ತೆಲುಗು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಕೆಲ ವಿಚಾರದ ಬಗ್ಗೆ ನೀಡುವ ಹೇಳಿಕೆಗಳು ಚಿತ್ರ ವಿಚಿತ್ರವಾಗಿರುತ್ತದೆ ಎಂಬುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಬಾರಿ ಆರ್ಜಿವಿ ಕಣ್ಣು ಫ್ರೆಂಡ್ಶಿಪ್ ಡೇ ಮೇಲೆ ಬಿದ್ದಿದೆ. ಈ ಬಗ್ಗೆ ಅವರು ವಿಚಿತ್ರ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.
ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಅಂತಾರಾಷ್ಟ್ರೀಯ ಫ್ರೆಂಡ್ಶಿಪ್ ಡೇ ಎಂದು ಆಚರಣೆ ಮಾಡಲಾಗುತ್ತದೆ. ಈ ಬಾರಿ ಫ್ರೆಂಡ್ಶಿಪ್ ಡೇ ಆಗಸ್ಟ್ 1ಕ್ಕೆ ಬಂದಿದೆ. ಈ ವಿಶೇಷ ದಿನದಂದು ಎಲ್ಲರೂ ತಮ್ಮ ಜೀವನದಲ್ಲಿ ಎದುರಾದ ಆಪತ್ಬಾಂಧವರನ್ನು ನೆನೆದಿದ್ದಾರೆ. ಟ್ವೀಟ್ಗಳನ್ನು ಮಾಡುವ ಮೂಲಕ ಶುಭಕೋರಿದ್ದಾರೆ. ಗೆಳೆಯರ ದಿನದ ಬಗ್ಗೆ ಸಾಕಷ್ಟು ಮೀಮ್ಗಳು ಕೂಡ ಹರಿದಾಡುತ್ತಿದೆ. ಈ ಮಧ್ಯೆ ರಾಮ್ ಗೋಪಾಲ್ ವರ್ಮಾ ಅವರ ಟ್ವೀಟ್ ವೈರಲ್ ಆಗಿದೆ. ಫ್ರೆಂಡ್ಶಿಪ್ ಡೇಅನ್ನು ಅವರು ವೈರಿಗಳ ದಿನ ಎಂದು ಕರೆದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ನೀವು ನಿಮ್ಮ ಗೆಳೆಯರಿಗೆ ಸಹಾಯ ಮಾಡಿದಿರಿ ಎಂದಿಟ್ಟುಕೊಳ್ಳು. ಮುಂದಿನ ಬಾರಿ ಆತ ನಿಮ್ಮ ಬಳಿಯೇ ಬರುತ್ತಾನೆ’ ಎಂದು ಬರೆದುಕೊಂಡು #HappyEnemyshipDay ಎನ್ನುವ ಹ್ಯಾಷ್ಟ್ಯಾಗ್ ಹಾಕಿದ್ದಾರೆ.
Enemies take ur strengths seriously and friends make u lose ur confidence in those strengths? HappyEnemyshipDay
— Ram Gopal Varma (@RGVzoomin) August 1, 2021
‘ವೈರಿಗಳಲ್ಲಿರುವ ಒಳ್ಳೆಯ ಗುಣ ಎಂದರೆ ಅವರು ನಿಮ್ಮನ್ನು ಅರ್ಧದಲ್ಲಿಯೇ ಬಿಟ್ಟು ಹೋಗುವುದಿಲ್ಲ. #HappyEnemyshipDay’ ಎಂದಿದ್ದಾರೆ ಆರ್ಜಿವಿ. ‘ಶತ್ರುಗಳು ನಿಮ್ಮ ಬಲವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಸ್ನೇಹಿತರು ನಿಮ್ಮ ವಿಶ್ವಾಸವನ್ನು ಕಳೆದು ಹಾಕುವಂತೆ ಮಾಡುತ್ತಾರೆ’ ಎಂದಿದ್ದಾರೆ. ಈ ಟ್ವೀಟ್ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿವೆ.
Good thing about enemies is that they can’t betray you like how friends do ?#HappyEnemyshipDay
— Ram Gopal Varma (@RGVzoomin) August 1, 2021
ಇದನ್ನೂ ಓದಿ: ಇದು ನನ್ನ ಬರ್ತ್ಡೇ ಅಲ್ಲ; ಡೆತ್ ಡೇ! ಹುಟ್ಟುಹಬ್ಬದ ದಿನವೇ ರಾಮ್ ಗೋಪಾಲ್ ವರ್ಮಾ ಶಾಕಿಂಗ್ ಮಾತು