಳವಳಿ ಬಂದ ಬಳಿಕ ಹಲವು ನಟಿಯರು ಈ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದರು. ಆದರೆ ಕೆಲವರು ಇದೇ ಚಳವಳಿಯನ್ನು ಋಣಾತ್ಮಕವಾಗಿಯೂ ಬಳಸಿಕೊಂಡು, ಸುಳ್ಳು ಆರೋಪ, ತೇಜೋ ವಧೆಗಳನ್ನು ಸಹ ಮಾಡಿದರು. ಇನ್ನು ಕೆಲವರು ಮತ್ತೊಬ್ಬರ ಮೇಲೆ ತಪ್ಪು ಅಭಿಪ್ರಾಯ ಭಿತ್ತಲು ನಟಿಯರನ್ನು ಬಳಸಿಕೊಂಡರು. ಇತ್ತೀಚೆಗೆ ಪೂಜಾ ಹೆಗ್ಡೆ ಹೇಳಿದ್ದಾರೆ ಎನ್ನಲಾದ ಇದೇ ರೀತಿಯ ಸುದ್ದಿಯೊಂದು ಹರಿದಾಡುತ್ತಿದೆ.

ಕಳೆದ ಕೆಲ ದಿನಗಳಿಂದ ಪೂಜಾ ಹೆಗ್ಡೆಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣ ಮಾಡುವಾಗ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ನಟರೊಬ್ಬರು ನನಗಾಗಿ ಮೀಸಲಿದ್ದ ಕ್ಯಾರಾವ್ಯಾನ್ ಒಳಕ್ಕೆ ಬಲವಂತವಾಗಿ ನುಗ್ಗಿದರು, ಆಗ ನಾನು ಅವರ ಕಪಾಳಕ್ಕೆ ಹೊಡೆದೆ ಎಂದು ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಸುದ್ದಿ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದೆ. ಹಲವರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.

ಪೂಜಾ ಹೆಗ್ಡೆ ಹೇಳಿರುವಂತೆ ಅವರ ಕ್ಯಾರಾವ್ಯಾನ್​​ಗೆ ನುಗ್ಗಿರುವವರು ಯಾರು ಎಂಬ ಚರ್ಚೆಯನ್ನೂ ಮಾಡಿದ್ದು, ಹಲವರು ಅದು ಪ್ರಭಾಸ್ ಆಗಿರಬೇಕು ಎಂದಿದ್ದಾರೆ. ಏಕೆಂದರೆ ‘ರಾಧಾ-ಶ್ಯಾಮ್’ ಸಿನಿಮಾದ ಬಳಿಕ ಏಕಾ-ಏಕಿ ಪೂಜಾ ಹೆಗ್ಡೆ ತೆಲುಗು ಚಿತ್ರರಂಗದಿಂದ ಕಾಣೆ ಆದರು. ಆ ರೀತಿ ಕಾಣೆ ಆಗಿದ್ದಕ್ಕೆ ಪ್ರಭಾಸ್​​ ಅವರೇ ಕಾರಣ ಇರಬಹುದು ಎಂಬೆಲ್ಲ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಇದನ್ನೂ ಓದಿ:ಚಿರಂಜೀವಿ ಕ್ರೇಜ್: ಒಂದೇ ಕುಟುಂಬದ 140 ಮಂದಿಯಿಂದ ಸಿನಿಮಾ ವೀಕ್ಷಣೆ

ಆದರೆ ಇದು ಸುಳ್ಳಿ ಸುದ್ದಿಯಂತೆ. ಪೂಜಾ ಹೆಗ್ಡೆ ಹೀಗೊಂದು ಹೇಳಿಕೆಯನ್ನು ಎಲ್ಲಿಯೂ ನೀಡಿಲ್ಲ. ಯಾವ ಮಾಧ್ಯಮಗಳ ಬಳಿಯೂ ಮೇಲಿನಂತೆ ಪೂಜಾ ಹೆಗ್ಡೆ ಹೇಳಿಕೊಂಡಿಲ್ಲ. ಆದರೆ ಯಾರೋ ಕೆಲವು ಕಿಡಿಗೇಡಿಗಳು ಬೇಕೆಂದೇ ಪೂಜಾ ಹೆಗ್ಡೆ ಅವರ ಫೋಟೊ ಬಳಸಿ ಹೀಗೊಂದು ನಕಲಿ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಕಲಿ ಸುದ್ದಿಯನ್ನು ನಂಬಿಕ ಕೆಲವರು ಪ್ರಭಾಸ್ ಅವರ ಬಗ್ಗೆ ಋಣಾತ್ಮಕ ಪೋಸ್ಟ್​​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಪ್ರಭಾಸ್ ಜೊತೆಗೆ ‘ರಾಧೆ-ಶ್ಯಾಮ್’ ಸಿನಿಮಾನಲ್ಲಿ ನಟಸಿದ್ದು, ಪ್ರಭಾಸ್ ಬಗ್ಗೆ ಗೌರವ ಹೊಂದಿದ್ದಾರೆ. ಪ್ರಭಾಸ್ ಬಗ್ಗೆ ಕೆಲ ಸಂದರ್ಶನಗಳಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಪೂಜಾ ಹೆಗ್ಡೆ ಇದೀಗ ಮತ್ತೆ ತೆಲುಗು ಚಿತ್ರರಂಗಕ್ಕೆ ಮರಳಿದ್ದು ಎರಡು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತಮಿಳಿನ ‘ಕಾಂಚನಾ 4’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಕೈಯಲ್ಲಿ ಒಂದೆರಡು ಹಿಂದಿ ಸಿನಿಮಾಗಳು ಸಹ ಪೂಜಾ ಹೆಗ್ಡೆಗೆ ಇವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ