ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು.

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?
ಮಂಜು-ದಿವ್ಯಾ ಸುರೇಶ್​
Edited By:

Updated on: Apr 19, 2021 | 8:27 AM

ಬಿಗ್​ ಬಾಸ್​ ಮನೆಯಲ್ಲಿ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲೇಬಾರದು. ಈ ಅಭಿಪ್ರಾಯ ಅಲ್ಲಿ ಪದೇಪದೇ ಕೇಳಿಬರುತ್ತಲೇ ಇರುತ್ತದೆ. ಹಾಗಾಗಿ ಮನೆ ಸೇರಿರುವ ಪ್ರತಿ ಸ್ಪರ್ಧಿ ಕೂಡ ಬಹಳ ಎಚ್ಚರಿಕೆಯಿಂದ ಆಡುತ್ತಾರೆ. ಇಂದು ಫ್ರೆಂಡ್​ ಆಗಿದ್ದವರು ನಾಳೆ ಬದಲಾಗಬಹುದು. ಇದಕ್ಕೆ ದಿವ್ಯಾ ಸುರೇಶ್​ ಉತ್ತಮ ಉದಾಹರಣೆ. ಮಂಜು ಪಾವಗಡ ಮಾಡಿದ ಸಹಾಯವನ್ನು ದಿವ್ಯಾ ಮರೆತುಬಿಟ್ಟಿದ್ದಾರೆ!

ಪ್ರತಿ ವಾರ ಕ್ಯಾಪ್ಟನ್​ ಆಗೋಕೆ ಟಾಸ್ಕ್​ ಒಂದನ್ನು ನೀಡಲಾಗುತ್ತದೆ. ಈ ಟಾಸ್ಕ್​ನಲ್ಲಿ ಗೆದ್ದವರು ಕ್ಯಾಪ್ಟನ್​ ಆಗುತ್ತಾರೆ. ಏಳನೇ ವಾರದ ಟಾಸ್ಕ್​ನಲ್ಲಿ ಬಾಯ್ಸ್​ ಹಾಸ್ಟೆಲ್​​, ಗರ್ಲ್ಸ್​ ಹಾಸ್ಟೆಲ್​ ಎಂದು ಬೇರ್ಪಡಿಸಲಾಗಿತ್ತು. ಈ ವೇಳೆ ಹುಡುಗರು ಹುಡುಗಿಯರಿಗೆ ಪತ್ರ ಬರೆಯಬೇಕು. ಹಾಸ್ಟೆಲ್​ ವಾರ್ಡನ್​ಗೆ ಆ ಪತ್ರಗಳು ಸಿಗದಂತೆ ಹೆಣ್ಣುಮಕ್ಕಳು ಕಾಪಾಡಿಕೊಳ್ಳಬೇಕು.

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು. ಅಚ್ಚರಿ ಎಂದರೆ, ದಿವ್ಯಾ ಸುರೇಶ್​ ಜತೆ ನಿಧಿ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರಂತೆ. ವೀಕೆಂಡ್​ನಲ್ಲಿ ಈ ವಿಚಾರ ಬಯಲಾಗಿದೆ.

ಯಾರ್ಯಾರು ಪತ್ರವನ್ನು ಎಲ್ಲಿಟ್ಟಿದ್ದಾರೆ ಎಂಬುದನ್ನು ನೀನು ಹೇಳಿದರೆ ನಿನ್ನ ಪತ್ರವನ್ನು ತೆಗೆದುಕೊಳ್ಳುವುದಿಲ್ಲ ಡೀಲ್​ ಅನ್ನು ದಿವ್ಯಾ ಸುರೇಶ್​ ಮುಂದಿಟ್ಟಿದ್ದರು ನಿಧಿ. ಇದಕ್ಕೆ ದಿವ್ಯಾ ಸುರೇಶ್​ ಒಪ್ಪಿಗೆ ಸೂಚಿಸಿದ್ದರು. ಈ ಒಪ್ಪಂದದಿಂದ ದಿವ್ಯಾ ಬಳಿಯೇ ಹೆಚ್ಚು ಪತ್ರಗಳು ಉಳಿದುಕೊಂಡಿದ್ದವು. ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಕೂಡ ಆಯ್ಕೆ ಆಗಿದ್ದರು.

ಈ ವಿಚಾರ ಹೊರ ಬರುತ್ತಿದ್ದಂತೆ ಮನೆಯವರಿಗೆ ಶಾಕ್​ ಆಗಿದೆ. ಆಗ, ದಿವ್ಯಾ ನಾನು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಮಂಜು ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ಮಂಜು ಅವರನ್ನೂ ಸಿಕ್ಕಿಸಿದ್ದಾರೆ. ಮಂಜು ಸಹಾಯ ಮಾಡಿದ್ದನ್ನು ಎಲ್ಲರ ಎದುರು ಹೇಳಿದ್ದು ಎಷ್ಟು ಸರಿ ಎಂದು ಮನೆಯವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!

ದಿವ್ಯಾ ಸುರೇಶ್​ಗೆ ಮಗಳು ಎಂದಿದ್ದು ಫೇಕ್​! ಚಕ್ರವರ್ತಿ ಚಂದ್ರಚೂಡ್​ ಅಸಲಿ ಮುಖ ಬಯಲು

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us