ದೂರಾದ ಪುರಿ ಜಗನ್ನಾಥ್-ಚಾರ್ಮಿ, 10 ವರ್ಷದ ‘ಗೆಳೆತನ’ ಅಂತ್ಯ?
Puri Jagannadh and Charmi: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಟಾಲಿವುಡ್ನ ಸ್ಟಾರ್ ನಟಿಯಾಗಿದ್ದ ಚಾರ್ಮಿ ಅವರುಗಳು ತಮ್ಮ 10 ವರ್ಷದ ‘ಗೆಳೆತನ’ವನ್ನು ಮುರಿದುಕೊಂಡಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸುವ ಎಲ್ಲ ಸಿನಿಮಾಗಳಿಗೂ ಚಾರ್ಮಿ ನಿರ್ಮಾಪಕಿ ಆಗಿದ್ದರು. ಆದರೆ ಈಗ ಇಬ್ಬರ ದಾರಿ ಬೇರಾಗಿದೆ.

ನಿರ್ದೇಶಕ ಪುರಿ ಜಗನ್ನಾಥ್ (puri jagannadh) ಮತ್ತು ನಟಿ ಚಾರ್ಮಿ ಟಾಲಿವುಡ್ನ ಬಲು ಆಪ್ತ ‘ಮಿತ್ರ’ರು. ಚಾರ್ಮಿ ತೆಲುಗು ಚಿತ್ರರಂಗದ ಟಾಪ್ 1 ನಟಿಯಾಗಿದ್ದವರು. ಪುರಿ ಜಗನ್ನಾಥ್ ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಪ್ರತಿಭಾವಂತ ನಿರ್ದೇಶಕ. ಇಬ್ಬರೂ ಸಹ ಹಲವು ವರ್ಷಗಳಿಂದ ಒಟ್ಟಿಗೆ ಸಿನಿಮಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪುರಿ ಜಗನ್ನಾಥ್ ಸಿನಿಮಾಗಳಿಗೆ ಚಾರ್ಮಿಯದ್ದೇ ಬಂಡವಾಳ ಮತ್ತು ನಿರ್ಮಾಣ ಸಹಕಾರ ಇರುತ್ತಿತ್ತು. ಇಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ಬಳಿಕ ಇದೀಗ ಈ ಇಬ್ಬರು ಪರಸ್ಪರ ಬೇರಾಗಿದ್ದಾರೆ ಎನ್ನಲಾಗುತ್ತಿದೆ.
ಪುರಿ ಹಾಗೂ ಚಾರ್ಮಿ ಒಟ್ಟಿಗೆ ಕೆಲಸ ಮಾಡಿದ್ದ ಹಲವು ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ‘ಲೈಗರ್’ ಅಂಥಹಾ ಸಿನಿಮಾಗಳು ಹೀನಾಯ ಸೋಲನ್ನು ಸಹ ಕಂಡಿವೆ. ಹಲವು ಏಳು-ಬೀಳುಗಳ ಬಳಿಕ ಇದೀಗ ಈ ಜೋಡಿ ದೂರಾಗುತ್ತಿದೆ. ಕೆಲ ಸುದ್ದಿಗಳ ಪ್ರಕಾರ, ಪುರಿ ಜಗನ್ನಾಥ್ ಜೊತೆಗೆ ಕೆಲಸ ಮಾಡಲು ಒಪ್ಪಿಕೊಂಡಿರುವ ಕೆಲ ನಟರು, ನಿರ್ಮಾಣದಲ್ಲಿ ಚಾರ್ಮಿ ಇರಬಾರದು ಎಂದು ಷರತ್ತು ವಿಧಿಸಿದ್ದರಂತೆ. ಅಲ್ಲದೆ, ‘ಲೈಗರ್’ ಸೋಲಿನ ಬಳಿಕ ಪುರಿ ಮತ್ತು ಚಾರ್ಮಿಯ ‘ಗೆಳೆತನ’ದಲ್ಲಿಯೂ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
2015 ರಿಂದಲೂ ಪುರಿ ಮತ್ತು ಚಾರ್ಮಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 2015 ರ ಬಳಿಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ ಎಲ್ಲ ಸಿನಿಮಾಗಳಿಗೆ ಚಾರ್ಮಿಯೇ ನಿರ್ಮಾಪಕಿ. ಚಾರ್ಮಿ ನಿರ್ಮಾಪಕಿ ಆಗಿ ಮಾತ್ರವೇ ಅಲ್ಲದೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಕೆಲಸ ನಿರ್ವಹಿಸಿದ್ದಾರೆ. 2015 ರಲ್ಲಿ ನಟನೆಯಿಂದ ಹಿಂದೆ ಸರಿದ ಚಾರ್ಮಿ, ಆಗಿನಿಂದ ಸಂಪೂರ್ಣವಾಗಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡರು.
ಇದನ್ನೂ ಓದಿ:‘ಕೆಡಿ’ ಸೆಟ್ಗೆ ಬಂದ ಪುರಿ ಜಗನ್ನಾಥ್, ಭಾವುಕರಾದ ರಕ್ಷಿತಾ ಪ್ರೇಮ್
ಚಾರ್ಮಿ ಹಾಗೂ ಪುರಿಯ ‘ಗೆಳೆತನ’ ಟಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚಾರ್ಮಿ ಹಾಗೂ ಪುರಿ ಜಗನ್ನಾಥ್ ಲಿವಿನ್ ರಿಲೇಷನ್ನಲ್ಲಿ ಇದ್ದಾರೆ ಎನ್ನಲಾಗಿತ್ತು. ಈ ವಿಷಯವನ್ನು ಈ ಇಬ್ಬರೂ ಸಹ ಬಹಿರಂಗವಾಗಿ ಒಪ್ಪಿಕೊಂಡಿದ್ದಿಲ್ಲ. ಪುರಿ ಜಗನ್ನಾಥ್ ಪತ್ನಿ, ಚಾರ್ಮಿ ಬಗ್ಗೆ ಹಲವು ಬಾರಿ ಬಹಿರಂಗ ಆರೋಪಗಳನ್ನು ಸಹ ಮಾಡಿದ್ದರು. ಅದಾದ ಬಳಿಕ ನಟಿ ಚಾರ್ಮಿ, ಪುರಿ ಜಗನ್ನಾಥ್ ಪುತ್ರನ ಎರಡು ಸಿನಿಮಾಗಳ ಮೇಲೆ ಬಂಡವಾಳ ಹೂಡಿ ನಿರ್ಮಾಣ ಸಹ ಮಾಡಿದರು.
ಈಗ ಬರೋಬ್ಬರಿ 10 ವರ್ಷದ ಬಳಿಕ ಈ ಇಬ್ಬರೂ ದೂರಾಗುವ ಸುದ್ದಿ ಕೇಳಿ ಬಂದಿದೆ. ಪುರಿ ಜಗನ್ನಾಥ್ ಪ್ರಸ್ತುತ ಇಬ್ಬರು ನಟರೊಡನೆ ಸಿನಿಮಾ ಚರ್ಚೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಕ್ಕಿನೇನಿ ನಾಗಾರ್ಜುನ ಅವರ ಮುಂದಿನ ಸಿನಿಮಾವನ್ನು ಪುರಿ ನಿರ್ದೇಶನ ಮಾಡಲಿದ್ದಾರೆ. 20 ವರ್ಷದ ಹಿಂದೆ ನಾಗಾರ್ಜುನ ನಟಿಸಿದ್ದ ‘ಶಿವಮಣಿ’ ಸಿನಿಮಾವನ್ನು ಪುರಿ ನಿರ್ದೇಶಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಈಗ ‘ಶಿವಮಣಿ’ ಸಿನಿಮಾದ ಮುಂದಿನ ಭಾಗವನ್ನು ಪುರಿ ನಿರ್ದೇಶನ ಮಾಡಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸಹ ಹೊಸ ಸಿನಿಮಾ ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ