ತೆಲುಗು ಚಿತ್ರರಂಗದ ಯುವ ನಟ ಅಖಿಲ್ ಅಕ್ಕಿನೇನಿ (Akhil Akkineni) ಅವರ ಮುಂದಿನ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಅವರು ನಟಿಸಿರುವ ‘ಏಜೆಂಟ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ಖಡಕ್ ಆದಂತಹ ಪೋಸ್ಟರ್ ಅನಾವರಣ ಆಗಿತ್ತು. ಅದರ ಬೆನ್ನಲ್ಲೇ ಹೊಸ ಹೊಸ ಅಪ್ಡೇಟ್ಗಳನ್ನು ಈ ಚಿತ್ರತಂಡ ನೀಡುತ್ತಿದೆ. ‘ಏಜೆಂಟ್’ (Agent Movie) ಸಿನಿಮಾದಲ್ಲಿ ಮಾಲಿವುಡ್ನ ಸ್ಟಾರ್ ಕಲಾವಿದರ ಮಮ್ಮೂಟಿ ನಟಿಸಿರುವುದು ಗೊತ್ತೇ ಇದೆ. ನಾಯಕಿಯಾಗಿ ಸಾಕ್ಷಿ ವೈದ್ಯ ಅಭಿನಯಿಸಿದ್ದಾರೆ. ಈಗ ‘ಏಜೆಂಟ್’ ಅಂಗಳದಿಂದ ಹೊಸದೊಂದು ಪೋಸ್ಟರ್ ಅನಾವರಣ ಆಗಿದೆ. ಈ ಚಿತ್ರತಂಡಕ್ಕೆ ಈಗ ಮತ್ತೋರ್ವ ಸ್ಟಾರ್ ನಟನ ಎಂಟ್ರಿ ಆಗಿದೆ. ಬಾಲಿವುಡ್ ನಟ ದಿನೋ ಮೋರಿಯಾ (Dino Morea) ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿನೋ ಮೋರಿಯಾ ಅವರು ‘ಏಜೆಂಟ್ ಸಿನಿಮಾದಲ್ಲಿ ದಿ ಗಾಡ್ ಎಂಬ ಮಾತ್ರ ಮಾಡಿದ್ದಾರೆ. ಬಾಲಿವುಡ್ನಲ್ಲಿ ‘ರಾಝ್’, ‘ಅಕ್ಸರ್’, ‘ಜೂಲಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ಈಗ ಅವರು ‘ಏಜೆಂಟ್’ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಅವರ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಉದ್ದ ಕೂದಲು, ಮುಖದ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಅವರು ರಗಡ್ ಆಗಿ ಪೋಸ್ ನೀಡಿದ್ದಾರೆ. ಆ ಮೂಲಕ ಚಿತ್ರದ ಬಗೆಗಿನ ಕೌತುಕ ಹೆಚ್ಚಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಏಜೆಂಟ್’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಏಪ್ರಿಲ್ 28ರಂದು ಈ ಚಿತ್ರ ತೆರೆಕಾಣಲಿದೆ.
‘ಏಜೆಂಟ್’ ಸಿನಿಮಾದ ಕಂಟೆಂಟ್ಗಳು ಈಗಾಗಲೇ ಜನರಿಗೆ ಇಷ್ಟ ಆಗಿವೆ. ಎರಡು ಹಾಡುಗಳ ಜನಮೆಚ್ಚುಗೆ ಗಳಿಸಿವೆ. ‘ರಾಮ ಶ್ರೀಕೃಷ್ಣ..’ ಹಾಡು ಅಖಿಲ್ ಅಭಿಮಾನಿಗಳನ್ನು ರಂಜಿಸುತ್ತಿದೆ. ಅದ್ದೂರಿಯಾಗಿ ನಿರ್ಮಾಣ ಆಗಿರುವ ಈ ಸಾಹಸ ಪ್ರಧಾನ ಸಿನಿಮಾವನ್ನು ರಾಮಬ್ರಹ್ಮಂ ಸುಂಕರ ‘ಎಕೆ ಎಂಟರ್ಟೈನ್ಮೆಂಟ್ಸ್’ ಬ್ಯಾನರ್ ಮೂಲಕ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ‘ಪ್ರೀತಿಸುವ ಮುನ್ನ ಯೋಚಿಸಿ’; ಅಕ್ಕಿನೇನಿ ಕುಟುಂಬದ ಕಡೆಯಿಂದ ರಿಲೇಶನ್ಶಿಪ್ ಟಿಪ್ಸ್
‘ಏಜೆಂಟ್’ ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಈ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನ ಮಾಡಿದ್ದಾರೆ. ರಸೂಲ್ ಎಲ್ಲೋರೆ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.