ದಿವ್ಯಾ ಸುರೇಶ್​ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್​!

ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ-ಅರವಿಂದ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇದನ್ನು ಇಬ್ಬರೂ ನೇರವಾಗಿ ಒಪ್ಪಿಕೊಂಡಿಲ್ಲ.

ದಿವ್ಯಾ ಸುರೇಶ್​ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್​!
ದಿವ್ಯಾ ಸುರೇಶ್​- ದಿವ್ಯಾ ಉರುಡುಗ-ಅರವಿಂದ್
Edited By:

Updated on: Mar 25, 2021 | 7:14 AM

ದಿವ್ಯಾ ಸುರೇಶ್​ ಬಂದ ಆರಂಭದಿಂದಲೂ ಮಂಜು ಪಾವಗಡ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಇದು ಮೂರು ವಾರ ಯಶಸ್ವಿಯಾಗಿ ಮುಂದುವರಿದಿತ್ತು. ಆದರೆ, ನಾಲ್ಕನೇ ವಾರ ಇದು ಸ್ವಲ್ಪ ಬದಲಾದಂತಿದೆ. ದಿವ್ಯಾ ಮಂಜು ಮೇಲೆ ಆಸಕ್ತಿ ತೋರಿದ್ದು ಪ್ರಚಾರಕ್ಕೋ ಎನ್ನುವ ಅನುಮಾನ ಕಾಡಿತ್ತು. ಈಗ ಇದು ಪ್ರೇಕ್ಷಕರಿಗೆ ನಿಜ ಅನಿಸೋಕೆ ಆರಂಭವಾಗಿದೆ. ಏಕೆಂದರೆ, ದಿವ್ಯಾ ಸುರೇಶ್​ ನಿಧಾನವಾಗಿ ಮಂಜು ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಅರವಿಂದ್ ಕೆಪಿ ಮೇಲೆ ಹೆಚ್ಚು ಇಂಟರೆಸ್ಟ್​ ತೋರುತ್ತಿದ್ದಾರೆ.

ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ-ಅರವಿಂದ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇದನ್ನು ಇಬ್ಬರೂ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಒಬ್ಬರ ಮೇಲೆ ಒಬ್ಬರು ಆಸಕ್ತಿ ಹೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈಗ ಇವರಿಬ್ಬರ ಪ್ರೀತಿಗೆ ದಿವ್ಯಾ ಸುರೇಶ್​ ವಿಲನ್​ ಆಗುತ್ತಾರಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗುತ್ತಿರುವುದು ದಿವ್ಯಾ ಸುರೇಶ್​ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಅನಿಸುತ್ತಿದೆ. ಹೀಗಾಗಿ ದಿವ್ಯಾ ಉರುಡುಗ- ಅರವಿಂದ್ ಒಂದಾಗಿದ್ದಾಗೆಲ್ಲ ಇವರು ಮಧ್ಯ ಬರುತ್ತಿದ್ದಾರೆ. ಇದು ಮನೆಯವರ ಗಮನಕ್ಕೂ ಬಂದಿದೆ.

ಇನ್ನು, ಅರವಿಂದ್​ ಮೈಮೇಲೆ ದಿವ್ಯಾ ಸುರೇಶ್​ ಬಂದು ಬಂದು ಬೀಳುತ್ತಿದ್ದಾರೆ. ಇದು ಅರವಿಂದ್​ಗೆ​ ಇಷ್ಟವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರು ದೂರ ದೂರ ಹೋಗುತ್ತಿದ್ದಾರೆ. ಬುಧವಾರ (ಮಾರ್ಚ್​ 24) ಹಾಗೆಯೇ ಆಗಿದೆ. ದಿವ್ಯಾ ಅರವಿಂದ್​ ಅವರ ಮೈಗೆ ಒರಗಿಕೊಂಡಿದ್ದರು. ಆಗ ಅವರಿಬ್ಬರ ಮಧ್ಯೆ ದಿವ್ಯಾ ಉರುಡುಗ ಕೂಡ ಬಂದರು.

ಸದ್ಯ ವೀಕ್ಷಕರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್​ ಫೇಮಸ್​ ಆಗಲು ಈ ರೀತಿ ಮಾಡುತ್ತಿದ್ದಾರಾ? ಎಲ್ಲರ ಗಮನ ನಮ್ಮ ಮೇಲೆ ಇರಬೇಕು ಎಂದು ಹೀಗೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ: BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us