ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ. ನಡುವೆ ಆಪ್ತತೆ ಬೆಳೆದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಅಷ್ಟಾಗಿ ದಿವ್ಯಾ ಜತೆ ಬೆರೆಯುತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.

ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​
Edited By:

Updated on: Apr 01, 2021 | 6:05 PM

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರ ಬಳಿ ದ್ವೇಷ ಕಟ್ಟಿಕೊಳ್ಳುತ್ತಿದ್ದಾರೆ. ಬಹುತೇಕ ಸ್ಪರ್ಧಿಗಳು ಪ್ರಶಾಂತ್​ ಎದುರು ನಗು ನಗುತ್ತಾ ಮಾತನಾಡಿದರೂ ಹಿಂದಿನಿಂದ ಅವರ ವಿರುದ್ಧ ಗಾಸಿಪ್​ ಮಾಡುತ್ತಿದ್ದಾರೆ. ಇದು ಪ್ರಶಾಂತ್​ ಸಂಬರಗಿಗೆ ಗೊತ್ತಿಲ್ಲ ಏಂದೇನೂ ಅಲ್ಲ. ಗೊತ್ತಿದ್ದರೂ, ಅವರು ಏನೂ ತಿಳಿದೇ ಇಲ್ಲ ಎನ್ನುವಂತೆ ಇದ್ದಾರೆ. ಈ ಮಧ್ಯೆ, ಕೆಲವರು ಪ್ರಶಾಂತ್​ ವಿರುದ್ಧ ನೇರವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಈಗ ಅಂತಹುದೇ ಘಟನೆ ಬಿಗ್​ ಬಾಸ್​ ಮನೆಯಲ್ಲಿ ನಡೆದಿದೆ. ಆರಂಭದಲ್ಲಿ ಪ್ರಶಾಂತ್ ಸಂಬರಗಿ ಆಪ್ತೆ ಎನಿಸಿಕೊಂಡಿದ್ದ ದಿವ್ಯಾ ಉರುಡುಗು ತಿರುಗಿ ಬಿದ್ದಿದ್ದಾರೆ.

ಪ್ರಶಾಂತ್​ ಸಂಬರಗಿ ಆರಂಭದ ದಿನಗಳಲ್ಲಿ ದಿವ್ಯಾ ಉರುಡುಗ ಜತೆ ಹೆಚ್ಚು ಆಪ್ತವಾಗಿರುತ್ತಿದ್ದರು. ಇದನ್ನು ನೋಡಿದ ಪ್ರೇಕ್ಷಕರು ಗಾಸಿಪ್​ ಆರಂಭಿಸಿದ್ದರು. ಅವರ ಸಂಬಂಧ ಎಂತಹುದು ಎಂದು ಅನೇಕರು ಕೇಳಿಕೊಂಡಿದ್ದರು. ಆದರೆ, ಅಚ್ಚರಿ ಎಂಬಂತೆ ದಿವ್ಯಾ ಉರುಡುಗ ನನ್ನ ತಂಗಿ ಇದ್ದಂತೆ ಎಂದು ಘೋಷಿಸಿದ್ದರು ಪ್ರಶಾಂತ್​.

ದಿವ್ಯಾ ಉರುಡುಗ-ಅರವಿಂದ್ ಕೆ.ಪಿ. ನಡುವೆ ಆಪ್ತತೆ ಬೆಳೆದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಅಷ್ಟಾಗಿ ದಿವ್ಯಾ ಜತೆ ಬೆರೆಯುತ್ತಿಲ್ಲ. ಅವರಿಬ್ಬರ ನಡುವೆ ಪ್ರೀತಿ-ಪ್ರೇಮವಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ನೇರವಾಗಿ ಪ್ರಶಾಂತ್​ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಈ ಬಗ್ಗೆ ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಬಿಟ್ಟಿದೆ. ಈ ಪ್ರೋಮೋದಲ್ಲಿ ಅರವಿಂದ್​, ಪ್ರಶಾಂತ್​ ಮೇಲೆ ಕೂಗಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್​, ನಿನ್ನ ಗರ್ಲ್​ಫ್ರೆಂಡ್​ ಮೇಲೆ ಕೈ ಹಾಕಿದ್ದಕ್ಕೆ ಬೇಜಾರು ಆಗಿರೋದಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ದಿವ್ಯಾ ಸಿಟ್ಟಾಗಿದ್ದಾರೆ. ಏಯ್​ ನೆಟ್ಟಗೆ ಮಾತನಾಡಿದ್ರೆ ಮಾತನಾಡುತ್ತೇನೆ. ನೀವು ಅರವಿಂದ್​ ಬಳಿ ನನ್ನ ಹೆಸರನ್ನು ಹೇಗೆ ಹೇಳಿದ್ರಿ? ನಾನು ಅರವಿಂದ್​ ಗರ್ಲ್​ಫ್ರೆಂಡ್​ ಆಗಿರಬಹುದು, ತಂಗಿ ಆಗಿರಬಹುದು ಅಥವಾ ಹೆಂಡತೀನೂ ಆಗಿರಬಹುದು. ನೀವು ನನ್ನ ಹೆಸರನ್ನು ಮಧ್ಯೆ ತರುವ ಹಾಗೇ ಇಲ್ಲ ಎಂದು ಪ್ರಶಾಂತ್​ಗೆ ಹೇಳಿದರು. ನಾನು ಹೇಳಿದ್ದರಲ್ಲಿ ತಪ್ಪೇನು ಇಲ್ಲ ಎನ್ನುವಂತೆ ಪ್ರಶಾಂತ್​ ಮಾತನಾಡಿದ್ದಾರೆ. ಆಗ ದಿವ್ಯಾ ಸುದೀಪ್​ ಕೊಡುವ ವಿಶೇಷ ಚಪ್ಪಾಳೆ ರೀತಿಯಲ್ಲೇ ಪ್ರಶಾಂತ್​ ಸಂಬರಗಿಗೆ ವಿಶೇಷವಾಗಿ ಚಪ್ಪಾಳೆ ಹೊಡೆದಿದ್ದಾರೆ.

ಇದನ್ನೂ ಓದಿ:Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು? 

(BBK8 Divya Uruduga and Prashanth Sambargi Talk Fight goes viral In Social Media )

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us